ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 21–8–1969

Last Updated 20 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

‘ಮನಸ್ಸಾಕ್ಷಿ’ಯ ಅಭ್ಯರ್ಥಿ ವಿ.ವಿ. ಗಿರಿ ಭಾರತದ ಹೊಸ ರಾಷ್ಟ್ರಪತಿ

ನವದೆಹಲಿ, ಆ. 20– ಕಾಂಗ್ರೆಸ್ಸಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಅವರ ಬೆಂಬಲಿಗರು ಮತ್ತು ಅನೇಕ ವಾಮವಾದಿ ಗುಂಪುಗಳ ಬೆಂಬಲ ಪಡೆದ ‘ಮನಸ್ಸಾಕ್ಷಿ ಅಭ್ಯರ್ಥಿ’ 75 ವರ್ಷ ವಯಸ್ಸಿನಶ್ರೀ ವಿ.ವಿ. ಗಿರಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಶ್ರೀ ನೀಲಂ ಸಂಜೀವರೆಡ್ಡಿ ಅವರನ್ನು ಅಷ್ಟೇನೂ ಭಾರಿಯಲ್ಲದಿದ್ದರೂ ನಿರ್ಣಾಯಕ ಬಹುಮತದಿಂದ ಪರಾಭವಗೊಳಿಸಿ ಭಾರತ ಗಣರಾಜ್ಯದ ನಾಲ್ಕನೇ ರಾಷ್ಟ್ರಪತಿಯಾಗಿ, ಇಂದು ರಾತ್ರಿ ಆಯ್ಕೆಯಾದರು.

ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡುದು ಭಾರತ ಗಣರಾಜ್ಯದ 19 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು. ಸ್ವತಂತ್ರ ಭಾರತದಲ್ಲಿ ರಾಜಕೀಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವಪೂರ್ಣವೆನಿಸಿದ ರಾಷ್ಟ್ರಪತಿ ಚುನಾವಣೆ. ಶ್ರೀ ಗಿರಿ ಅವರು 14,650 ಮತಗಳ ಅಂತರದಿಂದ, ಶ್ರೀ ಸಂಜೀವರೆಡ್ಡಿ ಅವರನ್ನು ಸೋಲಿಸಿದರು.

11 ರಾಜ್ಯಗಳಲ್ಲಿ ಗಿರಿಗೆ ಬಹುಮತ

ನವದೆಹಲಿ, ಆ. 20– ರಾಷ್ಟ್ರಪತಿ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾದ ಶ್ರೀ ವಿ.ವಿ. ಗಿರಿಯವರು ಹನ್ನೊಂದು ರಾಜ್ಯಗಳಲ್ಲಿ ಬಹಮತ ಗಳಿಸಿದರು. ಅವರ ಸಮೀಪ ಸ್ಪರ್ಧಿ ಕಾಂಗ್ರೆಸ್ಸಿನ ಸಂಜೀವರೆಡ್ಡಿಯವರಿಗೆ ಹೆಚ್ಚು ಬಹುಮತ ಗಳಿಸಿಕೊಟ್ಟ ರಾಜ್ಯಗಳೆಂದರೆ: ಮೈಸೂರು, ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್.

ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಪ್ರಮುಖ ಅಭ್ಯರ್ಥಿಗಳೂ ಆಂಧ್ರದವರೇ. ಎನ್. ಸಂಜೀವರೆಡ್ಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ವಿ.ವಿ. ಗಿರಿ ಪಕ್ಷೇತರ ಅಭ್ಯರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT