ಒಬ್ಬ ಪರಮಹಂಸರ ಹತ್ತಿರ ಬಂದು, ‘ಸ್ವಾಮಿ, ನಾನು ಜೀವನದಲ್ಲಿ ನೊಂದಿದ್ದೇನೆ. ಬಡತನ; ಹೆಂಡತಿ, ಮಕ್ಕಳ ಕಾಟ ತಡೆಯಲಾಗುತ್ತಿಲ್ಲ. ಸಾವು ಇಲ್ಲವೇ ಸನ್ಯಾಸ ಎರಡೇ ದಾರಿ. ಸಾಯುವುದಕ್ಕೆ ಭಯ. ಅದಕ್ಕೆ ಸನ್ಯಾಸ ತೆಗೆದುಕೊಳ್ಳಬೇಕೆಂದಿರುವೆ’ ಎಂದ. ಅವನ ಮಾತನ್ನು ಕೇಳಿ ಪರಮಹಂಸರು ನಕ್ಕು, ‘ಇದಕ್ಕೆ ನಿನ್ನ ಹೆಂಡತಿ ಮಕ್ಕಳು ಒಪ್ಪುವುದಾದರೆ ನನ್ನ ಅಭ್ಯಂತರ ಏನೂ ಇಲ್ಲ. ಅವರನ್ನು ಕರೆದು ತಾ’ ಎಂದರು.

ವ್ಯಕ್ತಿ ಮಾರನೆಯ ದಿನವೇ ತನ್ನ ಹೆಂಡತಿ ಮಕ್ಕಳೊಂದಿಗೆ ಬಂದ. ಮಕ್ಕಳು ಸಣ್ಣವು. ಒಂದಕ್ಕೆ ಹಸಿವಾದರೆ ಇನ್ನೊಂದಕ್ಕೆ ನೀರಡಿಕೆ. ನಡುವೆ ಅಮಾಯಕಳಾಗಿ ಹೆಂಡತಿ ನಿಂತಿದ್ದಾಳೆ. ಪರಮಹಂಸರಿಗೆ ನಿಜಕ್ಕೂ ಸಂಕಟ ಎನ್ನಿಸಿತು. ಇದಕ್ಕೆಲ್ಲಾ ಪರಿಹಾರವನ್ನು ನೀಡಬೇಕು ಎಂದು ತೀರ್ಮಾನಿಸಿ, ‘ಅಮ್ಮಾ, ನಿನ್ನ ಗಂಡ ಸನ್ಯಾಸವನ್ನು ಸ್ವೀಕರಿಸುತ್ತಾನಂತೆ ನಿನ್ನ ಒಪ್ಪಿಗೆ ಇದೆಯಾ?’ ಎನ್ನುತ್ತಾರೆ. ‘ಇಷ್ಟು ವರ್ಷ ಸಂಸಾರ ಮಾಡಿ ಮಕ್ಕಳನ್ನು ಕೊಟ್ಟು ನನ್ನನ್ನು ಒಂಟಿಯಾಗಿಸಿ ಹೋಗುತ್ತೇನೆ ಎಂದರೆ ಹೇಗೆ? ಮದುವೆಯಾಗುವಾಗಲೇ ನಾನು ಸನ್ಯಾಸ ಸ್ವೀಕರಿಸುತ್ತೇನೆ ಎಂದಿದ್ದರೆ ನಮ್ಮ ತವರಿನವರು ಮದುವೆಯನ್ನೇ ಮಾಡಿಕೊಡುತ್ತಿರಲಿಲ್ಲ’ ಎಂದಳು ಹೆಂಡತಿ. ಕೋಪದಿಂದ ವ್ಯಕ್ತಿ ‘ಗಂಡನ ಮಾತನ್ನು ತೆಗೆದುಹಾಕುವವಳು ಪತಿವ್ರತೆಯಲ್ಲ’ ಎನ್ನುತ್ತಾನೆ. ಅವನನ್ನು ತಡೆಯುತ್ತಾ ಪರಮಹಂಸರು, ‘ನೀನು ಈಕೆಯನ್ನು ಬಯ್ಯುವ ಮೊದಲು ನೀನು ಸರಿಯಾದ ಗಂಡ ಆಗಿದ್ದೀಯಾ ಎನ್ನುವುದನ್ನು ಹೇಳು. ಮದುವೆಯಾಗುವಾಗ ಅವಳಿಗೆ ಕೊಟ್ಟ ಮಾತನ್ನು ನಡೆಸಿದ್ದೀಯಾ ಯೋಚಿಸು’ ಎನ್ನುತ್ತಾರೆ.

‘ನಾನು ಗಂಡಸು. ಇವಳಿಗೆ ಹೇಳಿ ನಿರ್ಧರಿಸಬೇಕೆಂದಿಲ್ಲ. ನೀವೇ ಈ ಎಲ್ಲಾ ಗೊಂದಲಕ್ಕೂ ಮೂಲ. ಸುಮ್ಮನೆ ಸನ್ಯಾಸವನ್ನು ಕೊಟ್ಟುಬಿಟ್ಟಿದ್ದರೆ ಆಗುತ್ತಿರಲಿಲ್ಲವೇ?’ ಎನ್ನುತ್ತಾನೆ. ಪರಮಹಂಸರು, ‘ಕೊಡುತ್ತಿದ್ದೆ. ಸನ್ಯಾಸಿ ದೀಕ್ಷೆ ಕೊಡುವವನಿಗೂ ಒಂದು ಜವಾಬ್ದಾರಿ ಇರುತ್ತದೆ. ನೀನು ಇವಳಿಗೆ ಕೊಟ್ಟ ಮಾತನ್ನು ತಪ್ಪಿಸಿ ಕಷ್ಟಗಳನ್ನು ಮಕ್ಕಳ ಜೊತೆಗೆ ಬಿಟ್ಟು ಹೊರಟುಬಿಟ್ಟರೆ ಹೇಗೆ? ಜೊತೆಯಲ್ಲಿರುವೆ ಎನ್ನುವ ಭರವಸೆಯನ್ನು ಈಡೇರಿಸದೆ ಹೋದರೆ ಯಾವ ದೈವವೂ ನಿನ್ನನ್ನು ಕ್ಷಮಿಸುವುದಿಲ್ಲ. ಇವರನ್ನು ಕಣ್ಣೀರಿಗೆ ತಳ್ಳಿ, ಹಸಿವಿಂದ ನರಳುವಂತೆ ಮಾಡಿ ನೀನು ಸನ್ಯಾಸಿಯಾಗಿ ಏನನ್ನು ಸಾಧಿಸುವೆ?’ ಎನ್ನುತ್ತಾರೆ.

ವ್ಯಕ್ತಿಯು ಕೋಪದಿಂದ, ‘ಹಾಗಾದರೆ ವೈಫಲ್ಯಗಳ ಮಧ್ಯೆ ನಾನು ಜೀವಂತ ಶವವಾಗಿ ಉಳಿಯಬೇಕೆ?’ ಎನ್ನುತ್ತಾನೆ. ‘ನೀನು ವೈಫಲ್ಯಗಳ ಕಾರಣಕ್ಕೆ ಸನ್ಯಾಸ ತೆಗೆದುಕೊಳ್ಳುತ್ತಿರುವೆ ಅಲ್ಲವೇ? ಸನ್ಯಾಸ ಎಂದರೆ ಹಣ, ಮನೆ, ಹೆಂಡತಿ, ಮಕ್ಕಳನ್ನು ಬಿಟ್ಟುಹೋಗುವುದು ಎಂದಲ್ಲ. ಆಸೆಯನ್ನು ಕಿತ್ತೊಗೆಯುವುದು ಎಂದು. ಅಭಾವ ವೈರಾಗ್ಯವು ಸನ್ಯಾಸಕ್ಕೆ ದಾರಿಯಾಗಬಾರದು. ಸನ್ಯಾಸಿಗೆ ಔದಾರ್ಯ ಮುಖ್ಯ. ಅದಕ್ಕಾಗಿ ಸನ್ಯಾಸಿಯಾದ ನಾನೂ ನನ್ನ ಹೆಂಡತಿಯನ್ನು ಒಪ್ಪಿಸಿ ಜೊತೆಯಲ್ಲೇ ಇಟ್ಟುಕೊಂಡಿರುವೆ. ನೀನೂ ಅಷ್ಟೇ. ಕಾಮದಿಂದಲೇ ಆದ ದಾಂಪತ್ಯ ಜೀವನವನ್ನು ಅದರಿಂದ ಮೇಲೆತ್ತಿ ದಿವ್ಯಪ್ರೇಮದ ಕಡೆಗೆ ಹಾಯುವಂತೆ ನೋಡಿಕೋ. ಬರುವ ಕಷ್ಟಗಳಿಗೆ ಜೊತೆಯಾಗಿ ಈಕೆಯನ್ನೂ ಜೋಡೆತ್ತಿನಂತೆ ಕರೆದೊಯ್ಯಿ. ಈಕೆಯ ವಿಶ್ವಾಸವನ್ನು ಗಳಿಸು. ಇವತ್ತು ಬಂದ ಕಷ್ಟ ನಾಳೆಗೆ ಖಂಡಿತಾ ಇರುವುದಿಲ್ಲ. ಆದರೆ, ಒಮ್ಮೆ ತೆಗೆದುಕೊಂಡ ಸನ್ಯಾಸ ಬೇಡ ಎಂದರೆ ಸಂಸಾರಕ್ಕೆ ವಾಪಸ್ ಬರಲಿಕ್ಕಾಗಲ್ಲ’ ಎಂದು ಅವನನ್ನು ಹೆಂಡತಿಯ ಜೊತೆ ಕಳಿಸಿದರಂತೆ.

ದಾಂಪತ್ಯಕ್ಕೆ ಇದಕ್ಕಿಂತ ವ್ಯಾಖ್ಯೆ ಬೇಕೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.