‘ಪ್ರಜಾವಾಣಿ’ ಮುನ್ನಡೆ

7

‘ಪ್ರಜಾವಾಣಿ’ ಮುನ್ನಡೆ

Published:
Updated:

‘ಪ್ರಜಾವಾಣಿ’ ಮುನ್ನಡೆ

ಬೆಂಗಳೂರು, ಆ. 29– ಕನ್ನಡ ನಾಡಿನ ರಾಜಧಾನಿಯಿಂದ ಪ್ರಕಟವಾಗುವ ದಿನಪತ್ರಿಕೆಗಳಲ್ಲಿ ಅತಿ ಹೆಚ್ಚು ಪ್ರಸಾರದ ಪತ್ರಿಕೆ ‘ಪ್ರಜಾವಾಣಿ’. 1967ರಲ್ಲಿ ‘ಪ್ರಜಾವಾಣಿ’ಯ ಪ್ರಸಾರ ದಿನಕ್ಕೆ 65,840 ಪ್ರತಿಗಳು.

ಇಲ್ಲಿ ಇಂದು ಪ್ರೆಸ್ ರಿಜಿಸ್ಟ್ರಾರ್‌ರವರು ‘1967ರಲ್ಲಿ ಮೈಸೂರು ರಾಜ್ಯದಲ್ಲಿ ಪತ್ರಿಕೆಗಳು’ ಕುರಿತು ಪ್ರಕಟಿಸುವ ಅಂಕಿ ಅಂಶಗಳಿಂದ ಈ ವಿಚಾರ ಹೊರಬಿದ್ದಿದೆ.

ಇಂದಿರಾ ಪದಚ್ಯುತಿಗೆ ಸಂಚು ನಡೆಯುತ್ತಿದೆ ಎಂಬುದು ‘ಹುಡುಗಾಟಿಕೆ’

ಬೆಂಗಳೂರು, ಆ. 29– ಪ್ರಧಾನಿ ಇಂದಿರಾಗಾಂಧಿಯವರನ್ನು ಕೆಳಗಿಳಿಸಲು ಕಾಂಗ್ರೆಸ್ಸಿಗರ ಗುಂಪೊಂದು ಸಂಚು ನಡೆಸುತ್ತಿದೆಯೆಂಬ ವದಂತಿಗಳನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ‘ಹುಡುಗಾಟಿಕೆ’ ಎಂದು ಕರೆದು ದೆಹಲಿಯು ಇತ್ತೀಚೆಗೆ ಗುಲ್ಲೆಬ್ಬಿಸುವವರ ನಗರವಾಗುತ್ತಿದೆಯೆಂದರು.

‘ಕೆಲವು ಕಿಡಿಗೇಡಿ ಜನರು’ ವದಂತಿಗಳನ್ನು ಹಬ್ಬಿಸುವುದರಲ್ಲಿ ನಿರತರಾಗಿದ್ದಾರೆಂದು ಅವರು ಹೇಳಿ ‘ಇದಕ್ಕೆಯಾರಾದರೂ ಸಚಿವರು ಹೊಣೆಯಾಗಿದ್ದರೆ ಅವರು ಸಂಪುಟದಲ್ಲಿರಲು ಅರ್ಹರಲ್ಲ’ ಎಂದು ಸಿಟ್ಟಿನಿಂದ ಹೇಳಿ
ದರು. ಅಲ್ಲದೆ ಕೇಂದ್ರ ಸಚಿವರ್‍ಯಾರೂ ಇಂಥ ವದಂತಿಗಳಿಗೆ ಕಾರಣರೆಂದು ನಾನು ನಂಬುವುದಿಲ್ಲವೆಂದರು.

ಅಧ್ಯಕ್ಷತೆಗೆ ಹಂಫ್ರಿ ಡೆಮೊಕ್ರಾಟಿಕ್ ಅಭ್ಯರ್ಥಿ

ಚಿಕಾಗೋ, ಆ. 29– ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಡೆಮೊಕ್ರಾಟಿಕ್ ಪಕ್ಷ ಉಮೇದುವಾರರಾಗಿ ಉಪಾಧ್ಯಕ್ಷ ಹ್ಯೂಬರ್ಟ್ ಹಂಫ್ರಿ ಇಂದು ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !