ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲಾಸ ಮಾನಸ ಸರೋವರ ಯಾತ್ರೆ: ನೋಂದಣಿ ಆರಂಭ; ಮಾ.23 ಕೊನೆಯ ದಿನ

Last Updated 21 ಫೆಬ್ರುವರಿ 2018, 13:15 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ಕೈಲಾಸ ಮಾನಸ ಸರೋವರ ಯಾತ್ರೆಗೆ ಫೆ.20ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಈ ಬಾರಿ ಮಾನಸ ಸರೋವರ ಯಾತ್ರೆ ಜೂನ್‌ 8ರಿಂದ ಸೆಪ್ಟೆಂಬರ್ 8ರವರೆಗೂ ನಿಗದಿಯಾಗಿದ್ದು, ಫೆ.20ರಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಎರಡು ಮಾರ್ಗಗಳ ಮೂಲಕ ಈ ಯಾತ್ರೆ ಕೈಗೊಳ್ಳಬಹುದಾಗಿದೆ. ಒಂದು ಸಿಕ್ಕಿಂನ ನಾಥೂ ಲಾ ಪಾಸ್‌ ಮೂಲಕ, ಇನ್ನೊಂದು ಉತ್ತರಾಖಂಡದ ಲಿಪುಲೆಖ್‌ ಪಾಸ್‌ ಮೂಲಕ. 2018ರ ಮಾರ್ಚ್‌ 23 ನೋಂದಣಿಗೆ ಕೊನೆಯ ದಿನವಾಗಿದೆ.

ಕನಿಷ್ಠ 18 ವರ್ಷ ಹಾಗೂ ಗರಿಷ್ಠ 70 ವರ್ಷ ವಯೋಮಾನದ ಯಾತ್ರಿಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶವಿದೆ.

ಲಿಪುಲೆಖ್‌ ಪಾಸ್‌: ಯಾತ್ರಿಗಳು ಈ ಮಾರ್ಗದಲ್ಲಿ ಕಾಲು ನಡೆಗೆಯಲ್ಲೂ ಸಾಗಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ₹1.6 ಲಕ್ಷ ಖರ್ಚು ಅಂದಾಜಿಸಲಾಗಿದೆ. ಒಟ್ಟು 24 ದಿನಗಳ ಯಾತ್ರೆಯು ‘ಓಂ ಪರ್ವತ’ದ ಹಾದಿಯಲ್ಲಿ ಸಾಗಲಿದೆ. ಈ ಬಾರಿ 18 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ತಂಡದಲ್ಲಿ 60 ಯಾತ್ರಿಕರು ಇರಲಿದ್ದಾರೆ.

ನಾಥೂ ಲಾ ಪಾಸ್‌: ಟಿಬೆಟ್‌ನ ಸುಂದರ ಪ್ರದೇಶಗಳ ಮೇಲೆ ಸಾಗುವ ಈ ಹಾದಿಯು ಹಿರಿಯ ನಾಗರಿಕರಿಗೆ ಸೂಕ್ತ ಎನ್ನಲಾಗಿದೆ. ವಾಹನಗಳಲ್ಲಿ ಈ ಮಾರ್ಗವಾಗಿ ಸಾಗಬಹುದಾಗಿದ್ದು, ಒಬ್ಬರಿಗೆ ₹2 ಲಕ್ಷ ಖರ್ಚು ಅಂದಾಜಿಸಲಾಗಿದೆ. 21 ದಿನಗಳ ಯಾತ್ರೆಗೆ 10 ತಂಡಗಳಿಗೆ ಅವಕಾಶವಿದೆ. ಪ್ರತಿ ತಂಡದಲ್ಲಿ 50 ಯಾತ್ರಾರ್ತಿಗಳು ಇರಲಿದ್ದಾರೆ.

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ: https://kmy.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT