ಶನಿವಾರ, 27–7–1968

7

ಶನಿವಾರ, 27–7–1968

Published:
Updated:

ರಾಜ್ಯಗಳ ಪರ ಕೇಂದ್ರವೇ ಸಾಲ ಎತ್ತಲಿ
ಬೆಂಗಳೂರು, ಜು. 26–
ಇನ್ನು ಕೇಂದ್ರ ಸರಕಾರವೇ ರಾಜ್ಯಗಳ ಪರವಾಗಿಯೂ ಸಾಲವನ್ನೆತ್ತುವ ವ್ಯವಸ್ಥೆ ಜಾರಿಗೆ ಬರಬೇಕೆಂದು ಮೈಸೂರು ಒತ್ತಾಯಪಡಿಸಿದೆ.

ಪಕ್ಷಾಂತರ ತಡೆಗೆ ಸಚಿವ ಸಂಖ್ಯೆ ನಿರ್ಬಂಧಕ್ಕೆ ಒಪ್ಪಿಗೆ
ನವದೆಹಲಿ, ಜು. 26–
ಪಕ್ಷಾಂತರ ಪ್ರವೃತ್ತಿ ತಪ್ಪಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿ ಮಂತ್ರಿಮಂಡಲಗಳ ಗಾತ್ರವನ್ನು ಪರಿಮಿತಿಗೊಳಿಸಲು ಕೇಂದ್ರ ಸರಕಾರ ‘ತತ್ವಶಃ’ ಒಪ್ಪಿಗೆ ನೀಡಿರುವುದಾಗಿ ಕಾನೂನು ಸಚಿವ ಶ್ರೀ ಪಿ. ಗೋವಿಂದ ಮೆನನ್ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

ಷೇರುಗಳನ್ನು ಮಾರಲು ಸರ್ಕಾರ ಯೋಚಿಸಿಲ್ಲ
ಬೆಂಗಳೂರು, ಜು. 26–
ಬಾಗಲಕೋಟೆ ಸಿಮೆಂಟ್ ಕಂಪನಿಯಲ್ಲಿ ತಾನು ತೊಡಗಿಸಿರುವ  ಷೇರುಗಳನ್ನು ಮಾರಲು ರಾಜ್ಯ ಸರಕಾರ ಯೋಚಿಸಿಲ್ಲ ಎಂದು ರಾಜ್ಯದ ಕೈಗಾರಿಕಾ ಸಚಿವ ಶ್ರೀ ರಾಜಶೇಖರ ಮೂರ್ತಿ ಅವರು ಇಂದಿಲ್ಲಿ ಹೇಳಿದರು.

‘ಪರೀಕ್ಷೆಯಲ್ಲಿ ಸಹಾಯ ನಿರಾಕರಿಸಿದ್ದೇ ಕಾರಣ’ ವೆಂಕಟಗಿರಿಗೌಡರ ದೂರು
ಬೆಂಗಳೂರು, ಜು. 26–
‘ಶ್ರೀ ಕೃಷ್ಣ ಎಂಬುವರು ನನ್ನ ಮೇಲೆ ಕೈ ಮಾಡಲು ಕಾರಣ ಶ್ರೀ ಮಲ್ಲಯ್ಯ ಎಂಬುವರಿಗೆ ಪರೀಕ್ಷೆಯಲ್ಲಿ ಸಹಾಯ ಮಾಡಲು ನಿರಾಕರಿಸಿದುದೇ ಆಗಿದೆ’ ಎಂದು ಪ್ರೊ. ವೆಂಕಟಗಿರಿ ಗೌಡ ಅವರು ಪೋಲೀಸರಿಗೆ ಕೊಟ್ಟಿರುವ ತಮ್ಮ ದೂರಿನಲ್ಲಿ ತಿಳಿಸಿದ್ದು ‘ಅದು ಅಪ್ರಚೋದಿತ ಹಾಗೂ ಪೂರ್ವಯೋಜಿತವಾದುದು’ ಎಂದು ತಿಳಿಸಿದ್ದಾರೆ.

ಸೆಂಟ್ರಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಅವರು ಸಲ್ಲಿಸಿರುವ ದೂರನ್ನು ಅಲಸೂರು ಗೇಟ್ ಪೋಲೀಸಿನವರು ಸ್ವೀಕರಿಸಿ ಕೇಸ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !