ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಮಂಗಳವಾರ, 22–9–1970

Last Updated 22 ಸೆಪ್ಟೆಂಬರ್ 2020, 0:55 IST
ಅಕ್ಷರ ಗಾತ್ರ

ಯುಕ್ತ ನಿರ್ಬಂಧ ವಿಧಿಸುವ 144ನೇ ವಿಧಿ ಕ್ರಮಬದ್ಧ
ನವದೆಹಲಿ, ಸೆ. 21–
ಅಪರಾಧ ನಿರೋಧ ಕುರಿತ ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ನ 144, 117 ಹಾಗೂ ಇತರ ವಿಧಿಗಳ ರೀತಿ ಒದಗಿಸಲಾಗಿರುವ ಅವಕಾಶಗಳು ಸಂವಿಧಾನಬದ್ಧವಾದವುಗಳೆಂದು ಸುಪ್ರೀಂ ಕೋರ್ಟ್‌ನ ಏಳು ಮಂದಿ ನ್ಯಾಯಾಧೀಶರ ವಿಶೇಷ ಪೀಠ ಇಂದು ತೀರ್ಪಿತ್ತಿತು.

‘ಸಂವಿಧಾನದ 32ನೇ ವಿಧಿಯಂತೆ, ಸ್ಥಳದಿಂದ ಸ್ಥಳಕ್ಕೆ ಚಲಿಸಲು ಹಾಗೂ ಶಾಂತಿಯುತವಾಗಿ ಸಭೆ ಸೇರಲು ತಮಗಿರುವ ಮೂಲಭೂತ ಹಕ್ಕನ್ನು ಈ ವಿಧಿಗಳು ಉಲ್ಲಂಘಿಸುತ್ತವೆಂದು ಸಂಸತ್‌ ಸದಸ್ಯರಾದ ಮಧು ಲಿಮಯೆ ಮತ್ತು ಎಸ್‌.ಎ. ಡಾಂಗೆ ಅವರು ರಿಟ್‌ ಅರ್ಜಿ ಸಲ್ಲಿಸಿದ್ದರು.

ಭೂ ಗ್ರಹಣ ಚಳವಳಿ ಸಂಬಂಧದಲ್ಲಿ ಕಳೆದ ತಿಂಗಳು ಉತ್ತರ ಪ್ರದೇಶ ಸರ್ಕಾರ ಅವರನ್ನು ಬಂಧಿಸಿತ್ತು.

ಉದ್ಯಮ ನಿರ್ವಹಣೆ ಶಿಕ್ಷಣಕ್ಕೆ ಯುನೆಸ್ಕೊ ನೆರವು
ನವದೆಹಲಿ, ಸೆ. 21–
ಅಭಿವೃದ್ಧಿಶೀಲ ರಾಷ್ಟ್ರಗಳ ವಿಶ್ವವಿದ್ಯಾನಿಲಯಗಳಲ್ಲಿ ವಾಣಿಜ್ಯೋದ್ಯಮ ಮತ್ತು ಉದ್ಯೋಗಿಗಳ ಮೇಲ್ವಿಚಾರಣೆ ವಿಷಯಗಳಲ್ಲಿ ಶಿಕ್ಷಣ ಕೊಡಲು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ಪ್ರಥಮ ಬಾರಿಗೆ ಸಹಾಯ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT