ಬುಧವಾರ, 7-8-1968

7
ವಾರ

ಬುಧವಾರ, 7-8-1968

Published:
Updated:

ಬ್ಯಾಂಕಿಂಗ್ ಮಸೂದೆಗೆ ಲೋಕಸಭೆ ಅಂಗೀಕಾರ: ವಿರೋಧ ಪಕ್ಷದ ಸಭಾತ್ಯಾಗ

ನವದೆಹಲಿ, ಆ. 6– ಬ್ಯಾಂಕುಗಳ ಮೇಲೆ ಸಾಮಾಜಿಕ ನಿಯಂತ್ರಣ ತರುವ ಬ್ಯಾಂಕಿಂಗ್ ಶಾಸನ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಇಂದು ಅಂಗೀಕರಿಸಿತು.

ಬ್ಯಾಂಕ್‌ ಆವರಣದಲ್ಲಿ ನೌಕರರು ಮತಪ್ರದರ್ಶನ ನಡೆಸುವುದನ್ನು ನಿಷೇಧಿಸುವ ವಿವಾದಾತ್ಮಕ ವಿಧಿಗೆ ಪಿ.ಎಸ್‌.ಪಿ. ಸದಸ್ಯ ಶ್ರೀನಿವಾಸ ಮಿಶ್ರ ಅವರು ತಂದ ತಿದ್ದುಪಡಿಯನ್ನೂ 109–53 ಮತಗಳಿಂದ ಸಭೆ ತಿರಸ್ಕರಿಸಿದಾಗ ಸ್ವತಂತ್ರ ಪಕ್ಷವೊಂದನ್ನು ಬಿಟ್ಟು ಉಳಿದೆಲ್ಲ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.

ಗಗನದಲ್ಲಿ ಗೂಢಚಾರ

ಕೇಪ್‌ ಕೆನಡಿ, ಆ. 6– ಈ ಐದು ವರ್ಷಗಳಲ್ಲಿ ಪ್ರಥಮ ಬಾರಿಗೆ ಅಮೆರಿಕದ ವಾಯು ಪಡೆ ಹಾರಿಸುವ ಗುಪ್ತ ಉಪಗ್ರಹದಲ್ಲಿ ‘ಗಗನದಲ್ಲಿ ಗುಪ್ತಚಾರ’ ರಾಕೆಟ್ಟನ್ನು ಕಳಿಸಿದೆ.

ರಷ್ಯ, ಚೀನಾ, ಅಗ್ನೇಯ ಏಷ್ಯ ಮತ್ತು ಇತರ ಸಮಸ್ಯೆ ರಾಷ್ಟ್ರಗಳ ಬಗ್ಗೆ ಬೇಹುವಿಗೆ ಸಂಬಂಧಿಸಿದ ಅಗಾಧ ರಹಸ್ಯ ಮಾಹಿತಿಗಳನ್ನು ಇದು ಸಂಗ್ರಹಿಸುತ್ತದೆ.

ಶಿಕ್ಷಣದ ಮೇಲೆ ರಾಜ್ಯ, ಕೇಂದ್ರಗಳ ಹತೋಟಿ: ‘ಕಾರ್ಯಶೀಲ ಸಲಹೆ’ಯಲ್ಲ

ನವದೆಹಲಿ, ಆ. 6– ಶಿಕ್ಷಣವನ್ನು ರಾಜ್ಯ ಮತ್ತು ಕೇಂದ್ರಗಳೆರಡರ ವ್ಯಾಪ್ತಿಗೂ ಒಳಪಡಿಸುವುದು ಈಗ ಸದ್ಯಕ್ಕೆ ಕಾರ್ಯಶೀಲ ಸಲಹೆಯಲ್ಲ ಎಂದು ಶಿಕ್ಷಣ ಸಚಿವ ಡಾ. ತ್ರಿಗುಣ ಸೇನ್ ಅವರು ಇಂದು ರಾಜ್ಯ ಸಭೆಗೆ ತಿಳಿಸಿದರು.

ಎಕ್ಸ್‌ರೇಗೆ ಬದಲು ಶಸ್ತ್ರ ಚಿಕಿತ್ಸೆ– ಹುಡುಗಿ ಸಾವು: ಮುಂಬೈ ಆಸ್ಪತ್ರೆಯಲ್ಲಿ ರೋಗಿಗಳ ಅದಲುಬದಲು

ಮುಂಬೈ, ಆ. 6– ಶಸ್ತ್ರ ಚಿಕಿತ್ಸೆಯ ‍ಪ್ರಮಾದದಿಂದ ಹನ್ನೊಂದು ವರ್ಷದ ಹುಡುಗಿ ಇಲ್ಲಿನ ಭಾಬಾ ಆಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದಳೆಂದು ಪೊಲೀಸ್ ವರದಿಯೊಂದು
ತಿಳಿಸಿದೆ.

ಆಗಸ್ಟ್ ಎರಡರಂದು ಆಸ್ಪತ್ರೆಗೆ ಸೇರಿದ ಈ ಹುಡುಗಿಯನ್ನು ಆಗಸ್ಟ್‌ ಐದರಂದು ‘ಸ್ಕ್ರೀನಿಂಗ್‌’ಗೆ ಒಳಪಡಿಸಬೇಕಾಗಿತ್ತು.

ಆಗಸ್ಟ್ ಮೂರರಂದು ಮತ್ತೊಬ್ಬ ಹುಡುಗಿಯನ್ನು ಟಾನ್ಸಿಲ್ (ಗಲಗ್ರಂಥಿ) ಶಸ್ತ್ರ ಚಿಕಿತ್ಸೆಗೆಂದು ಇದೇ ವಾರ್ಡಿಗೆ ಸೇರಿಸಲಾಯಿತು. ಆ. 5 ರಂದು ಶಸ್ತ್ರ ಚಿಕಿತ್ಸೆ ನಡೆಯಬೇಕಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !