ಶನಿವಾರ, ಫೆಬ್ರವರಿ 29, 2020
19 °C

ಬುಧವಾರ, 11–2–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ ರಾಷ್ಟ್ರೀಕರಣ ಶಾಸನ ರದ್ದು: ಸುಪ್ರೀಂ ಕೋರ್ಟ್‌ ತೀರ್ಪು

ನವದೆಹಲಿ, ಫೆ. 10: ರಾಷ್ಟ್ರದ ಹದಿನಾಲ್ಕು ಭಾರಿ ವಾಣಿಜ್ಯ ಬ್ಯಾಂಕುಗಳನ್ನು ಕಳೆದ ವರ್ಷ ರಾಷ್ಟ್ರೀಕರಣ ಮಾಡಿದ ಶಾಸನವನ್ನು ಸುಪ್ರೀಂ ಕೋರ್ಟ್‌ ಇಂದು ರದ್ದು ಮಾಡಿತು. 

ನ್ಯಾಯದ ದೃಷ್ಟಿಯಲ್ಲಿ ಸಮಾನತೆ ಮತ್ತು ಕೆಲವು ಮೂಲಭೂತ ಹಕ್ಕುಗಳ ಭರವಸೆ ನೀಡಿರುವ ಸಂವಿಧಾನದ 14, 19 ಮತ್ತು 31 (2)ನೆ ವಿಧಿಗಳನ್ನು ಉಲ್ಲಂಘಿಸುವ ಕಾರಣ ಹದಿನಾಲ್ಕು ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿರುವ ಇಡೀ ಶಾಸನ ಅಸಿಂಧು ಎಂದು ಸುಪ್ರೀಂ ಕೋರ್ಟ್‌ ಇಂದು ಘೋಷಿಸಿತು. 

ವಿದೇಶಿ ಬ್ಯಾಂಕುಗಳು ಮತ್ತು ಅನೇಕ ಭಾರತೀಯ ಬ್ಯಾಂಕುಗಳು ಬ್ಯಾಂಕಿಂಗ್‌ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಿ 14 ಬ್ಯಾಂಕುಗ
ಳನ್ನು ಮಾತ್ರ ರಾಷ್ಟ್ರೀಕರಣಗೊಳಿಸಿರುವುದರಿಂದ ತೀವ್ರ ಪಕ್ಷಪಾತ ಮಾಡಿದಂತಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ರಾಜಕೀಯ ಸಂತ್ರಸ್ತರಿಗೆ ವಿಶ್ರಾಂತಿ ವೇತನ

ಬೆಂಗಳೂರು, ಫೆ. 10: ಭಾರತದ ಸ್ವಾತಂತ್ರ್ಯ ಸಮರದಲ್ಲಿ ನೊಂದ ರಾಜ್ಯದ ಸುಮಾರು 2,300 ರಾಜಕೀಯ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಇಲ್ಲಿಯವರೆಗೆ ರಾಜಕೀಯ ವಿಶ್ರಾಂತಿ ವೇತನವನ್ನು ನೀಡಿದೆ. ವಿಶ್ರಾಂತಿ ವೇತನ ತಿಂಗಳಿಗೆ 50 ರೂಪಾಯಿ.

ಸಿ.ಬಿ.ಗುಪ್ತ ರಾಜೀನಾಮೆ

ಲಖನೌ, ಫೆ. 10: ಉತ್ತರ ಪ್ರದೇಶದ ಮುಖ್ಯಮಂತ್ರಿ ಚಂದ್ರಭಾನುಗುಪ್ತ ಅವರು ಇಂದು ರಾಜ್ಯಪಾಲ ಬಿ.ಗೋಪಾಲರೆಡ್ಡಿ ಅವರಿಗೆ ರಾಜೀನಾಮೆ ಸಲ್ಲಿಸಿದರು. ಭಾರತೀಯ ಕ್ರಾಂತಿದಳದ ನಾಯಕ ಚರಣ್‌
ಸಿಂಗ್‌ ಅವರನ್ನು ತಮ್ಮ ಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ನೇಮಿಸುವಂತೆ ಗುಪ್ತ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)