ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ತೇರಿನ ಸಂಭ್ರಮದ ಮೆರವಣಿಗೆ

ಸಂಕದಾಳದಲ್ಲಿ ಚಕ್ಕಡಿ ಏರಿ ಮೆರವಣಿಗೆ ತೆರಳಿದ ಬಿಇಒ, ಶಿಕ್ಷಕರು, ಮಕ್ಕಳು
Last Updated 30 ಮೇ 2018, 13:06 IST
ಅಕ್ಷರ ಗಾತ್ರ

ನರಗುಂದ: ತಾಲ್ಲೂಕಿನ ಸಂಕದಾಳದ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ನೇತೃತ್ವದಲ್ಲಿ ವಿಶಿಷ್ಟವಾಗಿ ಶಾಲಾಪ್ರಾರಂಭೋತ್ಸವ ನಡೆಯಿತು.

ಶಾಲಾ ಶಿಕ್ಷಕರು ಹಾಗೂ ಮಕ್ಕಳು ಕೂಡಿಕೊಂಡು ಚಕ್ಕಡಿಯನ್ನು ಅಕ್ಷರ ತೇರಾಗಿ ಪರಿವರ್ತಿಸಿ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದ್ದು ಕಂಡು ಬಂತು.

ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಚ್ಕಕಡಿ ಏರಿ ಎತ್ತುಗಳನ್ನು ಹುರಿದುಂಬಿಸಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖ
ಲಾತಿ ಆಂದೋಲನಕ್ಕೆ ಚಾಲನೆ ನೀಡಿದರು. ಮಕ್ಕಳು ಹಾಗೂ ಶಿಕ್ಷಕರು ಚಕ್ಕಡಿ ಏರಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಘೋಷಣೆ ಕೂಗಿದರು. ಅಕ್ಷರ ಹೊಂದಿದ ಫಲಕಗಳನ್ನು ಹಿಡಿದ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು.

ಅಕ್ಕಿಯಲ್ಲಿ ಅಕ್ಷರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಕಿಯಲ್ಲಿ ಅಕ್ಷರ ಬರೆಯಿಸಿ ಸಾಂಪ್ರದಾಯಿಕವಾಗಿ ಅಕ್ಷರಾಭ್ಯಾಸ ಮಾಡಿಸಲಾಯಿತು.

ಸಮನ್ವಯಾಧಿಕಾರಿ ಶ್ರೀಧರ ಬಡಿಗೇರ, ಮುಖ್ಯಶಿಕ್ಷಕ ಎಸ್‌.ಎಚ್‌.ರಾಯರಡ್ಡಿ, ಹೂಗಾರ, ಸೀನಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT