ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಮಂಗಳವಾರ, 24–2–1970

Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಮೋಟಾರ್‌ ಸ್ಪಿರಿಟ್‌ ಮತ್ತು ವಿದ್ಯುಚ್ಛಕ್ತಿ ಮೇಲೆ ಹೆಚ್ಚು ತೆರಿಗೆ

ಬೆಂಗಳೂರು, ಫೆ. 23: ‘ವಿಲಾಸ ಸಾಮಗ್ರಿ’ಗಳ ಮೇಲೆ ಶೇಕಡ 1ರಷ್ಟು ಹೆಚ್ಚು ಮಾರಾಟ ತೆರಿಗೆ, ಮೋಟಾರು ಸ್ಪಿರಿಟ್‌ಗಳ ಮೇಲೆ ಮೊದಲ ಬಾರಿಗೆ ಶೇಕಡ 12ರಷ್ಟು ತೆರಿಗೆ, ವಿದ್ಯುತ್‌ ಶುಲ್ಕದ ಮೇಲಿನ ತೆರಿಗೆ ದರಗಳಲ್ಲಿ ಶೇಕಡ 50ರಷ್ಟು ಏರಿಕೆ ಹಾಗೂ ಸ್ವತ್ತು ತೆರಿಗೆಯ ಮೇಲಿನ ಸರ್‌ಚಾರ್ಜಿನಲ್ಲಿ ಶೇಕಡ 50ರಷ್ಟು ಹೆಚ್ಚಳ.

1970–71ನೇ ಸಾಲಿನಲ್ಲಿ ಸಾಮಾನ್ಯ ಆಯವ್ಯಯದಲ್ಲಿ ಬೀಳುವ 15.48 ಕೋಟಿ ರೂಪಾಯಿ ಖೋತಾವನ್ನು ಸರಿದೂಗಿಸಲು ಸರ್ಕಾರ ನಿರ್ಧರಿಸುವ ಈ ತೆರಿಗೆ ಕ್ರಮಗಳನ್ನು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ವಿಧಾನಸಭೆಯಲ್ಲಿ ಮಂಡಿಸಿದರು.

ಅರ್ಥ ಸಚಿವರು ಮಂಡಿಸಿದ 70–71ನೇ ಸಾಲಿನ ಬಜೆಟ್‌ ರೀತ್ಯ ಈ ಹೊಸ ಕ್ರಮಗಳಿಂದ ಒಟ್ಟು 4ರಿಂದ 5 ಕೋಟಿ ರೂಪಾಯಿವರೆಗೆ ಹೆಚ್ಚು ವರಮಾನವನ್ನು ನಿರೀಕ್ಷಿಸಲಾಗಿದೆ.

ರೈಲ್ವೆ ಪ್ರಯಾಣ, ಸರಕು ಸಾಗಣೆ ದರ ಏರಿಕೆ, ಪ್ಲಾಟ್‌ಫಾರಂ ಸೀಸನ್‌ ಟಿಕೆಟ್‌ ಕೂಡ ದುಬಾರಿ

ನವದೆಹಲಿ, ಫೆ. 23: ಇನ್ನು ಮುಂದೆ ಎಲ್ಲ ವರ್ಗದ ರೈಲ್ವೆ ಪ್ರಯಾಣ ಇನ್ನಷ್ಟು ತುಟ್ಟಿ. ಸರಕು ಸಾಗಣೆಯೂ ಅಷ್ಟೆ. ಇದರ ಜೊತೆಗೆ ಸೀಸನ್‌ ಟಿಕೆಟ್‌ ಬೆಲೆಯಲ್ಲೂ ಏರಿಕೆ. ಏಪ್ರಿಲ್‌ನಿಂದ ಪ್ಲಾಟ್‌ಫಾರಂ ಪ್ರವೇಶಕ್ಕೆ ಇನ್ನೂ 5 ಪೈಸೆ ಹೆಚ್ಚು ವಸೂಲಿ.

ರೈಲ್ವೆ ಮಂತ್ರಿ ನಂದಾರವರು ಈ ಏರಿಕೆಗಳಿಂದ ಗಳಿಸುವುದಾಗಿ ಅಂದಾಜು ಮಾಡಿರುವ ಹೆಚ್ಚು ಆದಾಯ 39 ಕೋಟಿ ರೂ. ಈ ಗಳಿಕೆಗಾಗಿ ಅವರು ಯಾವ ವರ್ಗದ ಪ್ರಯಾಣಿಕನನ್ನೂ ಬಿಟ್ಟಿಲ್ಲ. ಎಲ್ಲರ ಕಿಸೆಗೂ ಕೈ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT