ಬುಧವಾರ, ಫೆಬ್ರವರಿ 26, 2020
19 °C
ಸೋಮವಾರ

ಸೋಮವಾರ, 15–7–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಳಿ

ಅಣ್ವಸ್ತ್ರಕ್ಕಾಗಿ ಜಪಾನ್ ಪ್ರಯತ್ನ

ಹಾಂಕಾಂಗ್, ಜು. 14–  ಅಣ್ವಸ್ತ್ರಗಳನ್ನು ಪಡೆಯಲು ಜಪಾನ್ ಸರ್ಕಾರ ಪ್ರಯತ್ನಿಸುತ್ತಿದೆಯೆಂದು ಫುಕೀನ್ ರೇಡಿಯೊ ಇಂದು ವರದಿ ಮಾಡಿದೆ.

ಜಪಾನ್ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಅಣ್ವಸ್ತ್ರ ಹೊಂದುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದು ಪ್ರಧಾನ ಮಂತ್ರಿ ಇಸಾಕು ಸ್ಮಾಟೋ ಅವರು ಇತ್ತೀಚೆಗೆ ಚೀನ ಅಣ್ವಸ್ತ್ರ ಹೊಂದಿರುವ ಆತಂಕ ವ್ಯಕ್ತಪಡಿಸಿದರೆಂದು ರೇಡಿಯೋ ತಿಳಿಸಿದೆ.

ರಾಜಧನ: ಮಾಜಿ ಅರಸರ ಸಭೆ 18 ರಂದು

ನವದೆಹಲಿ, ಜು. 14– ರಾಜಧನ ಮತ್ತು ವಿಶೇಷ ಹಕ್ಕುಗಳನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರದ ವಿರುದ್ಧ ಮುಂದಿನ ಕ್ರಮ ರೂಪಿಸುವ ಸಲುವಾಗಿ ಮಾಜಿ ರಾಜರ ಒಕ್ಕೂಟ ಮುಂಬಯಿಯಲ್ಲಿ ಈ ತಿಂಗಳ 18 ಮತ್ತು 19 ರಂದು ಸಭೆ ಸೇರಲಿದೆ.

ಈ ಬಗ್ಗೆ ಮುಂದಿನ ಕ್ರಮ ನಿರ್ಧರಿಸಲು ಸಂಸತ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಅರಸರು ಈ ತಿಂಗಳ 22 ರಂದು ಸಂಸತ್ ಅಧಿವೇಶನ
ಪ್ರಾರಂಭವಾಗುವುದರೊಳಗೆ ಪ್ರತ್ಯೇಕವಾಗಿ ಸಭೆ ಸೇರಲಿದ್ದಾರೆ.

ಪಣಜಿಯಲ್ಲ ಪಂಜಿಂ

ಬೆಂಗಳೂರು, ಜು. 14– ಗೋವಾ ರಾಜಧಾನಿಯನ್ನು ಪಣಜಿ ಎಂದು ಉಚ್ಚರಿಸುವುದನ್ನು ಗೋವಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪುರುಷೋತ್ತಮ ಕಾಕೋಡ್ಕರ್ ಅವರು ಇಂದು ತೀವ್ರವಾಗಿ ಆಕ್ಷೇಪಿಸಿದರು.

‘ಪಂಜಿಂ’ ವಿದೇಶಿ ಪದವಲ್ಲ. ಸಂಪೂರ್ಣ ಭಾರತೀಯ ನಾಮ. ಅದು ಪಣಜಿ ಹೇಗಾಯಿತೋ ಗೊತ್ತಿಲ್ಲ. ಅಂತರರಾಷ್ಟ್ರೀಯ ಖ್ಯಾತಿ ಪಡೆದ ನಗರವೊಂದರ ಹೆಸರನ್ನು ಈ ರೀತಿ ಬದಲಾಯಿಸುವುದು ಸರಿಯಲ್ಲ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಮಂಗಳೂರಿನಲ್ಲಿ ಕ್ರಿಶ್ಚಿಯನ್ ಯುವಕನಿಂದ ಹಿಂದೂ ಧರ್ಮ ಸ್ವೀಕಾರ

ಮಂಗಳೂರು, ಜು. 14– ಉತ್ತರ ಕನ್ನಡದ ಕ್ರಿಶ್ಚಿಯನ್ ಯುವಕ ಶ್ರೀ ರೊಸೇರಿಯೊ ಜೆ. ಸಿಲ್ವಾ ಅವರು ಇಂದು ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಮತಾಂತರದ ನಂತರ ಅವರಿಗೆ
ಶ್ರೀ ಕೃಷ್ಣ ಕಡವಾಡ್ಕರ್ ಎಂದು ಪುನರ್ ನಾಮಕರಣ ಮಾಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು