ಶನಿವಾರ, ಆಗಸ್ಟ್ 24, 2019
27 °C
ಶುಕ್ರವಾರ

ರೆಡ್ಡಿ ಪರ ಮನವಿಗೆ ಪುನಃ ಇಂದಿರಾ ನಕಾರ

Published:
Updated:

ರೆಡ್ಡಿ ಪರ ಮನವಿಗೆ ಪುನಃ ಇಂದಿರಾ ನಕಾರ

ನವದೆಹಲಿ, ಆ. 14– ರಾಷ್ಟ್ರಪತಿ ಸ್ಥಾನಕ್ಕೆ ಪಕ್ಷದ ಅಧಿಕೃತ ಅಭ್ಯರ್ಥಿ ಶ್ರೀ ಸಂಜೀವ ರೆಡ್ಡಿಯವರಿಗೆ ಮತದಾನ ಮಾಡುವಂತೆ ಕಾಂಗ್ರೆಸ್ ಎಂ.ಪಿ.ಗಳಲ್ಲಿ ಮನವಿ ಮಾಡಿ ಕೊಳ್ಳಲು ಪ್ರಧಾನಿ ಇಂದಿರಾ ಗಾಂಧಿ ನಿರಾಕರಿಸಿದ್ದಾರೆ. ಇಂದು ರಾತ್ರಿ ನಡೆದ ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಕಾರ್ಯನಿರ್ವಾಹಕ ಸಮಿತಿಯ ಪ್ರಕ್ಷುಬ್ಧ ಗೊಂದಲಮಯ ಸಭೆಯಲ್ಲಿ ವ್ಯಕ್ತಪಟ್ಟ ಸ್ಪಷ್ಟ ಅಂಶ ಇದೊಂದೆ.

ಮತದಾರರಲ್ಲಿ ಪ್ರಧಾನಿಯವರು ಮನವಿ ಮಾಡಿಕೊಳ್ಳಬೇಕೆಂಬುದಕ್ಕೆ ಬಹುಮತಾಭಿಪ್ರಾಯವಿದೆ ಎಂದು ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾದ ಶ್ರೀ ಶಿವಾಜಿರಾವ್ ದೇಶಮುಖ್ ಹೇಳಿದರು. ಆದರೆ ಇನ್ನೊಬ್ಬ ಕಾರ್ಯದರ್ಶಿ ಶ್ರೀ ಶಂಕರಾನಂದ್‌ರವರು ಇದನ್ನು ನಿರಾಕರಿಸಿದರು. ಶ್ರೀಕೃಷ್ಣಕಾಂತ್ ಮತ್ತು ಕಾರ್ತಿಕೇಯನ್‌ ರವರೂ ಮನವಿ ಸಲ್ಲಿಸುವುದನ್ನು ವಿರೋಧಿಸಿ ಶಂಕರಾನಂದ್‌ರನ್ನೂ ಬೆಂಬಲಿಸಿದರು.

ಕಾರ್ಯತತ್ಪರತೆಗೆ ಕರೆ

ನವದೆಹಲಿ, ಆ. 14– ಜವಾಬ್ದಾರಿಯುತ ವಾಗಿ ಚಿಂತಿಸುವುದು ಮತ್ತು ಕ್ರಿಯಾಶೀಲ ರಾಗುವುದು, ಪ್ರಜಾಸತ್ತೆಯನ್ನು ಉಳಿಸು ವುದಕ್ಕೆ ಇಂದು ಅಗತ್ಯವಾಗಿದೆ ಎಂದು ಹಂಗಾಮಿ ರಾಷ್ಟ್ರಪತಿ ಎಂ. ಹಿದಾಯತ್ ಉಲ್ಲಾ ಅವರು ರಾಷ್ಟ್ರಕ್ಕೆ ಇಂದು ನೀಡಿದ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಕರೆಯಿತ್ತಿದ್ದಾರೆ.

ಆಕಾಶವಾಣಿಯ ಮೂಲಕ ನಾಡಿನ ಜನತೆಗೆ ಈ ಸಂದೇಶವಿತ್ತ ಹಂಗಾಮಿ ರಾಷ್ಟ್ರಪತಿ ‘ನಮ್ಮ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಯನ್ನು ರಕ್ಷಿಸಿಕೊಳ್ಳಲು ನಾವು ಇಂದು ಪುನಃ ಪ್ರತಿಜ್ಞೆ ತೊಡುತ್ತೇವೆ’ ಎಂದರು.

Post Comments (+)