ನೀವು ಕತೆಗಾರರಾಗಿ ರೂಪುಗೊಂಡದ್ದು ಹೇಗೆ?

ಸಾಹಿತ್ಯ ರಚನೆ ಸಾಮಾನ್ಯವಾಗಿ ಎಲ್ಲರಿಗೂ ಹುಟ್ಟುಗುಣ ಆಗಿರಲ್ಲರಿ. ಯಾವಾಗೋ ಬೆಳಿತಾ ಆ ಆಸಕ್ತಿ ಮೂಡಿ ಅದಕ್ಕೆ ಅವಕಾಶ ಸಿಗುತ್ತೆ. ನಾನು ಬಾಲ್ಯದಲ್ಲಿ ರೈತಾಪಿ ಕೂಡುಕುಟುಂಬದಲ್ಲಿ ಬೆಳೆದವನು. ಹಾಗೆ ಹೊಲ, ಮನೆ ಕೆಲಸ ಮಾಡಿಕೊಂಡು ಚೂರುಪಾರು ಓದ್ತಾ ಇದ್ದವನು. ಆ ಸಂದರ್ಭದಲ್ಲಿ ನನಗೆ ಕುವೆಂಪು ಅವರ ಕಾದಂಬರಿಗಳು ಸಿಕ್ಕವು. ಮನುಷ್ಯನ ಬಾಳ್ವೆಯನ್ನು ಕತೆ ಮಾಡೊ ವಿಚಾರದಲ್ಲಿ ನಾನೂ ಬರೀಬಹುದಲ್ಲ ಅನ್ನೊ ಪ್ರೇರಣೆ ಅವುಗಳಿಂದ ಆಯಿತು. ಆಗ ನನಗೆ ಸಾಹಿತ್ಯದ ಗಂಧಗಾಳಿ ಅಷ್ಟಾಗಿ ಇರಲಿಲ್ಲ. ಮುಂದೆ ಹತ್ತು ಹದಿನೈದು ವರ್ಷಗಳಲ್ಲಿ ನಾನು ನಿಧಾನವಾಗಿ ಸಣ್ಣ ಕತೆಗಳನ್ನ ಬರೆಯುವುದಕ್ಕೆ ತೊಡಗಿದೆ.

ನಿಮ್ಮ ಆರಂಭದ ಕತೆಗಳಲ್ಲಿ ಸಾಮಾಜಿಕ ವಾಸ್ತವ ಹೆಚ್ಚು ನಿರೂಪಣೆಯಾಗಿದೆ. ನಂತರದ ಕತೆಗಳಲ್ಲಿ ಕಲ್ಪಿತ ವಾಸ್ತವನು ಸೇರಿಕೊಂಡಿದೆ. ಕಲ್ಪನೆನ ಬೆಸೆದು ಆಶಯಕ್ಕೆ ತಕ್ಕ ಹಾಗೆ ಕತೆ ಕಟ್ಟುವ ಕೌಶಲ ನಿಮ್ಮಲ್ಲಿ ಹೇಗೆ ಸಂಭವಿಸ್ತು?

ಅದು ನನಗೂ ಸ್ವಲ್ಪ ವಿಸ್ಮಯದ್ದೆ. ನಮ್ಮ ಊರಲ್ಲಿರುವ ಪಾತ್ರ, ಅವಕ್ಕೆ ಸಂಬಂಧಿಸಿದ ಸನ್ನಿವೇಶಗಳು ಮತ್ತವರ ಪರಿಸರ ಎಲ್ಲವನ್ನು ವಾಸ್ತವದ ರೀತಿಯಲ್ಲಿಯೇ ನಾನು ಗ್ರಹಿಸಿದ್ದೀನಿ ಮತ್ತು ಬರೆದಿದ್ದೀನಿ. ಹಾಗೆ ಮೊದಮೊದಲ ಕತೆಗಳನ್ನ ನಾನು ಯಥಾವತ್ತಾಗಿ ಯಾವ ಕಲ್ಪನೆ ಇಲ್ಲದೆ ಬರೆದಿದಿನಿ. ಆದರೆ ಆಕಸ್ಮಿಕವಾಗಿ ಅದನ್ನು ಓದಿದ ನಮ್ಮೂರ ಜನ ಅದನ್ನು ಸಹಿಸಲಿಲ್ಲ. ಅವುಗಳಲ್ಲಿನ ವಿಷಯಕ್ಕೆ ಅವರಿಗೆ ಆಕ್ರೋಶ ಬಂತು. ಅವಾಗ ನನ್ನ ಗುರುಗಳಾದ ಶಾಂತರಸರು ಸಮುದಾಯಗಳು ವಾಸ್ತವ ತಡ್ಕೊಳ್ಳಲ್ಲ; ಅದಕ್ಕಾಗಿ ನೀನು ತಂತ್ರಗಳನ್ನು ಹುಡುಕಬೇಕು ಅಂದರು. ಆವಾಗ ನಾನು ಕಲ್ಪನೆ ಸೇರಿಸಿಕೊಳ್ಳಲಿಕ್ಕೆ ತೊಡಗಿದೆ. ಅಲ್ಲಿಂದ ನಾನು ವಾಸ್ತವ ಮತ್ತು ಕಲ್ಪನೆಯ ಸಮ್ಮೇಳನ ಮಾಡುವುದಕ್ಕೆ ಪ್ರಯತ್ನ ಪಟ್ಟು ಮುಂದಿನ ಕತೆಗಳಲ್ಲಿ ಅದನ್ನ ಮಾಡಿಕೊಂಡು ಹೋಗಿದ್ದೇನೆ.

ಕಾದಂಬರಿ, ಕವಿತೆ ಪ್ರಕಾರಗಳಿಗೆ ನೀವು ತುಂಬಾ ತಡವಾಗಿ ಪ್ರವೇಶ ಮಾಡೋದಕ್ಕೆ ಏನಾದರೂ ಕಾರಣ ಇದಾವ?

ನಾನು ಆರಂಭದಿಂದಲೂ ಬರೆದರೆ ಕಾದಂಬರಿನೆ ಬರಿಬೇಕು ಅನ್ನೊ ಒತ್ತಡದಲ್ಲಿ ಇದ್ದೆ. ಆದರೆ ನನ್ನ ಕೆಲಸದ ಸ್ವರೂಪದಿಂದಾಗಿ ತುಂಬಾ ಹೊತ್ತು ಕುಳಿತು ಬರೆಯೊ ಅವಕಾಶವಾಗಲಿ, ಸಮಯವಾಗಲಿ ಸಿಗದೆ ಹೋದ್ದರಿಂದ ಸಣ್ಣ ಕತೆಗಳನ್ನು ಬರಿತಾ ಹೋದೆ. ನಿವೃತ್ತಿ ಹೊಂದುವ ಸಮಯದಲ್ಲಿ ನನಗೆ ಒಂದಿಷ್ಟು ದೀರ್ಘ ರಜೆ ಸಿಕ್ಕಿದಾಗ ಎರಡು ಕಾದಂಬರಿಗಳನ್ನ ಬರೆದೆ.

ವಿದ್ವಾಂಸರು ನನ್ನ ಕತೆಗಳನ್ನು ಕಾದಂಬರಿಯ ಲಕ್ಷಣ ಇರೊ ಕತೆಗಳು ಅಂತ ಕರೀತಾರೆ. ಎಂತಾ ದೊಡ್ಡ ಕತೆನೇ ಇರಲಿ, ಅದನ್ನ ಸಣ್ಣ ಕತೆಯನ್ನಾಗಿ ಪರಿವರ್ತಿಸುವ ಒಂದು ಜಾಣ್ಮೆ ನನಗೆ ಮೊದಲೆ ಕರಗತ ಆಯ್ತು. ನಾನು ಬಹಳ ದೀರ್ಘಕಾಲ ಆಲೋಚನೆ ಮಾಡಿ ಅದನ್ನ ನನ್ನ ಮನಸ್ಸಿನಲ್ಲಿಯೇ ಬರೆದುಕೊಂಡು ಆನಂತರ ಅಕ್ಷರಗಳಿಗೆ ಇಳಿಸುತ್ತಿದ್ದೆ. ಹೀಗಾಗಿ ನಾನು ಕಾದಂಬರಿಯ ಒಳಗೆ ಸಣ್ಣ ಕತೆಯ ಸ್ವರೂಪನು ಕತೆಯ ಒಳಗೆ ಕಾದಂಬರಿಯ ಸ್ವರೂಪನು ಇಟ್ಟುಕೊಂಡಿದ್ದೀನಿ.

ಹಂಪಿ ಕನ್ನಡ ವಿವಿಗೆ ಸೇರಿದ ನಂತರ ಅಲ್ಲಿನ ಕರ್ತವ್ಯದ ಭಾಗವಾಗಿ ನೀವು ವಿಮರ್ಶೆ, ಸಂಶೋಧನೆ, ಸಂಪಾದನೆ ಹೀಗೆ ತೊಡಗಿಕೊಂಡ್ರಿ. ಇವುಗಳ ನಡುವೆ ಸಂಘರ್ಷ ಉಂಟಾಯ್ತಾ? ಅಥವಾ ನಿಮ್ಮೊಳಗಿನ ಕತೆಗಾರನಿಗೆ ಇದೆಲ್ಲ ಹೇಗೆ ಬಳಕೆ ಆಯ್ತು?

ಕನ್ನಡ ವಿಶ್ವವಿದ್ಯಾಲಯಕ್ಕೆ ಆರಂಭದಲ್ಲಿ ಬಂದ ಪ್ರಖರ ವೈಚಾರಿಕತೆ, ಬೌದ್ಧಿಕತೆ ಉಳ್ಳ ವಿದ್ವಾಂಸರ ಜೊತೆ ನಿತ್ಯವೂ ಒಡನಾಡ್ತಾ ಇದ್ದೆ. ನನ್ನನ್ನು ಆ ವಿದ್ವಾಂಸರು ಒಬ್ಬ ಕತೆಗಾರನನ್ನಾಗಿ ನೋಡಿದರೆ ಹೊರತು ಒಬ್ಬ ಸಂಶೋಧಕ ಮತ್ತು ವಿದ್ವಾಂಸನನ್ನಾಗಿ ನೋಡಲಿಲ್ಲ. ಆ ದಿಕ್ಕಿಗೆ ನನ್ನನ್ನು ಕರೆದೊಯ್ಯಲೂ ಇಲ್ಲ. ಆದರೆ; ನನ್ನ ಗ್ರಾಮೀಣ ಭಾಷೆ ಇತ್ತಲ್ಲ, ಅದು ಉದ್ಯೋಗ ನಿಮಿತ್ತ ತನ್ನ ಮೂಲ ಶೈಲಿಯನ್ನೆ ಕಳಕೋತು. ನೀವು ಆನಂತರದ ಸಂಕಲನಗಳ್ನ ನೋಡ್ರಿ, ಅಲ್ಲಿ ಡೈಲಾಗ್ ಮಾತ್ರ ಉಳಿಸಿಕೊಂಡಿದ್ದೀನಿ. ನಿರೂಪಣಾ ಭಾಷೆ ಬದಲಾಗಿದೆ. ಅಂದ್ರೆ ವಿಮರ್ಶೆಗೆ, ಸಂಶೋಧನೆಗೆ ಒಂದು ಭಾಷೆ ಇರುತ್ತಲ್ಲ, ಅದು ಕತೆಗೂ ಬರುತ್ತೆ. ಆದರೆ; ನಾನು ಕತೆಗೆ ಆಯ್ಕೆ ಮಾಡಿಕೊಂಡ ವಸ್ತು, ಪಾತ್ರಗಳು ಮತ್ತು ಸನ್ನಿವೇಶಗಳು ಪ್ರಾದೇಶಿಕವಾಗಿಯೇ ಇರಬೇಕು ಅನ್ನುವುದನ್ನ ಬಹಳ ಶ್ರಮದಿಂದ, ಶ್ರದ್ಧೆಯಿಂದ ರೂಢಿಸಿಕೊಳ್ಳೋಕೆ, ಉಳಿಸಿಕೊಳ್ಳೋಕೆ ನಾನು ಪ್ರಯತ್ನಪಟ್ಟಿದ್ದೀನಿ. ಹಾಗೆ ಭಾಷೆನು ಪ್ರಾದೇಶಿಕವಾಗಿ ಎಚ್ಚರದಿಂದ ರೂಢಿಸಿಕೊಂಡು ಬಂದಿದ್ದೀನಿ.

ನಮ್ಮ ಸುತ್ತ ದೊಡ್ಡ ದೊಡ್ಡ ಸಾಮಾಜಿಕ ಸಮಸ್ಯೆಗಳಿದಾವೆ. ಇವನ್ನೆಲ್ಲ ನಾನು ಬರಿಬೇಕಾಗಿತ್ತು; ಆತರ ಉಳಿದುಕೊಂಡಂತಹ ಸಂಗತಿ ಯಾವಾದರೂ ಇದಾವಾ?

ಒಂದಲ್ಲ ಎರಡಲ್ಲ ಬಹಳನೆ ಅದಾವರಿ. ನಾವು ವರ್ತಮಾನದಲ್ಲಿ ಎಷ್ಟು ಇದ್ದೀವೊ ಅದಕ್ಕಿಂತ ಭೂತದಲ್ಲಿ ಹೆಚ್ಚಿದ್ದವರು. ಹಂಗಾಗಿ ಭೂತದಿಂದ ಕಳಚಿಕೊಂಡು ಅತ್ಯಂತ ಪ್ರಖರವಾದ ವರ್ತಮಾನದ ಬದುಕನ್ನು ಹಿಡಿಯುವ ಕತೆಗಾರರು ಕನ್ನಡದಲ್ಲಿ ಬಹಳ ಕಡಿಮೆ. ನಾವು ವರ್ತಮಾನ ಬರ್ದಿಲ್ಲ. ಇದು ಬರೀಲಿಲ್ಲ ಅನ್ನುವ ಹಲವು ಉಳಿಕೆಗಳು ನನ್ನಲ್ಲಿ ಇವೆ.

ಇವತ್ತಿನ ಈ ವರ್ತಮಾನದ ಬರ್ನಿಂಗ್ ಇಶ್ಯೂಸ್ಗಳನ್ನ ಕತೆ ಕಟ್ಟೋದಕ್ಕೆ ಬರೊ ಹೊಸಬರಿಗೆ ನಿಮ್ಮ ಸಲಹೆ...

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಲವರು ಹಿಂದೆ ಏನು ಒಂದು ದನಿಯನ್ನ ರೂಪಿಸಿಕೊಂಡು, ವಿಸ್ತರಿಸಿಕೊಂಡು ಒಂದು ಚಳವಳಿಯಾಗಿ ಬೆಳೀತಿದ್ರು; ಒಂದು ಯುಗಧರ್ಮದ ತಾತ್ವಿಕತೆಯಲ್ಲಿ ಬರೀತಾ, ಕಟ್ತಾ ಅವರವರ ಅನನ್ಯತೆನು ಉಳಿಸಿಕೊತಿ ದ್ರು; ಅಂತಾ ನೂರಾರು ದನಿಗಳಲ್ಲಿ ಒಂದು ಏನೋ ಕಾಜ್ ಇರ್ತಿತ್ತು. ಆದರೆ ಈಗ ಕೂಡುದನಿಲಿ ಮಾತಾಡೊ ಕಾಲ ಮುಗಿದು ಹೋಗಿದೆ ಅನ್ನಿಸ್ತಿದೆ. ಈಗಿನವರು ತಮ್ಮ ಸೀಮಿತವಾದ ಅನುಭವಗಳನ್ನ ಒಂದೊಂದು ಕತೆ ಒಂದೊಂದು ಕವಿತೆ ಮಾಡ್ತಾ ಹೋಗ್ತಾ ಇದ್ದಾರೆ.

ಅಂದರೆ ಕಾಮನ್ ಪರ್ಪಸ್ ಹಿನ್ನೆಲೆನಲ್ಲಿ ಒಂದು ಇಡೀ ಸಮುದಾಯ ದನಿಯೆತ್ತಿ ಮಾತಾಡೊ ತರಹದ ಸಂಘಟಿತವಾದ ಪ್ರಯತ್ನಗಳು ನಡಿತಾ ಇಲ್ಲ ಅಂತೀರ?

ಹೌದು, ನಡೀತಾ ಇಲ್ಲ. ಮತ್ತೆ ಆ ಕಾಮನ್ ಕಾಜ್ ಅನ್ನೋದು ಇವತ್ತಿನ ತಲೆಮಾರಿನಲ್ಲಿಯೇ ಹುಟ್ಟಬೇಕೆ ಹೊರತು; ಅದು ಯಾರೋ ಹಿಂದಿನವರು ನೀವು ಹಿಂಗೆ ಆಗಿ ಅಂತ ಹೇಳಕಾಗದು. ಹಾಗೆನೆ ಹಳೆಯ ಚಳವಳಿಗಳನ್ನ ಮರು ಸ್ಥಾಪಿಸುವುದಕ್ಕು ಸಾಧ್ಯವಿಲ್ಲ. ಇಲ್ಲಿ ಫೀಲ್ಡಿನಲ್ಲಿ ನಿಂತ್ಕೊಬೇಕು. ಇವರ ವಯಸ್ಸಿನವರು ಎಲ್ಲ ಏನ್ಏನ್ ಅನುಭವಿಸುತ್ತಾ ಇದ್ದಾರೆ ಅದಕ್ಕೆ ಇವರೇ ಒಂದು ರೂಪ ಕೊಡಬೇಕು. ಪ್ರಕಾರ ಯಾವುದೇ ಇರಲಿ, ಸರಿಯಾದ ಒಂದು ತಾತ್ವಿಕತೆ ಹೊಂದಿರಬೇಕು ಅಂತ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-1462867594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.