ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ವಯೋಜನಾ ನೆರವು ಮತ್ತೆ ನೀಡಲು ಜಪಾನ್ ಒಪ್ಪಿಗೆ

1969
Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ಯೋಜನಾ ನೆರವು ಮತ್ತೆ ನೀಡಲು ಜಪಾನ್ ಒಪ್ಪಿಗೆ

ಟೋಕಿಯೋ, ಜೂನ್ 25– ಭಾರತಕ್ಕೆ 1965ರಲ್ಲಿ ನಿಲ್ಲಿಸಿದ್ದ ಯೋಜನಾ ನೆರವನ್ನು ಪುನರಾರಂಭಿಸಲು ಜಪಾನ್ ಇಂದು ಒಪ್ಪಿಗೆ ಕೊಟ್ಟಿದೆ.

ನಿನ್ನೆ ರಾತ್ರಿ ಪ್ರಾರಂಭವಾಗಿ ಇಂದು ಮಧ್ಯಾಹ್ನ ಮುಕ್ತಾಯವಾದ ಉಭಯ ರಾಷ್ಟ್ರ ಅಧಿಕಾರಿಗಳ ಮಾತುಕತೆಗಳಲ್ಲಿ ಜಪಾನ್ ತನ್ನ ನಿರ್ಧಾರ ತಿಳಿಸಿತು.

ನೆರವಿನ ಪ್ರಮಾಣ ಕುರಿತು ಸುಳಿವು ನೀಡದಿದ್ದರೂ ಅದು ಭಾರತ ಅಪೇಕ್ಷಿಸಿರದಷ್ಟು ಇರದೆಂದು ಭಾವಿಸಲಾಗಿದೆ.

ಭಾರತದಲ್ಲಿ ಬಂಡವಾಳ ಹೂಡಲು ಆಹ್ವಾನ

ಟೋಕಿಯೋ, ಜೂನ್ 25– ಭಾರತದ ಅಭಿವೃದ್ಧಿ ಕಾರ್ಯದಲ್ಲಿ ಬಂಡವಾಳ ಹೂಡುವಂತೆ ಜಪಾನಿನ ಕೈಗಾರಿಕೋದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಆಹ್ವಾನ ನೀಡಿದರು.

ಉಭಯ ವೇತನಗಳ ನಡುವೆ ಸಹಕಾರವನ್ನುಂಟು ಮಾಡಬೇಕೆಂದೂ ಅವರು ಕರೆಯಿತ್ತರು. ಇಲ್ಲಿಯವರೆಗೆ ಭಾರತ–ಜಪಾನ್ ನಡುವಣ ತಾಂತ್ರಿಕ ಸಹಕಾರ ಫಲದಾಯಕವಾಗಿದೆ ಎಂದು ಅವರು ಹೇಳಿದರು.

ಬ್ರಹ್ಮಪುತ್ರ ಪ್ರವಾಹ: 2 ಲಕ್ಷಜನ ಸಂತ್ರಸ್ತ

ಗೌಹಾಟಿ, ಜೂನ್ 25– ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹದಿಂದ ಅಸ್ಸಾಂ ರಾಜ್ಯದ ಸುಮಾರು ಎರಡು ಲಕ್ಷ ಜನರು ತೊಂದರೆಗೀಡಾಗಿದ್ದಾರೆ.

ಪ್ರವಾಹದಿಂದ ಅನೇಕ ಕಡೆ ಬೆಳೆಗೆ ಹಾನಿಯುಂಟಾಗಿದೆ. ಆದ್ದರಿಂದ ಅಸ್ಸಾಂ ಮತ್ತು ರಾಷ್ಟ್ರದ ಇತರ ಪ್ರದೇಶಗಳ ನಡುವಣ ರೈಲು ಸಂಪರ್ಕ ಕಡಿದು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT