ಸುಮ್ಮನೆ ಕೆಲ ದಿನ ಇದ್ದು ಸಮೃದ್ಧವಾಗಿ ಬಾಳಿ ಬದುಕಿ ಹಾಗೇ ಹೋಗಿಬಿಡುವ ಜೀವ ಚೆರ್ರಿ ಹೂಗಳದ್ದು. ಗದ್ದಲವಿಲ್ಲ, ಗಲಾಟೆಯಿಲ್ಲ, ಮಾರುಕಟ್ಟೆಯಲ್ಲಿ ಮಾರಿಕೊಳ್ಳುವುದಿಲ್ಲ, ಕಟ್ಟಲು, ಮುಡಿಯಲು ಸಿಗುವುದಿಲ್ಲ, ಮಣಿಯುವುದಿಲ್ಲ, ಭಾರ ಆಗುವುದಿಲ್ಲ. ಚೆರ್ರಿ ಹೂ ಅಥವಾ ಚೆರ್ರಿ ಬ್ಲಾಸಮ್ ಜೀವನ ವ್ಯಾಖ್ಯಾನಕ್ಕೆ ದಕ್ಕುವುದಿಲ್ಲ. ಇದ್ದಷ್ಟು ದಿನ ಇದ್ದು ಕಣ್ಣರಳಿಸಿ ಎದೆ ಹೊಕ್ಕು ಕವಿತೆ ಹುಟ್ಟಿಸಿ ಹೋಗಿಬಿಡುತ್ತದೆ. ವಸಂತನಿಗೆ ಮುನ್ನುಡಿಯಂಥವಳು ಇವಳು. ಹಗುರ ಹಾರಿ ಉಳಿದು ಎದೆಭಾರದ ನೆನಪು ಉಳಿಸಿ ಹೊರಟುಬಿಡುವ ಚೆಲುವೆ. ಜಪಾನಿನ ರಾಷ್ಟೀಯ ಹೂವಿದು. ಎತ್ತರ ಹರವಿಕೊಂಡ ಮರಗಳಲ್ಲಿ ಮೂಡಿ ಎಲ್ಲರನ್ನೂ ಸ್ವಾಗತಿಸಿ ಮಾಯವಾಗುವ ಮಾಯಗಾತಿ ಇವಳು. ಸಕುರಾ ಎಂದೇ ಕರೆಯಲಾಗುವ ಈ ಹೂಗಳನ್ನು ನೋಡುವುದೇ ಒಂದು ಸಂಭ್ರಮ. ಹನಾಮಿ ಎಂದು ಈ ‘ನೋಡು ಸಂಪ್ರದಾಯ’ದ ಹೆಸರು.

ಉದ್ಯಾನಗಳಲ್ಲಿ ಹಾರಿಬಿದ್ದ ಇವುಗಳ ಪಕಳೆಗಳೇ ಚಾಪೆ. ಕಾಲಿಟ್ಟರೆ ಎಲ್ಲಿ ನಲುಗಿ ಹೋಗುವುದೋ ಎಂದು ಪರಿತಪಿಸಿ ಮೆಲ್ಲನೆ ಹೆಜ್ಜೆ ಇಡಬೇಕಾದ ಸೂಕ್ಷ್ಮ ಕಾಲ.

ಕಾಲದ ನಶ್ವರತೆಯನ್ನು ಪೂರ್ತಿ ಅರ್ಥಮಾಡಿಕೊಂಡಂತೆ ಬಾಳುವ ಚೆರ್ರಿ ಹೂಗಳು ಇದ್ದ ಆಯುಷ್ಯದ ಹದಿನಾಲ್ಕು ದಿನಗಳನ್ನು ಭರಪೂರ ಬಾಳಿ ಹೋಗಿಬಿಡುತ್ತವೆ. ‘ಸೆಲೆಬ್ರೇಟಿಂಗ್ ಎವರಿ ಮೂಮೆಂಟ್’ ಅಂತಾರಲ್ಲ ಹಾಗೆ ಇವು ತಮ್ಮ ಪಾಲಿನ ಬಾಳಿನ ಅನುಕ್ಷಣವನ್ನೂ ಸಂಭ್ರಮಿಸಿಬಿಡುತ್ತವೆ. ನಿಜವಾಗಿ ಬಾಳಿ ಹೊರಟು ಬಿಡುತ್ತವೆ. ಅರ್ಥಪೂರ್ಣವಾಗಿ ಬದುಕುವ ಬಗ್ಗೆ ಚೆರ್ರಿ ಬ್ಲಾಸಮ್ಗಿಂತ ಅನ್ಯ ಉದಾಹರಣೆ ಬೇಕಿಲ್ಲ. ತನಗೆ ಬೇಕಾದ ನೆಲದ ಸಾರವನ್ನು ಹೀರಿ ಚೆಲುವನ್ನು ಸುರಿಸಿ ಪಟ್ಟಂತ ನೆಲಕ್ಕೆ ಬಿದ್ದು ಹದಿನಾಲ್ಕು ದಿನಗಳಲ್ಲಿ ಮರೆಯಾಗುತ್ತವೆ; ಒದ್ದೆ ಕಲೆಗಳನ್ನು ಉಳಿಸಿ. ಇರುವುದೇ ಹದಿನಾಲ್ಕು ದಿನದ ಆಯುಷ್ಯ. ಇನ್ನು ಜೋರಾಗಿ ಗಾಳಿಯೋ, ರಸ್ತೆ ಬದಿಯಲ್ಲಿದ್ದರೆ ರಕ್ಕಸನ ಹಾಗೆ ಓಡುವ ಕಾರು, ಲಾರಿ, ಬಸ್ಸಿನ ರಭಸ, ಬಿರುಸಿಗೆ ಹೂಗಳು ಉದುರಿ ಮರ ಬೋಳಾಗುತ್ತದೆ.

ಕೆಲವರ ಬಾಳೂ ಹೀಗೇ ಅಲ್ಲವೆ? ಬಾಳಿನ ಪ್ರತಿ ಕ್ಷಣವನ್ನು ಭರಪೂರ ಸಂಭ್ರಮಿಸಿ ಪಟ್ಟಂತ ಹೊರಟುಬಿಡುತ್ತಾರೆ. ಶಂಕರ್ನಾಗ್, ಸುನಿಲ್, ದಿವ್ಯಭಾರತಿ, ಸುಷಾಂತ್ ಸಿಂಗ್, ಇರ್ಫಾನ್ ಖಾನ್, ಪುನೀತ್ ರಾಜಕುಮಾರ್, ನಿವೇದಿತಾ ಜೈನ್ ಅನೇಕರು ಹೀಗೆ ಚೆರ್ರಿ ಬ್ಲಾಸಮ್ ತರಹ ಅರಳಿ ಕೆಲದಿನ ಇದ್ದು ಮಾಯವಾದರು. ಷೆಲ್ಲಿ, ಕೀಟ್ಸ್, ಅನ್ನೆ ಫ್ರಾಂಕ್, ಕಲ್ಪನಾ ಚಾವ್ಲಾ, ನಮ್ಮ ಕವಿ ಮುದ್ದಣ ಹೀಗೆ ಚೆರ್ರಿ ಹೂಗಳ ಬಾಳಿನ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಕವಿ, ಚಿಂತಕ, ಕಲಾವಿದರು, ರಾಜಕಾರಣಿಗಳು, ಕ್ರೀಡಾಪಟುಗಳು, ಸೈನಿಕರು ಬಹಳ ಅವಸರದಲ್ಲಿ ಬಂದು ಹೊರಟುಬಿಡುತ್ತಾರೆ. ನಲವತ್ತೆಂಟು ವರ್ಷ ಬಾಳಿದ್ದ ಖಲೀಲ್ ಗಿಬ್ರಾನ್ ಮತ್ತು ನಲವತ್ತೊಂದು ವರ್ಷ ಬಾಳಿದ್ದ ಫ್ರಾಂಜ್ ಕಾಫ್ಕಾ ಅಂಥವರ ಬರಹಗಳು ಚೆರ್ರಿ ಹೂಗಳು ಉಳಿಸಿಹೋಗುವ ಆ ತಣ್ಣೆಳಲ ಮಧುರ ಅನುಭೂತಿಯಷ್ಟೆ ಅನುಪಮವಾದವು. ಇತ್ತ ಹೀಗೆ ಬಂದು ಅತ್ತ ಹಾಗೆ ಹೋದ ಚೈತನ್ಯಗಳು ಅಸಂಖ್ಯಾತ. ಇವರಂತಹ ಜೀವಗಳು, ಸಾಧನೆಗಳು ನಮ್ಮೊಳಗೆ ಅರಳುವ ಚೆರ್ರಿ ಬ್ಲಾಸಮ್ ಅಲ್ಲದೆ ಬೇರೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.