ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಬುಧವಾರ, 28–1–1970

Last Updated 27 ಜನವರಿ 2020, 19:45 IST
ಅಕ್ಷರ ಗಾತ್ರ

* ಸಂತ್ ಆತ್ಮಾರ್ಪಣೆ ಆದರೆ ತೀವ್ರ ಪರಿಣಾಮಕ್ಕೆ ಕೇಂದ್ರವೇ ಹೊಣೆ

ನವದೆಹಲಿ, ಜ. 27– ಪಂಜಾಬಿಗೇ ಚಂಡೀಗಡವನ್ನು ಸೇರಿಸುವಂತೆ ಕೂಡಲೇ ನಿರ್ಧಾರ ಪ್ರಕಟಿಸಬೇಕೆಂದು ಪಂಜಾಬಿನ ಮುಖ್ಯಮಂತ್ರಿ ಗುರ‍್ನಾಂಸಿಂಗ್ ಇಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತುಂಬಿದ ಪತ್ರಿಕಾಗೋಷ್ಠಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಹಿಂದೆ ಅನೇಕ ಬಾರಿ ಆದಂತೆ ಕೇಂದ್ರ ಸರ್ಕಾರ ಕೋರಿಕೆಗೆ ಕಟ್ಟುಬಿದ್ದು ಫತೇಸಿಂಗರು ಆತ್ಮಾರ್ಪಣೆ ಮಾಡಿಕೊಳ್ಳಲು ಅವಕಾಶ ನೀಡಿದರೆ ತನ್ನ ಸಲ್ಲದ ಜಡತೆಯಿಂದ ಉಂಟಾಗುವ ಪರಿಣಾಮಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುವುದು’ ಎಂದು ಎಚ್ಚರಿಸಿದರು.

*ಚಂಡೀಗಡಕ್ಕಾಗಿ ಫತೇಸಿಂಗ್, ತೂಫಾನ್ ಉಪವಾಸ ಆರಂಭ

ನವದೆಹಲಿ, ಜ. 27– ಅಕಾಲಿ ನಾಯಕ ಸಂತ್‌ಫತೇಸಿಂಗ್ ಮತ್ತು ಹರಿಯಾಣಾದ ಫಾರ್ವರ್ಡ್‌ಬ್ಲಾಕ್ ಅಧ್ಯಕ್ಷ ಕೆ.ಕೆ.ತೂಫಾನ್ ಅವರು ಗಣರಾಜ್ಯ ದಿನವಾದ ನಿನ್ನೆ ಆರು ದಿನಗಳ ಉಪವಾಸ ಆರಂಭಿಸಿದರು.

ಚಂಡೀಗಡವನ್ನು ಪಂಜಾಬಿಗೆ ಸೇರಿಸಬೇಕೆಂದು ಸಂತ್ ಅವರೂ, ಹರಿಯಾಣಾಕ್ಕೆ ಸೇರಿಸಬೇಕೆಂದು ತೂಫಾನ್ ಅವರೂ ಒತ್ತಾಯಪಡಿಸುತ್ತಿದ್ದು, ಆರು ದಿನಗಳ ನಂತರ ಆತ್ಮಾರ್ಪಣೆ ಮಾಡಿಕೊಳ್ಳಲಿದ್ದಾರೆ.

* ರಾಂನಾರಾಯಣ್ ಚಲ್ಲಾರಾಂ ನಿಧನ

ಬೆಂಗಳೂರು,ಜ. 27– ನಗರದ ಗಣ್ಯದಾನಿಗಳಲ್ಲೊಬ್ಬರಾದ ಶ್ರೀ ರಾಂನಾರಾಯಣ್ ಚಲ್ಲಾರಾಂ ಅವರು ಬುಧವಾರ ಬೆಳಗಿನ ಜಾವ 2.20ಕ್ಕೆ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT