ಮಂಗಳವಾರ, ಮಾರ್ಚ್ 28, 2023
31 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಮಂಗಳವಾರ, 8–9–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ಹಕ್ಕು, ರಾಜಧನ ಕೂಡಲೇ ರದ್ದು, ರಾಷ್ಟ್ರಪತಿ ಆಜ್ಞೆ

ನವದೆಹಲಿ, ಸೆ. 7– ಮಾಜಿ ದೊರೆಗಳಿಗೆ ನೀಡಿದ್ದ ಮಾನ್ಯತೆ ಹಾಗೂ ಅವರು ಅನುಭವಿಸುತ್ತಿದ್ದ ರಾಜಧನ ಮತ್ತು ಹಕ್ಕುಗಳನ್ನು ತತ್‌ಕ್ಷಣದಿಂದ ರದ್ದು ಮಾಡುವ ಹಣಕಾಸು ಸಚಿವ ಶ್ರೀ ವೈ.ಬಿ. ಚವಾಣರ ಪ್ರಕಟಣೆಯನ್ನು ಇಂದು ರಾಜ್ಯಸಭೆಯಲ್ಲಿ ಆಡಳಿತ ಕಾಂಗ್ರೆಸ್‌ ಮತ್ತು ವಿರೋಧಿ ಎಡಪಕ್ಷಗಳ ಸದಸ್ಯರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.

ರಾಜಧನ ಮತ್ತು ವಿಶೇಷ ಹಕ್ಕುಗಳನ್ನು ರದ್ದು ಮಾಡಿ ಅರಸೊತ್ತಿಗೆಯ ಭಾವನೆಯನ್ನೇ ಕೊನೆಗಾಣಿಸಬೇಕೆಂಬ ನೀತಿ ನಿರ್ಧಾರದ ನಂತರ ‘ಇಂತಹ ವಿಷಯದಲ್ಲಿ ಅನಪೇಕ್ಷಣೀಯವಾದ ರಾಜಕೀಯ ಮತ್ತಿತರ ಅನಿಶ್ಚಯತೆಗಳನ್ನು ಅಂತ್ಯಗೊಳಿಸಲು’ ರಾಷ್ಟ್ರಪತಿ ತೀರ್ಮಾನ ತೆಗೆದುಕೊಂಡರೆಂದು ಶ್ರೀ ಚವಾಣರು ತಮ್ಮ ಹೇಳಿಕೆಯಲ್ಲಿ ತಿಳಿಸಿದರು.‌

ಚಿತ್ರದುರ್ಗದಲ್ಲಿ ವಿದ್ಯಾರ್ಥಿಗಳು ಪೊಲೀಸರ ನಡುವೆ ಘರ್ಷಣೆ

ಚಿತ್ರದುರ್ಗ, ಸೆ. 7– ಇಂದು ಐದನೇ ದಿನವನ್ನು ತಲುಪಿದ ಚಿತ್ರದುರ್ಗ ಕಾಲೇಜು ವಿದ್ಯಾರ್ಥಿಗಳ ಮುಷ್ಕರ ಉಗ್ರ ಸ್ವರೂಪವನ್ನು ತಾಳಿ ಲೋಕೋಪಯೋಗಿ ಇಲಾಖೆಯ ಲಾರಿಯೊಂದು ಬೆಂಕಿಗೆ ಆಹುತಿಯಾಯಿತು.

ಮುಷ್ಕರ ಹೂಡಿದ ವಿದ್ಯಾರ್ಥಿಗಳು ಟೆಲಿಫೋನ್‌ ಮತ್ತು ವಿದ್ಯುತ್‌ ಕಂಬಗಳನ್ನು ಉರುಳಿಸಿ, ತಂತಿ ಕತ್ತರಿಸಿರುವುದಲ್ಲದೆ ಕಾಲೇಜು ಬಳಿ ರಸ್ತೆ ದೀಪಗಳನ್ನು ಒಡೆದುಹಾಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು