ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ | ಸೆಸ್‌, ಆಮದು ಸುಂಕ ಹೆಚ್ಚಳ: ಪೆಟ್ರೋಲ್‌, ಡೀಸೆಲ್‌, ಚಿನ್ನ ದುಬಾರಿ

Last Updated 5 ಜುಲೈ 2019, 12:42 IST
ಅಕ್ಷರ ಗಾತ್ರ

ನವದೆಹಲಿ:ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್ ಹೆಚ್ಚಿಸಿ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಪ್ರಕಟಿಸಿದರು.

₹5 ಲಕ್ಷ ವರೆಗಿನ ಆದಾಯ ಗಳಿಕೆದಾರರಿಗೆ ತೆರಿಗೆ ವಿನಾಯಿತಿ ಘೋಷಿಸಿ ತುಸು ಹೊರೆಯನ್ನು ಇಳಿಸಿದ ನಿರ್ಮಲಾ ಸೀತಾರಾಮನ್‌, ಇಂಧನ ಮತ್ತು ಚಿನ್ನದ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದಾಗಿ ಘೋಷಿಸಿದರು.

* ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಳ

* ಚಿನ್ನದ ಮೇಲಿನ ಆಮದು ಸುಂಕ ಶೇ 10ರಿಂದ 12.5ರಷ್ಟು ಹೆಚ್ಚಳ

ಸೆಸ್‌ ಮತ್ತು ಆಮದು ಸುಂಕ ಹೆಚ್ಚಳದಿಂದಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಹೆಚ್ಚಳವಾಗಲಿವೆ.

ಬಜೆಟ್‌ನ ಇತರ ಪ್ರಮುಖ ಅಂಶಗಳು

* 2020ರ ವೇಳೆಗೆ ಭೌತಿಕರಶೀದಿ ವ್ಯವಸ್ಥೆ ರದ್ದಾಗಲಿದೆ

* ನಗದು ವ್ಯವಹಾರ ಕಡಿಮೆ ಮಾಡಲು ಡಿಜಿಟಲ್‌ ವ್ಯವಹಾರಕ್ಕೆ ಒತ್ತು

* ವಿದೇಶದಿಂದ ಆಮದಾಗುವ ಪುಸ್ತಕಗಳಿಗೆ ಶೇ 5ರಷ್ಟು ತೆರಿಗೆ ಹೆಚ್ಚಳ

* ರಕ್ಷಣಾ ಸಾಮಗ್ರಿಗಳಿಗೆ ಕಸ್ಟಮ್ಸ್‌ ತೆರಿಗೆ ರದ್ದು

* ತೆರಿಗೆ ಪಾವತಿಗೆ ಮುಖಾಮುಖಿ ಸಲ್ಲಿಕೆ ಕಡ್ಡಾಯವಲ್ಲ. ಆನ್‌ಲೈನ್‌ನಲ್ಲಿ ಸಲ್ಲಿಸಿದರೆ ಸಾಕು.

* ಜಿಎಸ್‌ಟಿಯಿಂದ 17 ತೆರಿಗೆ ಮತ್ತು 30 ನೀತಿಗಳು ರದ್ದಾಗಿವೆ

* ಇವನ್ನೂ ಓದಿ...

ಬಜೆಟ್‌ ಲೈವ್‌ ಅಪ್‌ಡೇಟ್ಸ್‌ಗಾಗಿhttp://bit.ly/2YB34Wyಲಿಂಕ್ ಕ್ಲಿಕ್ ಮಾಡಿ.

ಬಜೆಟ್‌ನ ಸಮಗ್ರ ಮಾಹಿತಿಗೆhttps://www.prajavani.net/budget-2019ಲಿಂಕ್ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT