ಬುಧವಾರ 17–7–1968

7

ಬುಧವಾರ 17–7–1968

Published:
Updated:
cartoon

ಲೋಕಸಭೆಗೆ ವಿಜಯಲಕ್ಷ್ಮಿ ರಾಜಿನಾಮೆ

ನವದೆಹಲಿ, ಜು. 16– ‘ವೈಯಕ್ತಿಕ ಕಾರಣಗಳಿಗಾಗಿ’ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್‌ ಅವರು ತಮ್ಮ ಲೋಕಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.

ಕನ್ನಡ ಪ್ರೊಫೆಸರ್ ಆಗಿ ಎಸ್.ವಿ. ಪರಮೇಶ್ವರ ಭಟ್ಟರ ನೇಮಕ

ಮೈಸೂರು, ಜು. 16– ಈ ಶಿಕ್ಷಣ ವರ್ಷದಿಂದ ಮಂಗಳೂರಿನಲ್ಲಿ ಪ್ರಾರಂಭವಾಗುವ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಪ್ರೊಫೆಸರ್ ಆಗಿ ಪ್ರಸಿದ್ಧ ಬರಹಗಾರ ಶ್ರೀ ಎಸ್.ವಿ.
ಪರಮೇಶ್ವರ ಭಟ್ ಅವರನ್ನು ನೇಮಿಸಲಾಗಿದೆ.

ಶ್ರೀ ಭಟ್ಟರು ಈಗ ಮಾನಸ ಗಂಗೋತ್ರಿಯಲ್ಲಿ ಕನ್ನಡ ರೀಡರ್ ಆಗಿದ್ದಾರೆ. ಶ್ರೀ ಭಟ್ಟರು ಈ ಕೇಂದ್ರದ ಮೇಲ್ವಿಚಾರಕರೂ ಆಗಿರುತ್ತಾರೆ.

18 ವಯಸ್ಸಿಗೇ ಮತದಾನ ಅರ್ಹತೆ

ನವದೆಹಲಿ, ಜು. 16– ಮತದಾನಕ್ಕೆ ಪ್ರಾಪ್ತ ವಯಸ್ಸು 21ರ ಬದಲು 18 ಇರಬೇಕೆಂದು ಸಂಸತ್ ಕಾಂಗ್ರೆಸ್ ಪಕ್ಷದ ಕೆಲವರು ಸದಸ್ಯರ ಸಲಹೆ.

ಮುಂದಿನ ಭಾನುವಾರ ಪಕ್ಷದ ಕಾರ್ಯಕಾರಿ ಸಭೆ ಈ ಸಲಹೆಯನ್ನು ಪರಿಶೀಲಿಸುವುದೆಂದು ನಿರೀಕ್ಷೆ. ಒಂದು ವೇಳೆ ಅದು ಅಂಗೀಕೃತವಾದರೆ ಅದರ ಅನುಷ್ಠಾನಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಆಗತ್ಯ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟು: ಆಂಧ್ರದ ಕರಾಳ ಮಸೂದೆಗೆ ವಿರೋಧ

ಹೈದರಾಬಾದ್, ಜು. 16– ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದರೆಡ್ಡಿ ಅವರು ಇಂದು ಆಂಧ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ಮಧ್ಯೆ ವಿವಾದಾತ್ಮಕ ಪತ್ರಿಕಾ ಮಸೂದೆಯನ್ನು ಮಂಡಿಸಿದರು.

‘ಸಾರ್ವಜನಿಕ ಹಿತಾಸಕ್ತಿ, ಶಿಷ್ಟಾಚಾರ ಮತ್ತು ನೈತಿಕ ಮೌಲ್ಯಗಳನ್ನು’ ರಕ್ಷಿಸುವ ಉದ್ದೇಶದಿಂದ ಪತ್ರಿಕೆಗಳು ಮತ್ತು ಪ್ರಕಟಣೆಯ ಮೇಲೆ ನಿಯಂತ್ರಣ ಹೇರುವ ವಿಶೇಷ ಅಧಿಕಾರ ನೀಡುವ ಈ ಮಸೂದೆಯ ಮೂರು ಪಠಣಗಳು ನಾಳೆಯೇ ನಡೆಯುವುದೆಂದು ನಿರೀಕ್ಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !