ಕಾಶ್ಮೀರ ಭಾರತದ ಭಾಗ: ಷೇಕ್‌ಗೆ ಜೆ.ಪಿ. ಸ್ಪಷನೆ

7
ಶುಕ್ರವಾರ

ಕಾಶ್ಮೀರ ಭಾರತದ ಭಾಗ: ಷೇಕ್‌ಗೆ ಜೆ.ಪಿ. ಸ್ಪಷನೆ

Published:
Updated:

ಕಾಶ್ಮೀರ ಭಾರತದ ಭಾಗ: ಷೇಕ್‌ಗೆ ಜೆ.ಪಿ. ಸ್ಪಷನೆ

ಶ್ರೀನಗರ, ಅ. 10– ಕಾಶ್ಮೀರ ಪ್ರಶ್ನೆಯನ್ನು ಹೀಗೆಯೇ ಅನಿಶ್ಚಿತ ಪರಿಸ್ಥಿತಿಯಲ್ಲಿ ಮುಂದುವರಿಸಿ, ಷೇಖ್ ಅಬ್ದುಲ್ಲಾರವರನ್ನು ಉಪೇಕ್ಷಿಸುತ್ತಾ ಹೋದರೆ ಎಣಿಕೆಗೆ ಮೀರಿದ ಪರಿಣಾಮ ಉಂಟಾಗುವುದೆಂದು ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.

ಜನಮತ ಗಣನೆ ರಂಗದ ಆಶ್ರಯದಲ್ಲಿ ಷೇಖ್ ಅಬ್ದುಲ್ಲಾ ಅವರು ಏರ್ಪಡಿಸಿರುವ ಜಮ್ಮು–ಕಾಶ್ಮೀರದ ರಾಜ್ಯದ ಜನತಾ ಸಮ್ಮೇಳನವನ್ನು ಉದ್ಘಾಟಿಸಿದ ಅವರು ಕಾಶ್ಮೀರವನ್ನು ಭಾರತ ಗಣರಾಜ್ಯದ ಎಲ್ಲೆಯ ಹೊರಗಿರಿಸುವಂಥ ಪರಿಹಾರ ಸೂತ್ರವನ್ನು ತಳ್ಳಿ ಹಾಕಿದರು.

ಕೇರಳದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕಾಂಗ್ರೆಸ್ ವರಿಷ್ಠರ ವಿರೋಧ

ನವದೆಹಲಿ, ಅ. 10– ಕೇರಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂಬ ಸಲಹೆಗೆ ಕೇಂದ್ರ ಕಾಂಗ್ರೆಸ್ ನಾಯಕರು ಬೆಂಬಲ ನೀಡುತ್ತಿಲ್ಲ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಕಾಲದಲ್ಲಿ ಇಲ್ಲಿ ಸಮಾವೇಶಗೊಂಡಿದ್ದ ಕೆಲವು ಪ್ರದೇಶ ನಾಯಕರುಗಳು ಕೇರಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂಬ ಸಲಹೆಯನ್ನು ಸೂಚಿಸಿದರಾದರೂ ಕೇಂದ್ರ ನಾಯಕರು ಆ ಸಲಹೆಗೆ ಅಷ್ಟಾಗಿ ಬೆಂಬಲ ನೀಡುತ್ತಿಲ್ಲ.

ಕೇರಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುವುದು ಕಾಂಗ್ರೆಸ್ ಸಂಸ್ಥೆಯ ದೀರ್ಘಾವಧಿ ಹಿತದೃಷ್ಟಿಯಿಂದ ವಿಹಿತವಲ್ಲವೆಂದು ಹಿರಿಯ ಕಾಂಗ್ರೆಸ್ ನಾಯಕರು ಇಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !