ರಸ್ತೆಗೆ ಸುರಿಯುವ ಮುನ್ನ...

7

ರಸ್ತೆಗೆ ಸುರಿಯುವ ಮುನ್ನ...

Published:
Updated:

ಹಾಲಿಗೆ, ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ ಸಿಗದಿದ್ದಾಗ ಅವನ್ನೆಲ್ಲಾ ತಂದು ರಸ್ತೆಗೆ ಸುರಿದು ಪ್ರತಿಭಟಿಸುವುದು ಇತ್ತೀಚೆಗೆ ಎಲ್ಲೆಡೆ ಕಂಡುಬರುತ್ತಿದೆ. ಇದು ಕಳವಳಕಾರಿ ಸಂಗತಿ.

ಕೃಷಿ ಉತ್ಪನ್ನಗಳಿಗೆ ಗೌರವಯುತ ಬೆಲೆ ಸಿಗದಿದ್ದಾಗ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು ಸಹಜ. ಆದರೆ ಪ್ರತಿಭಟನೆಯ ರೀತಿ ಸರಿಯಾದುದೇ ಎಂದು ಒಮ್ಮೆ ಯೋಚಿಸುವ ತಾಳ್ಮೆ ಮತ್ತು ಅರಿವು ಎಲ್ಲರಲ್ಲೂ ಇರಬೇಕಲ್ಲವೇ?

ದೇಶದಲ್ಲಿ ಅದೆಷ್ಟೋ ಮಂದಿ ಒಪ್ಪೊತ್ತಿನ ಕೂಳಿಗೂ ಹೆಣಗಾಡುತ್ತಿದ್ದಾರೆ. ಪೌಷ್ಟಿಕಾಂಶದ ಹೊರತೆಯಿಂದ ಮಕ್ಕಳು ಪ್ರಾಣ ಬಿಡುತ್ತಿವೆ. ಹೀಗಿರುವಾಗ ಹಾಲು, ತರಕಾರಿಗಳನ್ನು ರಸ್ತೆಗೆ ಸುರಿಯುವುದು ಎಷ್ಟು ಸರಿ? ಅದನ್ನೇ ಹಸಿದ ಹೊಟ್ಟೆಗಳಿಗೆ ಹಂಚಿ ಅವರ ಸಂತೃಪ್ತ ಮುಖಗಳನ್ನು ನೋಡುವ ಗುಣ ನಮ್ಮದಾಗಬೇಕು.

ರೈತರಿಗೆ ಕಷ್ಟಗಳಿವೆ ಎಂಬುದನ್ನು ಒಪ್ಪಲೇ ಬೇಕು. ನಮ್ಮ ಕಷ್ಟಗಳ ಮಧ್ಯೆಯೂ ಹಸಿದ ಹೊಟ್ಟೆಗಳನ್ನು ತುಂಬಿಸೋಣ. ಮಾನವೀಯ ಮೌಲ್ಯಗಳನ್ನು ಮರೆಯದೆಯೇ ಪ್ರತಿಭಟನೆಗಳನ್ನೂ ನಡೆಸೋಣ.

ರಾಘವೇಂದ್ರ ನಾಯ್ಕ ಉಂಚಳ್ಳಿ, ಶಿರಸಿ
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !