ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ವಶಕ್ಕೆ ಅಹ್ಮದಾಬಾದ್‌ ನಗರ

ಸೇನೆ
Last Updated 22 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಸೇನೆಯ ವಶಕ್ಕೆ ಅಹ್ಮದಾಬಾದ್‌ ನಗರ

ಅಹ್ಮದಾಬಾದ್, ಸೆ. 22– ಇಡೀ ಅಹ್ಮದಾಬಾದ್ ನಗರ ಮತ್ತು ಅದರ ಹೊರವಲಯಗಳನ್ನು ಸೇನೆಯು ಇಂದು ಸಂಜೆ ತನ್ನ ವಶಕ್ಕೆ ತೆಗೆದುಕೊಂಡಿತು. ಇನ್ನಷ್ಟು ಸೇನಾ ತುಕಡಿಗಳೂ ನಗರಕ್ಕೆ ಆಗಮಿಸಿದವು.

ಇಲ್ಲಿನ ಗಲಭೆ ಪರಿಸ್ಥಿತಿಯ ಬಗ್ಗೆ ಈಗ ಸೇನೆಯೇ ವ್ಯವಹರಿಸುವುದು. ಪೊಲೀಸರು ಸೇನೆ ಇತ್ತ ನಿರ್ದೇಶನದಂತೆ ಕಾರ್ಯ ನಿರ್ವಹಿಸುವರು. ಹೊಸ ವ್ಯವಸ್ಥೆಯ ಪ್ರಕಾರ ಸೈನಿಕರು ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಸಜ್ಜಾಗಿ ನಿಂತರು. ಪರಿಸ್ಥಿತಿ ಹೆಚ್ಚು ಪಾಲು ಶಾಂತವಾಗಿಯೇ ಇದೆ. ತೀವ್ರವಾದ ಘಟನೆಗಳಾವುದೂ ನಡೆದಿಲ್ಲ ಎಂದು ಉನ್ನತ ಸೈನಿಕಾಧಿಕಾರಿ ತಿಳಿಸಿದ್ದಾರೆ.

ಇಂದಿರಾ ಆತಂಕ

ಅಗರ್ತಲ, ಸೆ. 22– ಮಹಾತ್ಮ ಗಾಂಧಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿನ ಮತೀಯ ಗಲಭೆಗಳ ಬಗ್ಗೆ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿಯವರು ತಮ್ಮ ಜೀವನದಾದ್ಯಂತ ಮತೀಯ ಸೌಹಾರ್ದಕ್ಕಾಗಿ ಶ್ರಮಿಸಿದರೆಂದು ಪ್ರಧಾನಿಯವರು ತಿಳಿಸಿದರು.

ಮಾವೋ ಸ್ಥಿತಿ ಚಿಂತಾಜನಕ

ನ್ಯೂಯಾರ್ಕ್, ಸೆ. 22– ಚೀನದ ನಾಯಕ ಮಾವೋತ್ಸೆ ತುಂಗ್ ಅವರು ಪಾರ್ಶ್ವ
ವಾಯುವಿನಿಂದ ಹಾಸಿಗೆ ಹಿಡಿದಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು ‘ಟೈಮ್ಸ್‌’ ಪತ್ರಿಕೆ ಭಾನುವಾರ ವರದಿ ಮಾಡಿದೆ.

ತೀವ್ರ ವೈದ್ಯಕೀಯ ಪ್ರಯತ್ನಗಳ ಪರಿಣಾಮವಾಗಿ ಮಾವೋ ಇನ್ನೂ ಜೀವಂತವಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT