ಸೋಮವಾರ, ಆಗಸ್ಟ್ 15, 2022
24 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಶುಕ್ರವಾರ 11–9–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದಲ್ಲಿ ಉತ್ತರ ನೀಡಲು ಆದೇಶ

ಬೆಂಗಳೂರ, ಸೆ. 10– ಕನ್ನಡದಲ್ಲಿ ಯಾರಾದರೂ ಅರ್ಜಿ ಸಲ್ಲಿಸಿದರೆ ಕನ್ನಡದಲ್ಲೇ ಉತ್ತರ ನೀಡಿ. ಇದು ಸರಕಾರದ ಅಧಿಕಾರಿಗಳಿಗೆ ನೀಡಿರುವ ಆದೇಶ.

ಕನ್ನಡದಲ್ಲಿ ಪತ್ರ ವ್ಯವಹಾರ ಅಗತ್ಯವನ್ನು ಪರಿಗಣಿಸಿರುವ ಸರಕಾರವು ಇಲಾಖಾ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಕನ್ನಡದಲ್ಲಿ ಬರುವ ಸಾರ್ವಜನಿಕರ ಅರ್ಜಿ ಅಥವಾ ಪತ್ರಗಳಿಗೆ ತಪ್ಪದೆ ಕನ್ನಡದಲ್ಲೇ ಉತ್ತರ ಕಳುಹಿಸಬೇಕೆಂದು ಕೋರಿದೆಯಲ್ಲದೆ ತಮ್ಮ ಅಧೀನ ಅಧಿಕಾರಿಗಳಿಗೂ ಅದೇ ರೀತಿ ಆದೇಶ ನೀಡಬೇಕೆಂದು ಸೂಚಿಸಿದೆ.

ಸಚಿವ ಪದವಿ ಆಮಿಷ ಆಡಳಿತ ಕಾಂಗ್ರೆಸ್‌ ಯತ್ನ

ಲಖನೌ, ಸೆ. 10– ಆಡಳಿತ ಕಾಂಗ್ರೆಸ್‌ಗೆ ಪಕ್ಷಾಂತರಗೊಳ್ಳುವುದಾದರೆ ಸಚಿವ ಪದವಿಗಳನ್ನು ಕೊಡಿಸುವುದಾಗಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ಬಹುಗುಣ ಅವರು ತಮಗೆ ಮತ್ತು ತಮ್ಮ ಸಹೋದ್ಯೋಗಿ ಶ್ರೀ ಓಂ ಪ್ರಕಾಶ್‌ ಸಿಂಗ್‌ ಅವರಿಗೆ ಆಸೆ ತೋರಿಸಿದುದಾಗಿ ಉತ್ತರ ಪ್ರದೇಶದ ಉಪಸಚಿವ ಶ್ರೀ ರಾಂ ಪ್ರಸಾದ್‌ ದೇಶಮುಖ್‌ ಅವರು ಇಂದು ಇಲ್ಲಿ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು