ಮಂಗಳವಾರ, 30–7–1968

7

ಮಂಗಳವಾರ, 30–7–1968

Published:
Updated:

ಆಸ್ತಿಗಿಂತ ಪ್ರಾಮಾಣಿಕತೆ ಆಧಾರದ ಮೇಲೆ ಸಾಲ ನೀಡಲು ಬ್ಯಾಂಕ್‌ಗಳಿಗೆ ಕರೆ

ಬೆಂಗಳೂರು, ಜು. 29– ಸಾಲ ನೀಡಿಕೆಯು ಆಸ್ತಿವಂತಿಕೆಗಿಂತ ವ್ಯಕ್ತಿಯ ಪ್ರಾಮಾಣಿಕತೆಯನ್ನು ಅವಲಂಬಿಸಿರಬೇಕೆಂದು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಇಂದು ಬ್ಯಾಂಕಿಂಗ್ ಸಂಸ್ಥೆಗಳಿಗೆ ಕರೆ ಇತ್ತರು.

ರೈಲಿನಲ್ಲಿ ಜೆಕ್–ರಷ್ಯ ಮಾತುಕತೆ ಪ್ರಾರಂಭ

ಪ್ರಾಗ್, ಜು. 29– ರಷ್ಯ– ಜೆಕೋಸ್ಲೊವಾಕಿಯ ಗಡಿ ಬಳಿ ರೈಲಿನಲ್ಲಿ ಈ ಎರಡು ರಾಷ್ಟ್ರಗಳ ಪ್ರತಿನಿಧಿಗಳು ಇಂದು ಮಾತುಕತೆ ಪ್ರಾರಂಭಿಸಿದರು.

ಅಲೆಕ್ಸಾಂಡರ್ ಡುಬೆಕ್ ಜೆಕೋಸ್ಲೊವಾಕ್ ಪ್ರತಿನಿಧಿ, ರಷ್ಯ ಪ್ರತಿನಿಧಿ ರಿಯೋನಿಷ್ ಬ್ರೆಜ್ನೇವ್.

ಕಟ್ಟುನಿಟ್ಟಾದ ಭದ್ರತೆಯ ಮುನ್ನೆಚ್ಚರಿಕೆಯಲ್ಲಿ ಮಾತುಕತೆಗಳು ಅತ್ಯಂತ ರಹಸ್ಯವಾಗಿ ನಡೆಯುತ್ತಿವೆ. ಪಾಶ್ಚಿಮಾತ್ಯ ಪತ್ರಕರ್ತರು ಹತ್ತಿರ ಸುಳಿಯಲೂ ಅವಕಾಶ ಕೊಡುತ್ತಿಲ್ಲ.

ಲಂಡನ್‌ನಲ್ಲಿ ಮೈಸೂರಿನ ವಾಣಿಜ್ಯ ಪ್ರತಿನಿಧಿ ನೇಮಕ ಪ್ರಶ್ನೆ ಪರಿಶೀಲನೆಯಲ್ಲಿ; ಮುರಾರಜಿ

ನವದೆಹಲಿ, ಜು. 29– ಲಂಡನ್‌ನಲ್ಲಿ ತಮ್ಮ ನೂತನ ವಾಣಿಜ್ಯ ಪ್ರತಿನಿಧಿಯನ್ನು ನೇಮಿಸುವ ಬಗ್ಗೆ ಮೈಸೂರು ಸರ್ಕಾರದ ಮನವಿಯನ್ನು ಅರ್ಥ ಸಚಿವಶಾಖೆ ಪರಿಶೀಲಿಸುತ್ತಿರುವುದಾಗಿ ಉಪಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ತಿಳಿಸಿದರು.

ಲಂಡನ್‌ನಲ್ಲಿ ಹಾಲಿ ಇರುವ ಮೈಸೂರಿನ ವಾಣಿಜ್ಯ ಪ್ರತಿನಿಧಿಯು ಇಷ್ಟರಲ್ಲೆ ನಿವೃತ್ತರಾಗಲಿದ್ದಾರೆ.‌

ವಿದೇಶಗಳಲ್ಲಿ ತಮ್ಮ ವಾಣಿಜ್ಯ ಪ್ರತಿನಿಧಿಗಳನ್ನು ನೇಮಿಸಲು ಇತರ ರಾಜ್ಯಗಳಿಗೂ ಸರ್ಕಾರ ಅನುಮತಿ ನೀಡುವುದೆ? ಎಂಬ ಪ್ರಶ್ನೆಯೊಂದಕ್ಕೆ ಶ್ರೀ ದೇಸಾಯಿ ಉತ್ತರ ಕೊಡುತ್ತ ‘ಆ ಪ್ರಶ್ನೆ ಏಳುವುದೇ ಇಲ್ಲ’ ಎಂದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !