ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 30–10–1969

ಗುರುವಾರ
Last Updated 29 ಅಕ್ಟೋಬರ್ 2019, 19:55 IST
ಅಕ್ಷರ ಗಾತ್ರ

ಇಂದಿರಾ ಜೊತೆ ಭೇಟಿಗೆ ಎಸ್ಸೆನ್ ಪ್ರಯತ್ನವಿಲ್ಲ

ನವದೆಹಲಿ, ಅ. 29– ಕಾಂಗ್ರೆಸ್ಸಿನಲ್ಲಿ ಎರಡು ಗುಂಪುಗಳ ನಡುವಣ ಸಂಶಯ ನಿವಾರಣೆಗಾಗಿ ತಾವು ಪ್ರಧಾನಿಯೊಡನೆ ಭೇಟಿಗೆ ಪ್ರಯತ್ನಿಸುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

‘ರಾಜಿ ಯಾವಾಗಲೂ ಅಪೇಕ್ಷಣೀಯ ಮತ್ತು ಸಾಧ್ಯವೂ ಕೂಡ’ ಎಂದು ಅವರು ಹೇಳಿದರಾದರೂ ತಮ್ಮ ಅಧಿಕಾರಾವಧಿಯನ್ನು ಒಂದು ವರ್ಷ ಹೆಚ್ಚಿಸುವ ಫರೀದಾಬಾದ್ ತೀರ್ಮಾನವನ್ನು ರದ್ದುಪಡಿಸುವ ಪ್ರಯತ್ನದಿಂದ ಸಹಜವಾಗಿ ಅವರಿಗಾಗಿರುವ ತೀವ್ರ ಜುಗುಪ್ಸೆ ವ್ಯಕ್ತವಾಗುತ್ತಿತ್ತು.

‘ಕನ್ನಡಕ್ಕೆ ಬಂದ ಜಯ’ ರಾಜ್ಯೋತ್ಸವ ದಿನ ಅಧಿಕಾರ ಸ್ವೀಕಾರ: ದೇ.ಜ.ಗೌ.

ಬೆಂಗಳೂರು, ಅ. 29– ‘ಏನು ಮಾಡಲಿದ್ದೇನೆ ಎಂಬುದನ್ನು ತಕ್ಷಣ ಹೇಳಲಾರೆ. ಮಾನಸಗಂಗೋತ್ರಿಯನ್ನು ಶ್ರೀ ಕೆ.ವಿ. ಪುಟ್ಟಪ್ಪನವರು ಆರಂಭಿಸಿದರು. ಪ್ರೊ. ನಿಕಂ ಅವರು ಕಟ್ಟಡಗಳನ್ನು ಕಟ್ಟಿಸಿದರು, ಒಂದು ರೂಪ ಬರಿಸಿದರು. ಡಾ. ಶ್ರೀಮಾಲಿಯವರು ಅದಕ್ಕೆ ಉಸಿರು ತುಂಬಿದರು, ಸಾಕಷ್ಟು ವಿಸ್ತರಿಸಿದರು. ಇದನ್ನು ಉಳಿಸಿಕೊಳ್ಳೋದೇ ದೊಡ್ಡ ಕೆಲಸವಲ್ಲವೆ?’ ಮುಂದಿರುವ ಕರ್ತವ್ಯಗ
ಳನ್ನು ಮೈಸೂರು ವಿಶ್ವವಿದ್ಯಾಲಯದ ನೂತನ ಉಪ ಕುಲಪತಿ ಶ್ರೀ ದೇ. ಜವರೇ
ಗೌಡರು ಜ್ಞಾಪಿಸಿಕೊಂಡರು.

‘ಪ್ರಜಾವಾಣಿ’ ಪ್ರತಿನಿಧಿಯೊಡನೆ ಸಂದರ್ಶನ ಮುಂದುವರೆದಂತೆಲ್ಲಾ ಅವರು ಯೋಜನೆಗಳನ್ನು ಹೊರಗೆಡಹಿದರು.

ಚಂಡೀಗಢ ವಿವಾದ: ಶನಿವಾರದೊಳಗೆ ಇತ್ಯರ್ಥ ಇಲ್ಲದಿದ್ದರೆ ಬಲಿದಾನ; ಫತೇಸಿಂಗ್ ಬೆದರಿಕೆ

ಅಮೃತಸರ, ಅ. 29– ಚಂಡೀಗಢ ಮತ್ತು ಭಾಕ್ರಾನಂಗಲ್ ಪ್ರದೇಶಗಳನ್ನು ಕೇಂದ್ರ ಸರ್ಕಾರವು ಶನಿವಾರದೊಳಗೇ ಪಂಜಾಬ್‌ನಲ್ಲಿ ವಿಲೀನಗೊಳಿಸದೇ ಹೋದಲ್ಲಿ ‘ಪರಮ ಬಲಿದಾನ’ ಮಾಡುವುದಾಗಿ ಅಕಾಲಿ ದಳದ ಅಧ್ಯಕ್ಷ ಸಂತ್‌ ಫತೇಸಿಂಗ್ ಅವರು ಇಂದು ಇಲ್ಲಿ ಬೆದರಿಕೆ ಹಾಕಿದ್ದಾರೆ. ಆದರೆ ಅವರು ಉದಾತ್ತ ಬಲಿದಾನದ ವಿಧಾನವನ್ನು ಸ್ಪಷ್ಟಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT