ಭಾನುವಾರ, ಅಕ್ಟೋಬರ್ 20, 2019
27 °C

ಸೋಮವಾರ, 13–10–1969

Published:
Updated:

ಬಾಹ್ಯಾಕಾಶಕ್ಕೆ ರಷ್ಯದ ಮತ್ತೊಂದು ನೌಕೆ?

ಮಾಸ್ಕೊ, ಅ. 12– ರಷ್ಯವು ಕಳೆದ ಎರಡು ದಿನಗಳಲ್ಲಿ ತನ್ನ ಎರಡನೆಯ ಬಾಹ್ಯಾಕಾಶ ವಾಹನ ಸೋಯಜ್–7 ನೌಕೆಯನ್ನು ಇಂದು ಹಾರಿಸಿತು. ಇದರಲ್ಲಿ ಮೂವರು ಗಗನಯಾತ್ರಿಗಳಿದ್ದಾರೆ. ನಿನ್ನ ಹಾರಿಸಲಾದ, ಇಬ್ಬರು ಯಾತ್ರಿಗಳಿರುವ ಸೋಯುಜ್–6 ಅಂತರಿಕ್ಷ ನೌಕೆಯೊಡನೆ ಇದು ಸಂಪರ್ಕ ಸ್ಥಾಪಿಸಿಕೊಂಡು ‘ಸಮೂಹ ಯಾನ’ದಲ್ಲಿ ತೊಡಗಿದೆ.

ಏಕಕಾಲದಲ್ಲಿ ಐವರ ಅಂತರಿಕ್ಷಯಾನದ ಹೊಸ ದಾಖಲೆ ಜತೆಗೆ ರಷ್ಯವು ನಾಳೆ, ಇಬ್ಬರಿರುವ ಸೂಯಜ್–8 ನೌಕೆಯನ್ನೂ ಪಥಕ್ಕೆ ಸೇರಿಸುವ ನಿರೀಕ್ಷೆ ಇದೆ.

ಬೈಕೋನುರ್ ಒಡ್ಯಾಣ ನೆಲೆಯಿಂದ ಈ ನೌಕೆಯನ್ನು ಹಾರಿಸಲಾಗಿದೆಯೆಂದು ಬಲ್ಲಮೂಲಗಳು ತಿಳಿಸಿವೆ.

 

ಗುಜರಾತ್‌ ಗಲಭೆಗಳಿಗೆ ಪೂರ್ವಸಿದ್ಧತೆ; ಪೂರ್‍ವಾಲೋಚನೆ: ಜಯಪ್ರಕಾಶ್ ವಿಶ್ಲೇಷಣೆ

ನವದೆಹಲಿ, ಅ. 12– ಗುಜರಾತಿನಲ್ಲಿ ಇತ್ತೀಚೆಗೆ ನಡೆದ ಗಲಭೆಗಳು ಕೇವಲ ಪೂರ್ವ ಸಿದ್ಧತೆಯಿಂದ ನಡೆದಿರುವುದು ಮಾತ್ರವಲ್ಲದೆ ಪೂರ್ವಲೋಚನೆಯಿಂದಲೂ ನಡೆದಿದೆ ಎಂದು ಸರ್ವೋದಯ ನಾಯಕ ಜಯಪ್ರಕಾಶ್‌ ನಾರಾಯಣ್ ಅವರು ಹೇಳಿದ್ದಾರೆ.

ಈ ರಾಜ್ಯದಲ್ಲಿ ವ್ಯಾಪಕ ಪ್ರವಾಸ ಮಾಡಿ ಗಲಭೆಗಳಿಂದ ಸಂತ್ರಸ್ತರಾಗಿರುವವರನ್ನು ಭೇಟಿ ಮಾಡಿರುವ ಜಯಪ್ರಕಾಶ್ ಅವರು ಈ ವಿಷಯವನ್ನು ‘ಸಿಟಿಜನ್’ ಪತ್ರಿಕೆಯಲ್ಲಿ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.

 ಆರ್ಥಿಕ ಆಯೋಗದ ಪ್ರತಿಕೂಲ ಶಿಫಾರ್ಸ್:  ರಾಜ್ಯಕ್ಕೆ ಕೇಂದ್ರದಿಂದ ಪರಿಹಾರ ಸಂಭವ

ನವದೆಹಲಿ, ಅ. 12– ಐದನೇ ಹಣಕಾಸು ಆಯೋಗದ ಶಿಫಾರಸುಗಳಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗಿರುವ ಮೈಸೂರು ಮತ್ತು ಕೇರಳ ರಾಜ್ಯಗಳಿಗೆ ಪ್ರಸಕ್ತ ವರ್ಷದಲ್ಲಿ ಸ್ವಲ್ಪಮಟ್ಟಿಗೆ ಪರಿಹಾರ ದೊರಕಿಸಿಕೊಡುವ ಪ್ರಶ್ನೆಯನ್ನು ಭಾರತ ಸರಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.

ರಾಜ್ಯಗಳ ಸಂಪನ್ಮೂಲಗಳ ಮರು ಅಂದಾಜಿನ ಬೆಳಕಿನಲ್ಲಿ ಇಂತಹ ನೆರವು ಸಾಧ್ಯವೆಂದೂ ಗೊತ್ತಾಗಿದೆ. ಐದನೇ ಹಣಕಾಸು ಆಯೋಗದ ವರದಿ ಪ್ರಕಟವಾದ ಮೇಲೆ ಯೋಜನಾ ಆಯೋಗವು ಸಂ‍ಪ‍ನ್ಮೂಲಗಳ ಮರು ಅಂದಾಜಿನ ಕಾರ್ಯವನ್ನು ಕೈಗೊಂಡಿದೆ. 

Post Comments (+)