ಗುರುವಾರ, 25–7–1968

7
ವಾರ

ಗುರುವಾರ, 25–7–1968

Published:
Updated:

ರಷ್ಯ ಭರವಸೆ ಇದ್ದರೂ ಪಾಕ್ ಬಗ್ಗೆ ಕಳವಳ

ನವದೆಹಲಿ, ಜು. 24– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದರಿಂದ ಭಾರತದೊಡನೆ ತನ್ನ ಮೈತ್ರಿಗಾಗಲಿ, ಭಾರತದ ಹಿತಾಸಕ್ತಿಗಳಿಗಾಗಲಿ ಬಾಧಕವಾಗದೆಂದು ರಷ್ಯ ಭರವಸೆ ಕೊಟ್ಟಿರುವುದಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ರಾಜ್ಯ ಸಭೆಗೆ ತಿಳಿಸಿದರು.

ಎರಡು ದಿನ ಈ ವಿಚಾರ ಕುರಿತು ಸಭೆಯಲ್ಲಿ ನಡೆದ ಚರ್ಚೆಗೆ ಪ್ರಧಾನಿ ಉತ್ತರ ಕೊಡುತ್ತ ಶಸ್ತ್ರಾಸ್ತ್ರ ಸರಬರಾಜು ಬಗೆಗೆ ಭಾರತದ ಕಳವಳವನ್ನು
ಪುನರುಚ್ಚರಿಸಿದರು.

‘ಸೋವಿಯತ್ ನೀತಿಯನ್ನು ನಾವು ಪೂರ್ಣ ಗ್ರಹಿಸಿದ್ದರೂ ಅವರ ಈ ನಿರ್ಧಾರ ನಮಗೆ ಕಳವಳವಾಗದಿರದು. ನಮ್ಮ ನೆರೆ ರಾಷ್ಟ್ರದ ಹಿಂದಿನ ನಡವಳಿಕೆ ನಮ್ಮ ಈ ಶಂಕೆಗೆ ಕಾರಣ’ ಎಂದರವರು.

ಗಡಿ ವಿವಾದಗಳ ಇತ್ಯರ್ಥಕ್ಕೆ ಜನಮತಗಣನೆ?

ನವದೆಹಲಿ, ಜು. 24– ಭಾಷಾವಾರು ಗಡಿ ವಿವಾದಗಳ ಇತ್ಯರ್ಥಕ್ಕಾಗಿ ಜನಮತ ಸಂಗ್ರಹಿಸಲು ಸಾರ್ವತ್ರಿಕ ಆಧಾರವೊಂದನ್ನು ರೂಪಿಸುವ ಪ್ರಶ್ನೆ ಸರಕಾರದ  ಪರಿಶೀಲನೆಯಲ್ಲಿದೆ ಎಂದು ಗೃಹಶಾಖೆ ಸ್ಟೇಟ್ ಸಚಿವ  ಶ್ರೀ ವಿ.ಸಿ. ಶುಕ್ಲಾ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !