ಶುಕ್ರವಾರ, 11–4–1969

ಸೋಮವಾರ, ಏಪ್ರಿಲ್ 22, 2019
31 °C

ಶುಕ್ರವಾರ, 11–4–1969

Published:
Updated:

ಕೃಷ್ಣಾ–ಗೋದಾವರಿ ಜಲವಿವಾದ ಇತ್ಯರ್ಥಕ್ಕೆ ಎರಡು ಪಂಚಾಯ್ತಿ

ನವದೆಹಲಿ, ಏ. 10– ಕೃಷ್ಣಾ ಮತ್ತು ಗೋದಾವರಿಗಳ ಬಗ್ಗೆ ಅಂತರ ರಾಜ್ಯ ಜಲ ವಿವಾದದ ಪ್ರಶ್ನೆಯನ್ನು ಇತ್ಯರ್ಥಪಡಿಸುವುದಕ್ಕಾಗಿ ಕೇಂದ್ರ ಸರಕಾರವು ಇಂದು ಎರಡು ಪಂಚಾಯ್ತಿಗಳನ್ನು ನೇಮಕ ಮಾಡಿತು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಈ ಪಂಚಾಯ್ತಿಗಳ ಸದಸ್ಯರನ್ನು ನೇಮಕ ಮಾಡಿದ್ದಾರೆ.

ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾದ ಶ್ರೀ ಆರ್.ಎಸ್. ಬಚಾವತ್ ಅವರು ಎರಡು ಪಂಚಾಯ್ತಿಗಳಿಗೂ ಅಧ್ಯಕ್ಷರು.

ಭಾರತದ ಜತೆ ಎಲ್ಲ ಪ್ರಶ್ನೆಗಳ ಸ್ನೇಹಯುತ ಇತ್ಯರ್ಥ ಯಾಹ್ಯಾ ಗುರಿ

ರಾವಲ್ಪಿಂಡಿ, ಏ. 10– ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ಯರ್ಥವಾಗದೆಉಳಿದಿರುವ ಕಾಶ್ಮೀರ ಸೇರಿದಂತೆ ಎಲ್ಲ ವಿವಾದಗಳ ಶಾಂತಿಯುತ ಹಾಗೂ ಗೌರವಯುತ ಪರಿಹಾರಕ್ಕೆ ತಮ್ಮ ಸರಕಾರ ಆದ್ಯ ಮಹತ್ವ ನೀಡುವುದೆಂದು ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಅವರು ಇಂದು ಹೇಳಿದರು.ಈ ‍ಪ್ರದೇಶದಲ್ಲಿ ಶಾಂತಿ ನೆಲಸಬೇಕೆಂಬ ಕಾತರ ತಮಗಿದೆಯೆಂದು ಅವರು ನುಡಿದರು.

ಅಸ್ಪೃಶ್ಯತೆಗೆ ಹಿಂದೂ ಶಾಸ್ತ್ರ ಮಾನ್ಯತೆ ನೀಡಿಲ್ಲ ಎಂದು ಪುರಿ ಜಗದ್ಗುರು

ನವದೆಹಲಿ, ಏ. 11– ಹಿಂದೂ ಶಾಸ್ತ್ರಗಳು ಎಂದೂ ಅಸ್ಪೃಶ್ಯತೆಗೆ ಅಥವಾ ದ್ವೇಷ ಆಧಾರಿತ ಭೇದಭಾವಕ್ಕೆ ಮಾನ್ಯತೆ ನೀಡಿಲ್ಲವೆಂದು ಪುರಿ ಶಂಕರಾಚಾರ್ಯರು ಬುಧವಾರ ಇಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !