ಸೋಮವಾರ, ಜನವರಿ 27, 2020
22 °C
ಬುಧವಾರ

ಬುಧವಾರ, 24–12–1969

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಅರಮನೆ ನೌಕರರ ಮುಷ್ಕರ

ಮೈಸೂರು, ಡಿ. 23– ತಮ್ಮ ಗರಿಷ್ಠ ಸಂಬಳವಾದ 59 ರೂ.ಗಳನ್ನು ತುಟ್ಟಿಭತ್ಯವೂ ಸೇರಿ 150 ರೂ.ಗಳಿಗೆ ಏರಿಸಬೇಕೆಂಬ ಸುಮಾರು 900 ಮಂದಿ ಅರಮನೆ ನೌಕರರ (ನಾಲ್ಕನೇ ದರ್ಜೆ) ಹಲವು ದಿನಗಳ ಬೇಡಿಕೆ ಹಾಗೂ 18 ದಿನಗಳಿಂದ ನಡೆಯುತ್ತಿದ್ದ 24 ಗಂಟೆಗಳ ಸರದಿ ಉಪವಾಸ ಇಂದು ತುತ್ತತುದಿಯನ್ನು ಮುಟ್ಟಿತು.

ಅಡುಗೆಯವರು, ವಾಹನಗಳ ಚಾಲಕರುಗಳು, ಪುರೋಹಿತರು ಹಾಗೂ ಆಪ್ತ ಪರಿಚಾರಕರು ಯಾರೂ ಒಳಗೆ ಹೋಗಿಲ್ಲ ಎಂಬುದು ಅರಮನೆ ಕೋಟೆ ಬಾಗಿಲುಗಳನ್ನು ಕಣ್ಣಿಟ್ಟು ಕಾಯುತ್ತಿರುವ ಮುಷ್ಕರಕಾರರ ವರದಿ.

ಸೋಸಲೆ ವ್ಯಾಸರಾಜ ಮಠಾಧೀಶರ ನಿಧನ

ಟಿ. ನರಸೀಪುರ, ಡಿ. 23– ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಪಾದಂಗಳ್ ಸ್ವಾಮೀಜಿ ಅವರು ಇಂದು ಇಲ್ಲಿ ನಿಧನರಾದರು. ಸೋಸಲೆ ಹಳೆಯ ಮಠದಲ್ಲಿ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆಯಿತು. ಸಹಸ್ರಾರು ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಪ್ರತಿಕ್ರಿಯಿಸಿ (+)