ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 19–10–1969

ಭಾನುವಾರ
Last Updated 18 ಅಕ್ಟೋಬರ್ 2019, 17:15 IST
ಅಕ್ಷರ ಗಾತ್ರ

ಭಯಪೀಡಿತ ಪತ್ರಿಕೆಗಳು

ಬೆಂಗಳೂರು, ಅ. 18– ಭಾರತದಲ್ಲಿ ‘ಒಂದೆರಡು’ ಪತ್ರಿಕೆಗಳನ್ನು ಬಿಟ್ಟರೆ ಉಳಿದ ಪತ್ರಿಕೆಗಳು ಭಯಪೀಡಿತವಾಗಿರುವಂತೆ ಕಂಡುಬರುವುದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ಪತ್ರಿಕೆಗಳು ಹೆಚ್ಚು ಸ್ವಾತಂತ್ರ್ಯದಿಂದ ವರ್ತಿಸಬೇಕು. ಭಯಪೀಡಿತವಾಗಿರುವಂತೆ ಕಂಡುಬರುತ್ತಿವೆ’ ಎಂದು ವರದಿಗಾರ
ರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಪ್ರ: ಯಾವ ರೀತಿಯ ಭಯ?

ಉ: ಅದನ್ನು ತಿಳಿಯಬೇಕಾದರೆ ನೀವು ದೆಹಲಿಯಲ್ಲಿರಬೇಕಾಗಿತ್ತು.

ಬೇಗ ಅಸಮತೆ ಅಳಿಸದಿದ್ದರೆ ದೇಶದಲ್ಲಿ ಹಿಂಸೆಯ ದಳ್ಳುರಿ–ಜೆ.ಪಿ. ಎಚ್ಚರಿಕೆ

ಬೆಂಗಳೂರು, ಅ. 18– ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯೇ ಹಿಂಸಾಕೃತ್ಯಗಳಿಗೆ ಪ್ರೇರಕ ಎಂದು ಇಂದಿಲ್ಲಿ ಹೇಳಿದ ಸರ್ವೋದಯ ನಾಯಕ ಶ್ರೀ ಜಯಪ್ರಕಾಶ್‌ ನಾರಾಯಣ್‌ ಅವರು ‘ಈ ಅಸಮಾನತೆ
ಯನ್ನು ಹೋಗಲಾಡಿಸಲು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹಿಂಸೆಯ ದಳ್ಳುರಿ ದೇಶವನ್ನೇ ಆವರಿಸೀತು’ ಎಂದು ಎಚ್ಚರಿಕೆ ನೀಡಿದರು.

ಇದಕ್ಕಾಗಿ ಯುವಕರನ್ನು ದೂರಿ ನಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT