ಗುರುವಾರ , ಮೇ 26, 2022
27 °C

ವಾಚಕರ ವಾಣಿ| ನಡೆ– ನುಡಿ ಒಂದಾಗಿಲ್ಲದವರ ಮಾತೆಂದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ಪ್ರೌಢಶಾಲಾ ವಿದ್ಯಾರ್ಥಿಗಳ ಪುಂಡಾಟಿಕೆಯನ್ನು ಆಧಾರವಾಗಿಟ್ಟುಕೊಂಡು ಎರಡು ಲೇಖನಗಳನ್ನು ಬರೆಯಲಾಗಿದೆ (ಸಂಗತ, ಡಿ. 24 ಮತ್ತು 25). ವಿದ್ಯಾರ್ಥಿಗಳ ಇಂತಹ ವರ್ತನೆಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಒಂದು, ವಿದ್ಯಾರ್ಥಿಗಳು ತಮ್ಮ ಬಗ್ಗೆ ಭಯ-ಭಕ್ತಿಯಿಂದ ಇರಬೇಕು ಎಂದು ಶಿಕ್ಷಕರು ಬಯಸುವುದು. ಆದರೆ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯ ಇರಬಾರದು, ಗೌರವ ಇರಬೇಕು. ಇದು ತೋರಿಕೆಯ ಗೌರವವಾಗಬಾರದು. ಈ ರೀತಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರಭಾವಿಸಬೇಕು. ಆದರೆ ನಡೆ-ನುಡಿ ಒಂದಾಗಿಲ್ಲದ ಶಿಕ್ಷಕ ಎಷ್ಟೇ ನೀತಿ, ಮೌಲ್ಯಗಳನ್ನು ಹೇಳಿದರೂ ವಿದ್ಯಾರ್ಥಿಗಳು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಯಾವುದು ಸರಿ ಯಾವುದು ತಪ್ಪು ಎಂದು ವಿವೇಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಹೊಂದಿರುವುದಿಲ್ಲ. ಸಾಮಾಜಿಕ ಜಾಲತಾಣಗಳು ಅವರ ಮೇಲೆ ಪ್ರಭಾವ ಬೀರುತ್ತಿವೆ. ಇಂತಹವುಗಳಿಂದ ವಿದ್ಯಾರ್ಥಿಗಳನ್ನು ದೂರ ಇರಿಸುವುದು ಪೋಷಕರು ಹಾಗೂ ಶಿಕ್ಷಕರಿಗೆ ಸವಾಲಿನ ವಿಷಯವಾಗಿದೆ.

ಶಿವಕುಮಾರ್ ಎಸ್., ಊರುಕೆರೆ, ತುಮಕೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.