ಶುಕ್ರವಾರ, 17–1–1969

7

ಶುಕ್ರವಾರ, 17–1–1969

Published:
Updated:

ಯಾರ ಪ್ರಿಯತಮೆ ಕಾವೇರಿ?

ಬೆಂಗಳೂರು, ಜ. 16– ‘ಕಾವೇರಿ’ ಯಾರ ಪ್ರಿಯತಮೆ ಹೆಸರು?

ನವದೆಹಲಿಯಲ್ಲಿರುವ ರಾಜ್ಯದ ‘ಕಾವೇರಿ ಎಂಪೋರಿಯಂ’ನ ಹೆಸರಿನ ಔಚಿತ್ಯವನ್ನು ಶ್ರೀ ಎಸ್.ಎಸ್. ಅರಕೇರಿ (ಆರ್.ಪಿ.ಐ) ಇಂದು ವಿಧಾನಭೆಯಲ್ಲಿ ಪ್ರಶ್ನಿಸಿದರು.

ಕೈಗಾರಿಕಾ ಉಪ ಸಚಿವ ಶ್ರೀ ಕೆ.ಪಿ. ಅಪ್ಪಣ್ಣ ಅವರಿಂದ ಅದಕ್ಕೆ ಬಂದ ಉತ್ತರ: ಕರ್ನಾಟಕದಲ್ಲಿ ಹುಟ್ಟಿ ಅನೇಕರಿಗೆ ಪ್ರಯೋಜನ ಆಗಿರುವ ಕಾವೇರಿಯು ನದಿ ಹೆಸರು, ಯಾರ ಪ್ರಿಯತಮೆ ಹೆಸರೂ ಅಲ್ಲ.

ಪ್ರ: ಆಗಸ್ಟ್ ತಿಂಗಳಲ್ಲಿ ನಾನು ಅಲ್ಲಿಗೆ ಹೋಗಿದ್ದೆ. ಒಬ್ಬರೂ ಕನ್ನಡ ಮಾತಾಡಲಿಲ್ಲ. ಕನ್ನಡ ನೌಕರರು ಇಲ್ಲವೇ?

ಉ: ಎಂಟು ನೌಕರರಲ್ಲಿ ಒಬ್ಬರು ಕನ್ನಡ ಬಲ್ಲವರಿದ್ದಾರೆ. ನೀವು ಅಲ್ಲಿಗೆ ಭೇಟಿ ನೀಡಿದಾಗ ಅವರು ಕನ್ನಡದಲ್ಲಿ ಮಾತಾಡಲಿಲ್ಲ ಅಂತ ಕಾಣುತ್ತೆ.

ಪೊರಕೆ ಹರಾಜ್

ಅಲಹಾಬಾದ್, ಜ. 16– ಜಾಡಮಾಲಿಯೊಬ್ಬಳ ಪೊರಕೆಯನ್ನು ಮುಂದಿನ ವಾರ ನವದೆಹಲಿಯಲ್ಲಿ ಹರಾಜು ಹಾಕಲಾಗುವುದು.

ಮಹಾತ್ಮ ಗಾಂಧಿ ಹತ್ಯೆಯಾದ ಸ್ಥಳ ಬಿರ್ಲಾ ಭವನವನ್ನು ಸ್ವಾಧೀನಪಡಿಸಿಕೊಳ್ಳಲು ಬಿರ್ಲಾಗಳಿಗೆ ಪರಿಹಾರದ ಪ್ರಥಮ ಕಂತು ಪಾವತಿ ಮಾಡಲು ಈ ಹಣ ಎತ್ತಲಾಗುವುದು.

ಬಿರ್ಲಾ ಭವನವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಬಗ್ಗೆ ಇತ್ತೀಚೆಗೆ ಉಪವಾಸ ಮುಷ್ಕರ ಹೂಡಿದ್ದ ಸಂಸತ್ ಸದಸ್ಯ ಶಶಿಭೂಷಣ್ ಈ ವಿಷಯವನ್ನು ಯು.ಎನ್.ಐ.ಗೆ ಇಂದು ತಿಳಿಸಿದರು.

ಬಿರ್ಲಾಗಳಿಗೆ ನೀಡಬೇಕಾದ ಪರಿಹಾರದ ಇಡೀ ಮೊತ್ತವನ್ನು ಮಹಾತ್ಮ ಗಾಂಧಿಯವರ ಪ್ರೀತಿಪಾತ್ರರಾದ ಹರಿಜನರಿಂದಲೇ ಎತ್ತಲಾಗುವುದೆಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !