ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್ ಅಧ್ಯಕ್ಷ ಹಟಿನ್‌ ನಿವೃತ್ತಿ

Last Updated 21 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಯಾಂಗೂನ್(ಎಪಿ): ಆಂಗ್‌ ಸಾನ್‌ ಸೂಕಿ ಆಪ್ತರಾದ ಮ್ಯಾನ್ಮಾರ್‌ ಅಧ್ಯಕ್ಷ ಹಟಿನ್‌ ಕೈವ್‌ ಅವರು ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

ಇದರಿಂದಾಗಿ ಈಗಾಗಲೇ ಪ್ರಬಲವಾಗಿರುವ ಸೇನೆಯು ತಾತ್ಕಾಲಿಕವಾಗಿ ಇನ್ನಷ್ಟು ಅಧಿಕಾರ ಪಡೆಯಲಿದೆ ಎಂದು ವಿಶ್ಲೇಷಿಸಲಾಗಿದೆ.

‘ವಿಶ್ರಾಂತಿ ಪಡೆಯಲಿಕ್ಕಾಗಿ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ’ ಎಂದು ಹಟಿನ್‌ ಅವರ ಕಚೇರಿ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿದೆ.

ಮುಂದಿನ ಏಳು ದಿನಗಳಲ್ಲಿ ಸಂವಿಧಾನದ ನಿಯಮಗಳ ಪ್ರಕಾರ ಹೊಸ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಕಚೇರಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2016ರಲ್ಲಿ ಅಧ್ಯಕ್ಷರಾದ ಹಟಿನ್‌, ಮೊದಲ ಚುನಾಯಿತ ಅಧ್ಯಕ್ಷ ಎಂಬ ಕೀರ್ತಿಗೆ ಭಾಜನರಾಗಿದ್ದರು. ಸೂಕಿ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಹಟಿನ್‌, ಸೂಕಿಯವರ ಛಾಯಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT