ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 3–11–1969

Last Updated 2 ನವೆಂಬರ್ 2019, 20:17 IST
ಅಕ್ಷರ ಗಾತ್ರ

ಪಕ್ಷದ ಸಂಘಟನೆಗಾಗಿ ಅಧ್ಯಕ್ಷರೊಡನೆ ಸಹಕರಿಸಲು ಪ್ರಧಾನಿಗೆ ಕಾರ್ಯಸಮಿತಿ ಮನವಿ
ನವದೆಹಲಿ, ನ. 2–
ಪಕ್ಷವು ಶಿಸ್ತು, ಸಂಘಟನೆಗಳಿಂದ ಕೂಡಿರುವಂತೆ ಮಾಡಲು ಕಾಂಗ್ರೆಸ್ ಅಧ್ಯಕ್ಷರೊಡನೆ ಸಹಕರಿಸಬೇಕೆಂದು ಶ್ರೀ ಎಸ್. ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಇಂದು ಇಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಮನವಿ ಮಾಡಿತು.

ಯಾವ ಉದ್ದೇಶವೂ ಇಲ್ಲದೆ ಶಾಂತರೀತಿಯಲ್ಲಿ ಇರತಕ್ಕ ಸಮಸ್ಯೆಯನ್ನು ಪರಿಶೀಲಿಸಿ ಅಧ್ಯಕ್ಷರೊಡನೆ ಸಹಕರಿಸಬೇಕೆಂದು
ಕಾರ್ಯಕಾರಿ ಸಮಿತಿಯನ್ನು ಬಹಿಷ್ಕರಿಸಿರುವ ಪ್ರಧಾನ ಮಂತ್ರಿಗಳು ಮತ್ತು ಅವರ ಸಹೋದ್ಯೋಗಿಗಳಿಗೆ ಮನವಿಮಾಡಿಕೊಳ್ಳಲಾಗಿದೆ.

‘ಭಾರಿ ತಪ್ಪು’ ತಿದ್ದುಕೊಳ್ಳಿ: ಎಸ್ಸೆನ್‌ಗೆ ಇಂದಿರಾ ಬೆಂಬಲಿಗರ ಸವಾಲು
ನವದೆಹಲಿ, ನ. 2–
ಸಹಕಾರಕ್ಕೆ ಮನವಿ ಮಾಡಿಕೊಳ್ಳುವುದಕ್ಕೆ ಬದಲಾಗಿ ಕಾರ್ಯಸಮಿತಿಯಿಂದ ಮೂವರು ಸದಸ್ಯರನ್ನು ತೆಗೆದು ಹಾಕುವುದರಿಂದ ಮಾಡಲಾದ ಭಾರಿ ತಪ್ಪನ್ನು ಸರಿಪಡಿಸಬೇಕೆಂದು ಪ್ರಧಾನಮಂತ್ರಿ ಇಂದಿರಾಗಾಂಧಿ ಮತ್ತು ಅವರ ಬೆಂಬಲಿಗರು ಇಂದು ಇಲ್ಲಿ ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪ ಅವರಿಗೆ ಕರೆ ನೀಡಿದರು.

‘ಅಕ್ರಮ ಎ.ಐ.ಸಿ.ಸಿ.ಯಲ್ಲಿ ಭಾಗವಹಿಸಿದರೆ ಶಿಸ್ತಿನ ಕ್ರಮ: ಕಾರ್ಯಕಾರಿ ಸಮಿತಿ ಎಚ್ಚರಿಕೆ’
ನವದೆಹಲಿ, ನ. 2–
ಪ್ರಧಾನಿ ಬೆಂಬಲಿಗರು ಈ ತಿಂಗಳು 22 ಮತ್ತು 23 ರಂದು ಕರೆದಿರುವ ಎ.ಐ.ಸಿ.ಸಿ. ಅಧಿವೇಶನವು ‘ಪಕ್ಷದ ಅಂಗ ರಚನೆಗೆ ವಿರೋಧವಾದದ್ದು’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಘೋಷಿಸಿತು. ಈ ಸಭೆಯಲ್ಲಿ ಭಾಗವಹಿಸುವವರು ಶಿಸ್ತಿನ ಕ್ರಮಕ್ಕೆ ತುತ್ತಾಗಬೇಕಾಗುತ್ತದೆಂದೂ ಸಭೆ ಎಚ್ಚರಿಕೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT