ಶುಕ್ರವಾರ, ನವೆಂಬರ್ 22, 2019
26 °C
ಭಾನುವಾರ

ಭಾನುವಾರ, 2.11–1969

Published:
Updated:

ಕಾಂಗ್ರೆಸ್‌ನಲ್ಲಿ ಸಂಪೂರ್ಣ ಒಡಕು; ಪಕ್ಷದ ಹತೋಟಿಗೆ ಹೋರಾಟ

ದೆಹಲಿ, ನ. 1– ಕಾಂಗ್ರೆಸ್ ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯರಲ್ಲಿ ಎರಡು ಗುಂಪುಗಳಾಗಿ ಇಂದು ಏಕಕಾಲದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿದ ಪರಿಣಾಮವಾಗಿ, ಹಿರಿಯ ಕಾಂಗ್ರೆಸ್ ಸಂಸ್ಥೆಯು ಇಂದು ಹೆಚ್ಚೂ ಕಡಿಮೆ ಎರಡಾಗಿ ಒಡೆದಿದೆ. ಈಗ ನಡೆದಿರುವುದು ಪಕ್ಷದ ಮೇಲೆ ಹತೋಟಿ ಪಡೆಯುವ ಪ್ರಯತ್ನ. ಅದಕ್ಕಾಗಿ ಈ ಎರಡು ಗುಂಪುಗಳೂ ಹಣಾಹಣಿಗೆ ಅಣಿಯಾಗಿವೆ.

ಒಂದು ಗುಂಪಿನ ಸಭೆಗೆ ಶ್ರೀ ಎಸ್. ನಿಜಲಿಂಗಪ್ಪನವರೂ ಇನ್ನೊಂದು ಗುಂಪಿನ ಸಭೆಗೆ ಶ್ರೀಮತಿ ಇಂದಿರಾ ಗಾಂಧಿಯವರೂ ಅಧ್ಯಕ್ಷರಾಗಿದ್ದರು. ನಿಜಲಿಂಗಪ್ಪನವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕೆ. ಕಾಮರಾಜ್, ಮೊರಾರಜಿ ದೇಸಾಯ್, ಕೆ.ಸಿ. ಅಬ್ರಹಾಂ, ಹಿತೇಂದ್ರ ದೇಸಾಯ್ ಮೊದಲಾದವರು, ಇಂದಿರಾ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದ ಸಭೆ
ಯಲ್ಲಿ ಸಿ. ಸುಬ್ರಮಣ್ಯಂ, ಜಿ.ಎಲ್. ನಂದ, ವೈ.ಬಿ. ಚವಾಣ್ ಮುಂತಾದವರಿದ್ದರು.

ರಾಜ್ಯದ ಅಭ್ಯುದಯ, ದೇಶದ ಪ್ರಗತಿ: ಕನ್ನಡಿಗರಿಗೆ ಧರ್ಮವೀರರ ಕರೆ

ಬೆಂಗಳೂರು, ನ. 1– ರಾಜ್ಯದ ಪ್ರತಿ ಪ್ರಜೆಯ ಬದುಕನ್ನೂ ಆನಂದಮಯವಾಗಿ ಮಾಡುವ ಸ್ಥಿತಿಯುಂಟು ಮಾಡುವುದಕ್ಕೆ ರಾಜ್ಯೋತ್ಸವವನ್ನು ಸಮರ್ಪಣಾ ಅವಕಾಶವೆಂದು ಭಾವಿಸಬೇಕೆಂದು ರಾಜ್ಯಪಾಲ ಧರ್ಮವೀರರವರು ಇಂದು ಕರೆ ನೀಡಿದರು.

‘ಈ ಮಹಾಕಾರ್ಯ ಸಾಧನೆಗೆ ಇಂದು ಪಣ ತೊಡುವ’ ಎಂದು 13ನೇ ಕನ್ನಡ ರಾಜ್ಯೋತ್ಸವ ಆಚರಣೆಗೆ ಕಂಠೀರವ ಸ್ಟೇಡಿಯಂನಲ್ಲಿ ಸೇರಿದ್ದ ಭಾರಿಸಭೆಯನ್ನುದ್ದೇಶಿಸಿ ತಿಳಿಸಿದರು.

 

ಪ್ರತಿಕ್ರಿಯಿಸಿ (+)