ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಿಂದ ‘ಜ್ಞಾನದೇಗುಲ’ ಶೈಕ್ಷಣಿಕ ಮೇಳ

Last Updated 21 ಮೇ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಒಂದೆಡೆ ಸೇರಿಸುವ ಬೃಹತ್‌ ಶೈಕ್ಷಣಿಕ ಮೇಳ ಮತ್ತೆ ಬರುತ್ತಿದೆ.

ಭವಿಷ್ಯದ ಶಿಕ್ಷಣದ ಬಗ್ಗೆ ಅನುಮಾನಗಳನ್ನು ಹೊಂದಿರುವ, ಹೊಸ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿರುವ ವಿದ್ಯಾರ್ಥಿಗಳಿಗೆ  ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ನಡೆಯುವ ‘ಜ್ಞಾನ ದೇಗುಲ ಶೈಕ್ಷಣಿಕ ಮೇಳದ 10ನೇ ಆವೃತ್ತಿ’ ಉತ್ತರ ಕಂಡುಕೊಳ್ಳಲು ದಾರಿ ಮಾಡಿಕೊಡಿಕೊಡುತ್ತಿದೆ.

ಇದೇ 26 ಮತ್ತು 27ರಂದು ಬೆಂಗಳೂರಿನ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನದಲ್ಲಿ ಮೇಳ ನಡೆಯಲಿದೆ. ಇದರಲ್ಲಿ ರಾಜ್ಯದ ಹೆಸರಾಂತ ಮತ್ತು ಶೈಕ್ಷಣಿಕ ರಂಗದಲ್ಲಿ ಗುಣಮಟ್ಟದ ಸಾಧನೆ ಮಾಡಿರುವ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ.

ಹೊಸ ಕೋರ್ಸ್‌ಗಳು, ಭವಿಷ್ಯದ ವೃತ್ತಿ ಬದುಕಿಗೆ ಪೂರಕವಾದ ಕೋರ್ಸ್‌ಗಳ ಮಾಹಿತಿ ಸಿಗಲಿದೆ. ಜತೆಗೆ ಶಿಕ್ಷಣ ತಜ್ಞರೊಂದಿಗೆ ಸಂವಾದ ಮತ್ತು ಅವರಿಂದ ಸಲಹೆಗಳನ್ನು ಪಡೆಯಲು ಅವಕಾಶವಿದೆ. ಸುಲಭದಲ್ಲಿ ಶೈಕ್ಷಣಿಕ ಸಾಲ ಪಡೆಯುವುದನ್ನು ತಿಳಿಯಬಹುದು. ಮೇಳಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಭಾಗವಹಿಸುವ ಸಂಸ್ಥೆಗಳು: ಸಿಎಂಆರ್ ವಿಶ್ವವಿದ್ಯಾಲಯ, ಗೀತಮ್‌ ವಿಶ್ವವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ದಯಾನಂದ ಸಾಗರ ವಿಶ್ವವಿದ್ಯಾಲಯ, ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ಅಮಿಟಿ ಶಿಕ್ಷಣ ಸಂಸ್ಥೆ, ಆಚಾರ್ಯ ಶಿಕ್ಷಣ ಸಂಸ್ಥೆ, ಕೆಂಬ್ರಿಜ್‌ ತಾಂತ್ರಿಕ ಶಿಕ್ಷಣ ಸಂಸ್ಥೆ, ಎಂ.ಎಸ್‌.ಎಂಜಿನಿಯರಿಂಗ್‌ ಕಾಲೇಜು, ಎಚ್‌ಕೆಬಿಕೆ ಎಂಜಿನಿಯರಿಂಗ್‌ ಕಾಲೇಜು, ಜೆಜಿಐ ಶಿಕ್ಷಣ ಸಂಸ್ಥೆಗಳು,  ದಿಕ್ಷಾ ಶಿಕ್ಷಣ ಸಂಸ್ಥೆ, ಆದಿಚುಂಚನಗಿರಿ ಎಂಜಿನಿಯರಿಂಗ್ ಕಾಲೇಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT