ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದ ಶಾಸಕರ ಪೈಕಿ ಒಬ್ಬರು ಬಾಬರ್ ಅಲಿ. ಜಗತ್ತಿನ ಅತಿ ಕಿರಿಯ ಹೆಡ್ ಮಾಸ್ಟರ್ ಎಂದು ತಮ್ಮ ಹದಿನಾರನೇ ವಯಸ್ಸಿಗೇ ಬಿಬಿಸಿಯಿಂದ ಮನ್ನಣೆ ಪಡೆದಿರುವ ಬಾಬರ್ ಅಲಿಯವರ ಯಶೋಗಾಥೆ ಅಚ್ಚರಿ ಹುಟ್ಟಿಸುವಂಥದ್ದು. ಸಮಾಜದಲ್ಲಿ ಬದಲಾವಣೆ ತರಲು ಯಾರಿಂದ ಬೇಕಾದರೂ ಸಾಧ್ಯ; ಆದರೆ, ಅದಕ್ಕೆ ಮನಸ್ಸಿರಬೇಕಷ್ಟೇ ಎಂಬ ಸತ್ಯವನ್ನು ಸಾಬೀತುಪಡಿಸಿದ ವಿಶಿಷ್ಟ ವ್ಯಕ್ತಿ ಇವರು.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನ ಸಾಧಾರಣ ಕುಟುಂಬವೊಂದರ ಹುಡುಗ ಬಾಬರ್. ತಂದೆ ನಾಸಿರುದ್ದೀನ್ ನಿಜವಾದ ಧರ್ಮ ಎಂದರೆ ಶಿಕ್ಷಣ ಅನ್ನುವವರು. ಬಾಬರ್ ಒಂಬತ್ತು ವರ್ಷದ ಹುಡುಗನಾಗಿದ್ದಾಗ ಐದನೇ ತರಗತಿಗೆ ಹತ್ತು ಕಿಲೋಮೀಟರ್ ದೂರದ ಶಾಲೆಗೆ ಸೇರಿಸಿದರು ತಂದೆ. ಉಳಿದ ಮಕ್ಕಳಿಗೆ ಆ ಅನುಕೂಲ ಇರಲಿಲ್ಲ. ಹೀಗಾಗಿ ಶಿಕ್ಷಣದ ಮಹತ್ವ ಗೊತ್ತಿದ್ದ ಬಾಬರ್ಗೆ ತನ್ನ ಸ್ನೇಹಿತರು ಶಾಲೆಗೆ ಹೋಗುವುದನ್ನು ಬಿಟ್ಟು ಕೆಲಸಕ್ಕೆ ಹೋಗುವುದನ್ನು ನೋಡಲು ಬೇಸರವಾಗುತ್ತಿತ್ತು. ತಾನು ಶಾಲೆಯಲ್ಲಿ ಕಲಿತಿದ್ದನ್ನೇ ಇವರಿಗೇಕೆ ಕಲಿಸಬಾರದು ಎಂದೆನಿಸಿತು. ತಡ ಮಾಡದೇ ಶಾಲೆಯ ಆಟ ಆರಂಭಿಸಿದರು. ತಾವು ಹೋಗುತ್ತಿದ್ದ ಶಾಲೆಯ ಕೊಠಡಿಗಳಲ್ಲಿ ಬಿದ್ದಿದ್ದ ಮುರಿದ ಸೀಮೆ ಸುಣ್ಣವನ್ನು ಕೇಳಿ ತೆಗೆದುಕೊಂಡು ಬರುತ್ತಿದ್ದರು. ಬಾಬರ್ ಆರನೇ ತರಗತಿ ಓದುವಾಗ ಒಬ್ಬ ಶಿಕ್ಷಕ, ಬಾಬರ್ ಬೇರೆ ಮಕ್ಕಳಿಗೆ ಕಲಿಸಲು ಮುರಿದ ಸೀಮೆ ಸುಣ್ಣ ತೆಗೆದುಕೊಂಡು ಹೋಗುತ್ತಿರುವುದು ಎಂಬುದು ಗೊತ್ತಾಗಿ ಸೀಮೆಸುಣ್ಣದ ಡಬ್ಬಿಯನ್ನೇ ಕೊಟ್ಟಿದ್ದರು.

ಆಟವಾಗಿ ಆರಂಭವಾಗಿದ್ದು ಸಂಸ್ಥೆಯ ರೂಪ ತಾಳಿದ್ದು ಬಾಬರ್ ಅವರ ಹದಿನಾರನೇ ವಯಸ್ಸಿನಲ್ಲಿ. ಶಾಲೆಯ ಹೆಸರು ಆನಂದ್ ಶಿಕ್ಷಾ ನಿಕೇತನ್. ಮನೆಯ ಹಿತ್ತಿಲೇ ಶಾಲೆಯ ಕೋಣೆ. ಅಮ್ಮನ ಹಳೆಯ ಸೀರೆಯೇ ಮೇಲ್ಚಾವಣೆ. ಆದರೆ, ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪಾಲಕರನ್ನು ಒಪ್ಪಿಸಲು ಬಹಳ ಕಷ್ಟಪಡಬೇಕಾಯಿತು ಬಾಬರ್. ಕಡುಬಡವರಾದ ಜನರಿಗೆ ಶಿಕ್ಷಣದ ಮಹತ್ವವೇ ಗೊತ್ತಿರಲಿಲ್ಲ. ಮಕ್ಕಳು ಶಾಲೆಗೆ ಹೋದರೆ ಅವರು ತರುವ ಕೂಲಿ ಹೋಗುತ್ತದಲ್ಲ ಅನ್ನುವ ಮನೋಭಾವ. ಹುಡುಗಿಯರು ಜಾಸ್ತಿ ಓದಿದರೆ ಗಂಡು ಸಿಗುವುದಿಲ್ಲ ಅನ್ನುವ ಭಯ. ಅವರನ್ನೆಲ್ಲ ಮನವೊಲಿಸಿ ಶಾಲೆಗೆ ಕರೆತಂದರು. ಈ ಮಕ್ಕಳು ತಮ್ಮ ಕೆಲಸ ಮುಗಿಸಿ ಸಂಜೆ ಶಾಲೆಗೆ ಬರಬಹುದಿತ್ತು.

ಒಮ್ಮೆ ಅಲ್ಲಿನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಹೋದಾಗ ಹೆಡ್ ಮಾಸ್ಟರ್ ಎಂದು ಹಿರಿಯ ವ್ಯಕ್ತಿಯನ್ನು ನಿರೀಕ್ಷಿಸುತ್ತಿದ್ದ ಅವರು ಬಾಬರ್ರನ್ನು ನೋಡಿ ಅಚ್ಚರಿಪಟ್ಟರು. ಆಗ ಬಾಬರ್, ‘ಸರ್ ಅದು ನಾನೇ, ಬೆಳಿಗ್ಗೆ ನಾನು ವಿದ್ಯಾರ್ಥಿ, ಸಂಜೆ ಶಿಕ್ಷಕ’ ಅಂದರು. ಖುಷಿಪಟ್ಟ ಜಿಲ್ಲಾಧಿಕಾರಿ ಶಾಲೆಗೆ ಬಹಳಷ್ಟು ಸಹಾಯ ಮಾಡಿದರು. ಜತೆಗೆ ರಾಮಕೃಷ್ಣ ಮಿಶನ್, ಶಿಕ್ಷಕರು, ಐಎಎಸ್ ಅಧಿಕಾರಿಗಳು ಬೇರೆ ಬೇರೆ ರೀತಿಯ ಸಹಾಯ ಮಾಡಿದರು. ಬಾಬರ್ ಸಹಪಾಠಿಗಳು ಬಂದು ಪಾಠ ಮಾಡಿದರು. ಹತ್ತನೇ ತರಗತಿ ಮುಗಿಸಿದ ಬಾಬರ್ರನ್ನು ಸ್ವತಃ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳೇ ಸನ್ಮಾನಿಸಿದರು. ದೃಢ ನಿರ್ಧಾರವಿದ್ದರೆ ನಮ್ಮ ಸುತ್ತಲಿನ ವಾತಾವರಣವನ್ನು ನಾವೇ ಬದಲಾಯಿಸಬಹುದು ಎಂಬುದಕ್ಕೆ ಉದಾಹರಣೆಯಾದರು ಬಾಬರ್. ಇವತ್ತಿಗೂ ಅವರ ಶಾಲೆ ಉಚಿತವಾಗಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.

ಬಾಲ್ಯದಿಂದಲೇ ಸಾವಿರಾರು ಮಕ್ಕಳಿಗೆ ಭರವಸೆಯ ಕಿರಣವಾಗಿದ್ದ ಪುಟ್ಟ ಹಳ್ಳಿಯ ಬಡ ಹುಡುಗ ಬಾಬರ್ ಅಲಿ ಇದೀಗ ಜನಪ್ರತಿನಿಧಿಯಾಗಿದ್ದಾರೆ. ಪ್ರತಿ ಮಗುವಿಗೂ ಶಿಕ್ಷಣ ನೀಡಬೇಕೆಂಬ ಅವರ ಕನಸು ನನಸಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.