ಬುಧವಾರ, 9–10–1968

7

ಬುಧವಾರ, 9–10–1968

Published:
Updated:
Deccan Herald

ನಗರದಲ್ಲಿ ಸಂಸತ್ ಅಧಿವೇಶನಕ್ಕೆ ವಸತಿ ಸೌಕರ್ಯದ ಅಡಚಣೆ
ನವದೆಹಲಿ, ಅ. 8–
ದಕ್ಷಿಣದಲ್ಲಿ ಸಂಸತ್ ಅಧಿವೇಶನ ನಡೆಸುವುದಕ್ಕೆ ಕೆಲವು ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆಂದು ಎಸ್.ಆರ್.ರಾಣೆಯವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮೈಸೂರು ಮತ್ತು ಕೇರಳ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಸಂಸತ್ ಅಧಿವೇಶನ ನಡೆಸಲು ವಸತಿ ಸೌಕರ್ಯ ಸಮಸ್ಯೆಯೇ ಅಡ್ಡಿಯಾಗಿದೆಯೆಂದು ದಕ್ಷಿಣದಲ್ಲಿ ಸಂಸತ್ ಅಧಿವೇಶನ ಕುರಿತ ಪಾರ್ಲಿಮೆಂಟರಿ ಸಮಿತಿ ಅಧ್ಯಕ್ಷ ರಾಣೆಯವರು ಹೇಳಿದರು.

ರಾಣೆಯವರು ಬೆಂಗಳೂರು ಮತ್ತು ತಿರುವನಂತಪುರದಲ್ಲಿ ಪ್ರವಾಸ ಮಾಡಿ ಇದೀಗ ಇಲ್ಲಿಗೆ ವಾಪಸಾಗಿರುವರು.

ಸುಂದರಿಯರ ಸಮಾವೇಶ
ಜಿನೀವಾ, ಅ. 8–
ವಿಶ್ವದ ನಾನಾ ಭಾಗಗಳ ಸುಂದರಿಯರು ಇಂದು ಇಲ್ಲಿ ಸಭೆ ಸೇರಿದ್ದರು. ಈ ಚೆಲುವೆಯರ ಸಮಾಗಮದ ಉದ್ದೇಶ
ಸೌಂದರ್ಯ ಸ್ಪರ್ಧೆ, ತರುಣಿಯರ ಸಮವಸ್ತ್ರ ಮೊದಲಾದ ಸಮಸ್ಯೆಗಳ ಚರ್ಚೆ.

ಐವತ್ತೊಂದು ಅಂತರರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಗಳಿಗೆ ಸೇರಿದ ಗಗನಸಖಿಯರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಗಗನಸಖಿಯರ ವಾರ್ಷಿಕ ಸಮ್ಮೇಳನ ಇಂದು ಇಲ್ಲಿ ಪ್ರಾರಂಭವಾಯಿತು. ಸುಂದರಿಯರ ಸಮಸ್ಯೆಗಳ ಚರ್ಚೆ ನಾಳೆ ಪ್ರಾರಂಭವಾಗಲಿದೆ.

ಜತ್ತಿ ಅವರಿಗೆ ಅಭಿನಂದನೆ
ಬೆಂಗಳೂರು, ಅ. 8–
ಪುದುಚೇರಿಯ ಲೆಫ್ಟಿನೆಂಟ್ ಗೌರ‍್ನರ್ ಆಗಿ ನೇಮಿಸಲ್ಪಟ್ಟಿರುವ ಶ್ರೀ ಬಿ.ಡಿ. ಜತ್ತಿಯವರಿಗೆ ರಾಜ್ಯಪಾಲ ಶ್ರೀ ಜಿ.ಎಸ್. ಪಾಠಕ್‌ರವರೇ ಆದಿಯಾಗಿ ಅನೇಕ ಮಂದಿ ಅಭಿನಂದಿಸಿದ್ದಾರೆ.

ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್‌ರವರು ಮೈಸೂರಿನಿಂದ ಟೆಲಿಫೋನ್‌ನಲ್ಲಿ ಮಾತನಾಡಿ ಅಭಿನಂದಿಸಿದ್ದಾರೆ. ರಾಜ್ಯದ ಕ್ರೀಡಾಮಂಡಲಿಯ ಅಧ್ಯಕ್ಷ ಶ್ರೀ ಜೆ.ಬಿ. ಮಲ್ಲಾರಾಧ್ಯರವರೂ ಅಭಿನಂದಿಸಿರುವವರಲ್ಲಿ ಒಬ್ಬರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !