ರೈತರೊಂದಿಗೆ ಚೆಲ್ಲಾಟ

7

ರೈತರೊಂದಿಗೆ ಚೆಲ್ಲಾಟ

Published:
Updated:

ವಿಡಿಯೊ ಕಾನ್ಫರೆನ್ಸ್ ಮೂಲಕ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ‘ರೈತರ ಆದಾಯ ದ್ವಿಗುಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿರುವುದು ವರದಿಯಾಗಿದೆ (ಪ್ರ.ವಾ., ಜೂನ್‌ 21). ಆದರೆ ವಾಸ್ತವ ಬೇರೆಯೇ ಇರುವುದು ಎಲ್ಲರಿಗೂ ಗೊತ್ತಿದೆ.

ಅಧಿಕಾರಕ್ಕೆ ಬಂದರೆ ಡಾ.ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿ, ಗದ್ದುಗೆ ಏರಿದಂದಿನಿಂದ ಈವರೆಗೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿರುವುದು ಸ್ಪಷ್ಟ.

ಎರಡು ದಶಕಗಳಿಂದ ದೇಶದಾದ್ಯಂತ ಒಂದು ಪಿಡುಗಿನ ರೀತಿಯಲ್ಲಿ ಆವರಿಸಿಕೊಂಡಿರುವ ರೈತರ ಆತ್ಮಹತ್ಯಾ ಪ್ರವೃತ್ತಿಯನ್ನು ತಡೆಯಲು ಮೋದಿ ನೇತೃತ್ವದ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಕೃಷಿ ಕ್ಷೇತ್ರದ ಬಿಕ್ಕಟ್ಟಿನ ನಿರ್ವಹಣೆಯ ವಿಷಯದಲ್ಲಿ ರಾಜಕೀಯ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿ ಬೇಕು. ಅದು ಈ ಸರ್ಕಾರದ ಬಳಿ ಇಲ್ಲದಿರುವುದರಿಂದಲೇ ಈ ರೀತಿಯ ವಿಡಿಯೊ ಕಾನ್ಫರೆನ್ಸ್‌ಗಳ ಮೂಲಕ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ. ಒಂದು ಮಾತು ಸತ್ಯ; ಹುಸಿ ಭರವಸೆಗಳ ಮೂಲಕ ರೈತರೊಂದಿಗೆ ಚೆಲ್ಲಾಟವಾಡುವುದು ಆಷಾಢಭೂತಿ ರಾಜಕಾರಣವೇ ವಿನಾ ಬೇರೇನೂ ಅಲ್ಲ. ಏರುತ್ತಿರುವ ಕೃಷಿವೆಚ್ಚ ತಗ್ಗಿಸಿ, ಬೆಳೆಗಳಿಗೆ ನ್ಯಾಯಯುತ ಬೆಲೆ ದೊರಕಿಸಲು ಇನ್ನಾದರೂ ಸರ್ಕಾರ ಮುಂದಾಗಬೇಕು.

–ಅಯ್ಯಪ್ಪ ಹೂಗಾರ್, ಮೈಸೂರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !