ಬುಧವಾರ, 9–7–1969

ಗುರುವಾರ , ಜೂಲೈ 18, 2019
28 °C

ಬುಧವಾರ, 9–7–1969

Published:
Updated:

ಮುಖ್ಯಮಂತ್ರಿ ಸ್ಥಾನ ತ್ಯಾಗ: ಬ್ರಹ್ಮಾನಂದರೆಡ್ಡಿ ಪುನರುಚ್ಚಾರ

ಹೈದರಾಬಾದ್, ಜುಲೈ 8– ತೆಲಂಗಾಣದ ವ್ಯಕ್ತಿಯೊಬ್ಬರನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದಕ್ಕೆ ಅನುವಾಗುವಂತೆ ತಾವು ಮುಖ್ಯಮಂತ್ರಿ ಪದವಿ ತ್ಯಜಿಸುವ ನಿರ್ಧಾರವನ್ನು ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರು ಇಂದು ಇಲ್ಲಿ ಪುನರುಚ್ಚರಿಸಿದರು.

ಏ.ಐ.ಸಿ.ಸಿ. ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಬೆಂಗಳೂರಿಗೆ ಪ್ರಯಾಣ ಮಾಡುವ ಮುನ್ನ ತೆಲಂಗಾಣ ನಾಯಕರ ಅಭಿಪ್ರಾಯ ತಿಳಿಯುವುದಕ್ಕಾಗಿ ಅವರೊಡನೆ ಸಮಾಲೋಚಿಸಿದರು.

ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಹೆಚ್ಚು ಭಿನ್ನಮತವಿರದು: ಎಸ್ಸೆನ್

ಬೆಂಗಳೂರು, ಜುಲೈ 8– ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆರಿಸುವುದರಲ್ಲಿ ‘ಹೆಚ್ಚು ಭಿನ್ನಾಭಿಪ್ರಾಯ’ವಿರುವುದಿಲ್ಲವೆಂಬುದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರ ನಂಬಿಕೆ.

ಬೆಂಗಳೂರು ಏ.ಐ.ಸಿ.ಸಿ. ಅಧಿವೇಶನ ಮುಗಿಯುವ ಮುನ್ನ, ಪಾರ್ಲಿಮೆಂಟರಿ ಬೋರ್ಡ್ ಅಭ್ಯರ್ಥಿಯನ್ನು ಆರಿಸುವ ಆಶಯವನ್ನು ಅವರು ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !