ಆಭರಣಗಳ ಕಣಜ ‘ಸೋಕ್ ಮಾರ್ಕೆಟ್’

ಸೋಮವಾರ, ಏಪ್ರಿಲ್ 22, 2019
29 °C

ಆಭರಣಗಳ ಕಣಜ ‘ಸೋಕ್ ಮಾರ್ಕೆಟ್’

Published:
Updated:
Prajavani

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ತಾರ ಹಾಗೂ ಗ್ರಾಂಡ್ ಫ್ಲಿಯಾ ಮಾರ್ಕೆಟ್ ಜಂಟಿ ಸಹಯೋಗದಲ್ಲಿ ಆಯೋಜಿಸಿರುವ ಯುಗಾದಿ ಶಾಪಿಂಗ್ ಕಾರ್ನಿವಲ್ - ದ ಸೋಕ್ ಮಾರ್ಕೆಟ್‌ಗೆ ನಟಿ ಜಯಶ್ರೀ ರಾಜ್ ಚಾಲನೆ ನೀಡಿದರು. 

‘ಒಗ್ಗರಣೆ ಡಬ್ಬಿ’ ಅಡುಗೆ ಕಾರ್ಯಕ್ರಮ ಖ್ಯಾತಿಯ ಮುರಳಿ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಕಮಲಾಕ್ಷಿ, ಟೋಕಿಯೋದಲ್ಲಿರುವ ಸ್ಟೇಟ್‌ ಟ್ರೇಡಿಂಗ್‌ ಕಾರ್ಪೋರೇಷನ್ ಆಫ್ ಇಂಡಿಯಾದ ಸ್ಟೇತ್ಸುಕೊ ಓಕಾವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೋಂ ಡೆಕೋರ್‌ಗಳು, ಲ್ಯಾಂಪ್‌ಶೇಡ್‌ಗಳು, ಹ್ಯಾಂಡ್‌ಲೂಮ್ಸ್, ಹ್ಯಾಂಡ್‌ಕ್ರಾಫ್ಟ್‌ಗಳು, ತಂಜಾವೂರ್ ಪೇಂಟಿಂಗ್‌ಗಳು, ಮಧುಬನಿ, ಒರಿಸ್ಸಾ ಪೇಂಟಿಂಗ್‌ಗಳು, ಕೋಲ್ಕತ್ತಾ ಪೇಂಟಿಂಗ್‌ಗಳು ಇಲ್ಲಿವೆ.

ಕಾಶ್ಮೀರಿ, ಕೋಲ್ಕತ್ತಾ, ಹುಬ್ಬಳ್ಳಿ, ಮಣಿಪುರ, ಚಂದೇರಿ, ಕಾಂತವರ್ಕ್, ಕಲಾಂಕರಿ, ಲಿನನ್‌ ಸಿಲ್ಕ್ ಮತ್ತು ಬಾಗಲ್ಪುರಿ ಸೀರೆಗಳು ಇಲ್ಲಿನ ಪ್ರಮುಖ ಆಕರ್ಷಣೆ.

ವಿವಿಧ ವಿನ್ಯಾಸದ ಕುರ್ತಿಗಳು, ಲಖನೌ, ಕಲಾಂಕರಿ, ಕೋಲ್ಕತ್ತಾ, ಗುಜರಾತಿ, ಬಾಂದಿನಿ ಕುರ್ತಾಗಳು, ರಾಜಸ್ಥಾನಿ ಮತ್ತು ಗುಜರಾತಿ ಬೆಡ್‌ಶೀಟ್‌ಗಳು, ಕರ್ಟನ್‌ಗಳು, ಕಾಶ್ಮೀರಿ ಕಾರ್ಪೆಟ್‌ಗಳು, ಮ್ಯಾಟ್‌ಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ.   ಒರಿಸ್ಸಾ, ರಾಜಸ್ಥಾನಿ ಆಭರಣಗಳ ಜತೆಗೆ ಮಣ್ಣಿನಿಂದ ಮಾಡಿರುವ ಹ್ಯಾಂಡ್‌ಮೇಡ್ ಆಭರಣಗಳು ಆಕರ್ಷಕ ದರದಲ್ಲಿ ಲಭ್ಯ.

ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಮಾಡಿ ಅವರ ಲಾಭ ಹೆಚ್ಚಿಸುವ ಉದ್ದೇಶವನ್ನು ದ ಸೋಕ್ ಮಾರ್ಕೆಟ್ ಪ್ರದರ್ಶನ ಹಾಗೂ ಮಾರಾಟ ಮೇಳ ಹೊಂದಿದೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ (ಶಿವಾನಂದ ವೃತ್ತದ ಬಳಿ)
ಮಾರ್ಚ್ 31ರವರೆಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 7ರ ವರೆಗೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !