ಸೋಮವಾರ, 10–9–1968

7
ವಾರ

ಸೋಮವಾರ, 10–9–1968

Published:
Updated:

ಕ್ಷಾಮ ಪರಿಹಾರ ಕಮೀಷನರ್ ಆಗಿ ಸ್ವಾಮಿನಾಥನ್?
ಬೆಂಗಳೂರು, ಸೆ. 9– ಕ್ಷಾಮ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಮತ್ತು ಶೀಘ್ರವಾಗಿ ಕೈಕೊಳ್ಳಲು ರಾಜ್ಯ ಸರ್ಕಾರವು ವಿಶೇಷ ಅಧಿಕಾರ ಹೊಂದಿದ ಕ್ಷಾಮ ಪರಿಹಾರ ಕಮೀಷನರನ್ನು ನೇಮಿಸಲಿದೆ.

ರಾಜ್ಯದ ಕಂದಾಯ ಇಲಾಖೆ ಕಾರ್ಯದರ್ಶಿ ಶ್ರೀ ಎಂ.ಎಸ್. ಸ್ವಾಮಿನಾಥನ್ ಅವರು ತಮ್ಮ ಕೆಲಸದ ಜತೆಯಲ್ಲಿ ಕ್ಷಾಮ ಪರಿಹಾರ ಕಮೀಷನರರ ಕೆಲಸವನ್ನೂ ನೋಡಿಕೊಳ್ಳುವರು ಎಂದು ತಿಳಿದುಬಂದಿದೆ.

ವಿದ್ಯುತ್ ಮಂಡಲಿಗೆ ಸೇರದಿದ್ದರೆ ಕೆಲಸದಿಂದ ವಜಾ: ನೌಕರರಿಗೆ ಎಚ್ಚರಿಕೆ
ಬೆಂಗಳೂರು, ಸೆ. 9–
ರಾಜ್ಯದ ವಿದ್ಯುಚ್ಛಕ್ತಿ ಮಂಡಲಿ ಸೇವೆಗೆ ಇನ್ನೂ (ಆಫ್ಟ್) ಸೇರಿಕೊಳ್ಳದಿರುವ ಅದರ ನೌಕರರಿಗೆ ಇನ್ನೊಂದು ಅವಕಾಶ ಕೊಡಲಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ಪ್ರಕಟಿಸಿದರು.

ಶ್ರೀ ನಾಗಪ್ಪ (ಎಸ್.ಎಸ್.ಪಿ.ರಾಯಚೂರು) ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಅವರು ಅಲ್ಲಿಗೂ ಅವರು ಮಂಡಳಿ ಸೇವೆಗೆ ಸೇರಲು ನಿರಾಕರಿಸಿದರೆ ಕೆಲಸದಿಂದ  ತೆಗೆದುಹಾಕಲು ಪರಿಶೀಲಿಸಲಾಗುವುದು. ಏಕೆಂದರೆ ಅವರನ್ನು ಸರ್ಕಾರಿ ಸೇವೆಯಲ್ಲಿ ಉಳಿಸಿಕೊಳ್ಳಲು ಹುದ್ದೆಗಳು ಇಲ್ಲವೆಂದರು.

ಖಾಸಗಿ ಕಾಲೇಜುಗಳಿಗೂ ಯು.ಜಿ.ಸಿ. ಸ್ಕೇಲಿನ ಅನ್ವಯ: ಶಿಕ್ಷಣ ಸಚಿವರ ಸ್ಪಷ್ಟನೆ
ಬೆಂಗಳೂರು, ಸೆ. 9–
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದವರ ಸಂಬಳ ಶ್ರೇಣಿಯನ್ನು ಖಾಸಗಿ ಕಾಲೇಜು ಅಧ್ಯಾಪಕರುಗಳಿಗೂ ಅನ್ವಯಿಸಲಾಗುವುದೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಸಭೆಯಲ್ಲಿ ಹೇಳಿದರು.

25000 ಜನರಿರುವ ಎಲ್ಲ ಊರುಗಳಲ್ಲಿ ಜನತಾ ಬಜಾರ್
ಬೆಂಗಳೂರು, ಸೆ. 9–
ರಾಜ್ಯದಲ್ಲಿ 25,000 ಮತ್ತು ಅದಕ್ಕಿಂತ ಹೆಚ್ಚು ಪ್ರಜಾ ಸಂಖ್ಯೆಯನ್ನು ಪಡೆದಿರುವ ನಗರಗಳಲ್ಲೆಲ್ಲಾ ಜನತಾ ಬಜಾರ್‌ಗಳನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !