ಬುಧವಾರ, ನವೆಂಬರ್ 20, 2019
23 °C

ಶುಕ್ರವಾರ, 7–11–1969

Published:
Updated:

ಇಂದು  ಇಂದಿರಾ ಗಾಂಧಿ– ನಿಜಲಿಂಗಪ್ಪ ಸಹಭೋಜನ
ನವದೆಹಲಿ, ನ. 6–
ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ನಾಳೆ ಮಧ್ಯಾಹ್ನ ಒಂದು ಗಂಟೆಗೆ ಪ್ರಧಾನಿ ನಿವಾಸದಲ್ಲಿ ಸಹಭೋಜನ ಸ್ವೀಕರಿಸುತ್ತಾರೆ.

ಸುಮಾರು ಒಂದು ತಿಂಗಳ ಅವಧಿಯಲ್ಲಿ ಇದೇ ಅವರ ಮೊದಲ ಭೇಟಿ. ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ವರ್ಣಿಸಿದಂತೆ ಇದು ಇಡೀ ದಿನದ ಸಭೆ–ಸಮಾಲೋಚನೆಗಳ ನಂತರದ ‘ಸತ್ಪರಿಣಾಮ.’ ಯಾವುದೇ ಪೂರ್ವಭಾವಿ ಷರತ್ತುಗಳು ಇಲ್ಲದೆ ಈ ಮಾತುಕತೆ ನಡೆಯುವುದೆಂದು ಪಾಟೀಲ್ ತಿಳಿಸಿದರು.

ಇಡೀ ದಿನ ಸಂಧಾನ
ನವದೆಹಲಿ, ನ. 6–
ಕಾಂಗ್ರೆಸ್ ಪಕ್ಷ ಒಡೆಯುವುದನ್ನು ತಪ್ಪಿಸಲು ಮೈಸೂರಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಹಾಗೂ ಕೇರಳ ಪ‍್ರದೇಶ ಕಾಂಗ್ರೆಸ್ ನಾಯಕ ಕೆ.ಸಿ. ಅಬ್ರಹಾಂ ಅವರು ಇಂದು ನಡೆಸಿದ ಕೊನೆಯ ಗಳಿಗೆಯ ಪ್ರಯತ್ನ ಫಲಿಸಿತು.

ಈಗಲೂ ಸಾಧ್ಯ
ನವದೆಹಲಿ, ನ. 6–
‘ಕಾಂಗ್ರೆಸ್‌ನಲ್ಲಿ ಐಕ್ಯ ಈಗಲೂ ಸಾಧ್ಯ’– ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರ ಈ ನಂಬಿಕೆ ‘ಸ್ಟೇಟ್ಸ್‌ಮನ್’ ಪತ್ರಿಕೆ ಇಂದು ವರದಿ ಮಾಡಿರುವ ಸಂದರ್ಶನವೊಂದರ ಸಾರಾಂಶ.

‘ಕಾಂಗ್ರೆಸ್ ಕಾರ್ಯಕರ್ತರಾಗಿ ಜನತೆಗೆ ನಮ್ಮ ಹೊಣೆಗಾರಿಕೆಗಳಿವೆ. ದೊಡ್ಡ ವಿಷಯ ಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಷ್ಟವಲ್ಲದ ಅಥವಾ ಕೆಟ್ಟದಾದ ಕೆಲ ಸಂಗತಿಗಳು ನಡೆದಿರಬಹುದು. ಒಗ್ಗಟ್ಟನ್ನು ಸಾಧಿಸುವ ಹಾದಿಯಲ್ಲಿ ಇವು ಅಡ್ಡಿಯಾಗ ಬಾರದು. ಏನೇ ನಡೆದಿದ್ದರೂ ನಾವು ಮರೆಯಬೇಕು’ ಎಂದೂ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)