ಮಾಡರ್ನ್‌ ಬೇಕರಿಯ ಬ್ರೆಡ್‌ ಇಂದಿನಿಂದ ನಗರದಲ್ಲಿ ಮಾರಾಟ

7

ಮಾಡರ್ನ್‌ ಬೇಕರಿಯ ಬ್ರೆಡ್‌ ಇಂದಿನಿಂದ ನಗರದಲ್ಲಿ ಮಾರಾಟ

Published:
Updated:
Deccan Herald

ಮಾಡರ್ನ್‌ ಬೇಕರಿಯ ಬ್ರೆಡ್‌ ಇಂದಿನಿಂದ ನಗರದಲ್ಲಿ ಮಾರಾಟ

ಬೆಂಗಳೂರು, ಆ. 11– ಕೇಂದ್ರ ಸರ್ಕಾರದ ಆಶ್ರಯದಲ್ಲಿ ಮದರಾಸಿನಲ್ಲಿ ಸ್ಥಾಪಿಸಲಾದ ‘ಮಾಡರ್ನ್‌ ಬೇಕರಿ’ಯು ವೈಜ್ಞಾನಿಕವಾಗಿ ತಯಾರಿಸುವ ಸ್ಪರ್ಶರಹಿತ, ಪೌಷ್ಟಿಕ ಮತ್ತು ರುಚಿಕರವಾದ ಬ್ರೆಡ್‌ ನಾಳೆ ಸೋಮವಾರದಿಂದ ನಗರದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮೋಟಾರು ವಾಹನ ತೆರಿಗೆ ಏರಿಕೆ ಬೇಡ ಎಂದು ಡಾ. ರಾವ್‌

ನವದೆಹಲಿ, ಆ. 11– ಮೋಟಾರು ವಾಹನಗಳಮೇಲಿನ ತೆರಿಗೆಯನ್ನು ಈಗಿರುವ ಮಟ್ಟದಲ್ಲೇ ಸ್ಥಗಿತಗೊಳಿಸಬೇಕೆಂದು ಕೇಂದ್ರ ಸಾರಿಗೆ ಮತ್ತು ನೌಕೋದ್ಯಮ ಸಚಿವ ಡಾ. ವಿ.ಕೆ.ಆರ್‌.ವಿ. ರಾವ್‌ ಅವರು ರಾಜ್ಯ ಮುಖ್ಯಮಂತ್ರಿಗಳನ್ನು ಕೇಳಿದ್ದಾರೆ.

ಭಾರತ ವಿದೇಶಾಂಗ ನೀತಿಯ ವೈಫಲ್ಯ: ಮಾರ್ಕ್ಸ್‌ವಾದಿ ಕಮ್ಯುನಿಸ್ಟರ ವ್ಯಾಖ್ಯಾನ

ಜೈಪುರ, ಆ. 11– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ರಷ್ಯದ ನಿರ್ಧಾರವನ್ನು ಭಾರತ ವಿದೇಶಾಂಗ ನೀತಿಯ ‘ವೈಫಲ್ಯ’ ಎಂದು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷದ ಕೇಂದ್ರ ಸಮಿತಿ ಇಂದು ವ್ಯಾಖ್ಯಾನ ಮಾಡಿದೆ.

‘ಅಮೆರಿಕ – ಚೀನಾ ಹತ್ತಿರ ಬರುತ್ತಿವೆ’

ಜೈಪುರ, ಆ. 11– ಚೀನಾ ಮತ್ತು ಅಮೆರಿಕಗಳು ಹೆಚ್ಚು ನಿಕಟವರ್ತಿಗಳಾಗುತ್ತಿವೆ ಎಂಬ ಭಾವನೆ ತಮಗಿರುವುದಾಗಿ ಕೇರಳ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್‌. ನಂಬೂದ್ರಿಪಾಡ್‌ ಅವರು ಶನಿವಾರ ಇಲ್ಲಿನ ರಾಜಸ್ತಾನ್‌ ವಿಶ್ವವಿದ್ಯಾಲಯದಲ್ಲಿ ‘ಭಾರತದಲ್ಲಿ ರಾಜಕೀಯ ಪರಿಸ್ಥಿತಿ’ ಕುರಿತು ಭಾಷಣ ಮಾಡುತ್ತ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !