ಶುಕ್ರವಾರ 2–8–1968

7

ಶುಕ್ರವಾರ 2–8–1968

Published:
Updated:

ಅಣ್ವಸ್ತ್ರ ಮಿತಿ: ರಷ್ಯದೊಡನೆ ಒಪ್ಪಂದಕ್ಕೆ ಜಾನ್ಸನ್ ಸಿದ್ಧ
ವಾಷಿಂಗ್ಟನ್, ಆ. 1–
ಅಣ್ವಸ್ತ್ರಗಳನ್ನು ಮಿತಿಗೊಳಿಸುವುದು ಮತ್ತು ಕಡಿಮೆ ಮಾಡುವ ಬಗ್ಗೆ ರಷ್ಯಾದೊಡನೆ ಒಪ್ಪಂದ ಮಾಡಿಕೊಳ್ಳಲು ತಾವು ನಿರ್ಧರಿಸಿರುವುದಾಗಿ ಅಧ್ಯಕ್ಷ ಜಾನ್ಸನ್ ಅವರು ನಿನ್ನೆ ಸುದ್ದಿಗಾರರಿಗೆ ತಿಳಿಸಿದರು.

 ಬ್ಯಾಂಕ್ ಮಸೂದೆ ಚರ್ಚೆಗೆ ತೀವ್ರ ವಿರೋಧ
ನವದೆಹಲಿ, ಆ. 1–
ಸೆಲೆಕ್ಟ್ ಸಮಿತಿ ವರದಿ ಮಾಡಿದ ಬ್ಯಾಂಕಿಂಗ್ ಶಾಸನ (ತಿದ್ದುಪಡಿ) ಮಸೂದೆ ಪರಿಶೀಲನೆಯ ಕ್ರಮಬದ್ಧತೆ ಕುರಿತು ವಿರೋಧ ಪಕ್ಷಗಳು ಇಂದು ಲೋಕ ಸಭೆಯಲ್ಲಿ ಸರ್ಕಾರವನ್ನು ಸಂಪೂರ್ಣ ಗೊಂದಲದಲ್ಲಿ ಕೆಡವಿದವು.

 ನಾಗಾಲ್ಯಾಂಡ್ ಪರಿಸ್ಥಿತಿ: ವಿರೋಧ ಪಕ್ಷಗಳ ಜೊತೆ ಇಂದು ಇಂದಿರಾ ಚರ್ಚೆ
ನವದೆಹಲಿ, ಆ. 1–
ನಾಗಾರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು, ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಸಂಸತ್‌ನಲ್ಲಿನ ವಿರೋಧ ಪಕ್ಷಗಳ ನಾಯಕರನ್ನು ನಾಳೆ ಭೇಟಿ ಮಾಡಲಿದ್ದಾರೆ.

ಹುಬ್ಬಳ್ಳಿ ಡೈರಿ ಸೆಪ್ಟೆಂಬರಿನಲ್ಲಿ
ಬೆಂಗಳೂರು, ಆ. 1–
ರಾಜ್ಯದ ಎರಡನೇ ಹೈನು ಕೈಗಾರಿಕೆಯಾದ ಹುಬ್ಬಳ್ಳಿ–ಧಾರವಾಡ ಡೈರಿಯು ಬರುವ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆಯೆಂದು ಪಶುಪಾಲನಾ ಸ್ಟೇಟ್ ಸಚಿವ ಶ್ರೀ ಜಿ.ಬಿ. ಶಂಕರರಾವ್ ಅವರು ಇಂದು ಇಲ್ಲಿ ಪ್ರಕಟಿಸಿದರು.

ಕಂಪನಿ ಕಾಣಿಕೆ ನಿಷೇಧ ಯೋಜನೆ ತಡೆಗೆ ಪ್ರಯತ್ನ
ನವದೆಹಲಿ, ಆ. 1–
ರಾಜಕೀಯ ಉದ್ದೇಶಗಳಿಗಾಗಿ ಕಂಪನಿಗಳು ಕಾಣಿಕೆ ನೀಡುವುದನ್ನು ನಿಷೇಧಿಸುವ ತನ್ನ ತೀರ್ಮಾನವನ್ನು ಕೇಂದ್ರ ಸರಕಾರ ಪುನರ್‌ವಿಮರ್ಶಿಸುವಂತೆ ಒತ್ತಾಯ ಮಾಡಲು ಸಂಸತ್ತಿನ ಕೆಲವರು ಗಣ್ಯ ಕಾಂಗ್ರೆಸ್ ಸದಸ್ಯರು ಬೆಂಬಲ ಸಂಗ್ರಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !