ಶನಿವಾರ, 8–2–1969

7

ಶನಿವಾರ, 8–2–1969

Published:
Updated:

‘ಮಾದಕ ಸೋಡಾ’ ನೀಡಿ ಶಾಸಕನ ಅಪಹರಣ: ಆರೋಪ

ಚಂಡೀಗಡ, ಫೆ. 7– ಬನ್ಸಿಲಾಲ್ ಸರ್ಕಾರದ ‘ಹಸ್ತಕರು’ ತಮ್ಮನ್ನು ಅಪಹರಿಸಿಕೊಂಡು ಹೋಗಿ ಪತ್ರವೊಂದಕ್ಕೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾರೆಂದು ವಿಧಾನ ಸಭೆಯ ಸದಸ್ಯ ಜೋಗೆಂದ್ರ ಸಿಂಗ್‌ರವರು ಇಂದು ಹರಿಯಾಣ ವಿಧಾನ ಸಭೆಯಲ್ಲಿ ಆಪಾದಿಸಿದರು.

ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದರೆಂದು ಹೇಳಲಾದ ಜೋಗೇಂದ್ರ ಸಿಂಗ್‌ರವರು ಇಂದು ವಿಧಾನಸಭೆಯಲ್ಲಿ ಹಾಜರಾದರು.

ಜನವರಿ 31ರಂದು ಮುಖ್ಯಮಂತ್ರಿಯ ನಿವಾಸದಲ್ಲಿ ‘ಮಾದಕ ವಸ್ತು’ ಮಿಶ್ರಿತ ಸೋಡಾಕೊಟ್ಟ ನಂತರ ತಮ್ಮನ್ನು ಮೊದಲು ಅಜ್ಮೀರಕ್ಕೂ ಬಳಿಕ ಜಯಪುರಕ್ಕೂ ಕರೆದೊಯ್ಯಲಾಯಿತೆಂದು ಜೋಗೇಂದ್ರ ಸಿಂಗ್ ಹೇಳಿದರು.

ಮುಖಮರೆಸಲು ಮೀಸೆಗೆ ಕತ್ತರಿ

ಚಂಡೀಗಡ, ಫೆ. 7– ಮುಖ್ಯಮಂತ್ರಿಗಳ ನಿವಾಸದಿಂದ ಹರಿಯಾಣ ವಿಧಾನಸಭಾ ಸದಸ್ಯ ಶ್ರೀ ಜೋಗೇಂದ್ರ ಸಿಂಗ್ ಅವರನ್ನು ಅಜ್ಮೀರ್ ಮತ್ತು ಜೈಪುರಕ್ಕೆ ಕರೆದೊಯ್ದಾಗ, ಅವರನ್ನು ಯಾರೂ ಗುರುತಿಸದಂತೆ ಅವರ ಮೀಸೆಯನ್ನು ಬೋಳಿಸಲಾಗಿತ್ತು.

ಶ್ರೀ ಜೋಗೇಂದ್ರ ಸಿಂಗ್ ಅವರು ಸಿಂಹದಂಥ ಭರ್ಜರಿ ಮೀಸೆ ಬಿಟ್ಟಿದ್ದರು.

–ಈ ವಿಷಯವನ್ನು ಇಂದು ಹರಿಯಾಣ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾವ್‌ ಬೀರೇಂದ್ರ ಸಿಂಗ್ ಅವರು ತಿಳಿಸಿದರು.

‘ಜೇಮ್ಸ್ ಬಾಂಡ್‌ನಿಗೂ ಮೀರಿದ ಕೃತ್ಯವಿದು’ ಎಂದೂ ರಾವ್ ಅವರು ವರದಿಗಾರರಿಗೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !