ಗುರುವಾರ, 1–8–1968

7

ಗುರುವಾರ, 1–8–1968

Published:
Updated:
Deccan Herald

ಈ ವರ್ಷದ ಯೋಜನಾ ವೆಚ್ಚ 2337 ಕೋಟಿ ರೂ

ನವದೆಹಲಿ, ಜು. 31– ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಯೋಜನಾ ವೆಚ್ಚ 2337.43 ಕೋಟಿ ರೂಪಾಯಿಗಳು, ಅಂದರೆ ಕಳೆದ ವರ್ಷದ ಯೋಜನಾ ವೆಚ್ಚಕ್ಕಿಂತ 90 ಕೋಟಿ ರೂಪಾಯಿಗೂ ಸ್ವಲ್ಪ ಹೆಚ್ಚು.

ಭಾರತದಲ್ಲಿ ‘ಜಾಗ್ವಾರ್’ ಫೈಟರ್ ವಿಮಾನ ತಯಾರಿಕೆನವದೆಹಲಿ, ಜು. 31– ‘ಜಾಗ್ವಾರ್’ ಸೂಪರ್ ಸಾನಿಲ್ ಫೈಟರ್ ವಿಮಾನದ ಹಾರಾಟ ಪ್ರದರ್ಶನ ನೀಡಲು ಬ್ರಿಟಿಷ್ ಏರ್ ಕ್ರಾಫ್ಟ್ ಕಾರ್ಪೋರೇಷನ್ ಮುಂದೆ ಬಂದಿದೆಯೆಂದು ರಕ್ಷಣಾ ಉತ್ಪಾದನೆ ಶಾಖೆ ಸಚಿವ ಎಲ್.ಎನ್. ಮಿಶ್ರ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

‘ಎಂ.ಎಸ್‌.’ಗೆ ಅಸ್ವಸ್ಥತೆ

ಮದರಾಸ್, ಜು. 31– ಖ್ಯಾತ ಗಾಯಕಿ ಶ್ರೀಮತಿ ಸುಬ್ಬಲಕ್ಷ್ಮಿ ಅವರು ಅಸ್ವಸ್ಥರಾಗಿ ಹಾಸಿಗೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಅವರ ನಿಕಟವರ್ತಿಗಳಲ್ಲಿ ಇದು ಕಳವಳಕ್ಕೆ ಕಾರಣವಾಗಿದೆ.

ಇತ್ತೀಚಿನ ವಾರಗಳಲ್ಲಿ ಕಿಲ್‌ಪಾಕಿನಲ್ಲಿರುವ ಅವರ ನಿವಾಸಕ್ಕೆ ಸಂದರ್ಶಕರ ಪ್ರವಾಹವೇ ಹರಿದಿತ್ತು.

ಎಂಜಿನಿಯರ್‌ ಸಂಖ್ಯೆ ಹೆಚ್ಚದಂತೆ ಮುನ್ನೆಚ್ಚರಿಕೆ

ಬೆಂಗಳೂರು, ಜು. 31– ರಾಜ್ಯದಲ್ಲಿ ಎಂಜಿನಿಯರಿಂಗ್ ಪದವೀಧರರು  ಹಾಗೂ ಡಿಪ್ಲೊಮಾ ಪಡೆಯುವವರ ಸಂಖ್ಯೆ ಹೆಚ್ಚದಂತೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಭರವಸೆ ಕೊಟ್ಟಿದೆ.

ಆರ್.ಎಸ್.ಎಸ್. ರಾಜಕೀಯ ಸಂಸ್ಥೆ: ಚವಾಣ್

ನವದೆಹಲಿ, ಜು. 31– ರಾಷ್ಟ್ರೀಯ ಸ್ವಯಂ ಸೇವಕ ಸಂಘವು ‘ರಾಜಕೀಯ ಸಂಸ್ಥೆ’ ಎಂದು ಗೃಹಸಚಿವ ಚವಾಣ್‌ರವರು ಇಂದು ರಾಜ್ಯ ಸಭೆಯಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !