ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ರಾಷ್ಟ್ರಪತಿ ಚುನಾವಣೆಗೆ ಹೊಸ ತಿರುವು

ಮಂಗಳವಾರ, 12–8–1969
Last Updated 11 ಆಗಸ್ಟ್ 2019, 16:53 IST
ಅಕ್ಷರ ಗಾತ್ರ

ರಾಷ್ಟ್ರಪತಿ ಚುನಾವಣೆಗೆ ಹೊಸ ತಿರುವು: ಕಾಂಗ್ರೆಸ್ ಎಂ.ಪಿ.ಯಿಂದ ಗಿರಿಗೆ ಬಹಿರಂಗ ಬೆಂಬಲ ಘೋಷಣೆ

ನವದೆಹಲಿ, ಆ. 11– ರಾಷ್ಟ್ರಪತಿ ಚುನಾವಣೆಯಲ್ಲಿ ಶ್ರೀ ಗಿರಿ ಅವರಿಗೆ ಕಾಂಗ್ರೆಸ್ ಸದಸ್ಯರಲ್ಲಿ ಬೆಂಬಲ ಹೆಚ್ಚುತ್ತಿದೆಯೆಂಬ ವರದಿಗಳಿಂದ ಲಾಬಿಯಲ್ಲಿ ಇಂದು ಉದ್ವೇಗ ತುಂಬಿತ್ತು.

ಶ್ರೀ ಸಂಜೀವರೆಡ್ಡಿ ಅವರ ಉಮೇದುವಾರಿಕೆಗೆ ಅಸಮ್ಮತಿ ಸೂಚಿಸಿ ಹತ್ತಾರು ಜನ ಕಾಂಗ್ರೆಸ್ ಸದಸ್ಯರು ನಾಳೆ ಸಂಯುಕ್ತ ಮನವಿಯೊಂದಕ್ಕೆ ಸಹಿ ಹಾಕಬಹುದೆಂದು ಒಂದು ಕಡೆ ಸೂಚನೆಗಳು ಹೆಚ್ಚುತ್ತಿದ್ದರೆ, ಮತ್ತೊಂದು ಕಡೆ ಇನ್ನೂ ಒಬ್ಬ ಕಾಂಗ್ರೆಸ್ಸಿನ ಲೋಕಸಭಾ ಸದಸ್ಯರು ವಿ.ವಿ. ಗಿರಿ ಅವರಿಗೆ ಮತದಾನ ಮಾಡಲು ತಾವು ಉದ್ದೇಶಿಸಿರುವುದಾಗಿ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

***

ಭಾರಿ ಮೊತ್ತದ ನೋಟುಗಳ ಚಲಾವಣೆ ರದ್ದು ವದಂತಿ ಶುದ್ಧ ಸುಳ್ಳು: ಇಂದಿರಾ

ನವದೆಹಲಿ, ಆ. 11– ಭಾರಿ ಮೊತ್ತದ ನೋಟುಗಳ ಚಲಾವಣೆ ರದ್ದು ಮಾಡಲಾಗುವುದೆಂಬ ವದಂತಿಯನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಮೊಳಕೆಯಲ್ಲೇ ಚಿವುಟಿ ಹಾಕಿದರು.

ವದಂತಿ ಶುದ್ಧ ಸುಳ್ಳು ಹಾಗೂ ಸರಿಯಾದುದಲ್ಲ ಎಂದು ಶ್ರೀಮತಿ ಇಂದಿರಾಗಾಂಧಿ ಹೇಳಿದರು. ಸ್ಥಳೀಯ ವರ್ತಕರ ಜತೆ
ಮಾತನಾಡುತ್ತಿದ್ದ ಅವರು ಶ್ರೀಸಾಮಾನ್ಯ ನಿಗೆ ತೊಂದರೆಯಾಗುವಂತಹ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT