ಎವೆರೆಸ್ಟನ್ನು ಹತ್ತಿ ಸಾಧನೆ ಮಾಡಿ ಬಂದ ಎಡ್ಮಂಡ್ ಹಿಲರಿಯನ್ನು ಸನ್ಮಾನ ಸಭೆಯಲ್ಲಿ ವ್ಯಕ್ತಿಯೊಬ್ಬ ಕೇಳಿದ, ‘ನೀವು ಯಾಕೆ ಇಂಥಾ ಆಪತ್ತನ್ನು ಮೈಮೇಲೆ ಎಳೆದುಕೊಂಡಿರಿ?’ ಹಿಲರಿಗೆ ಇದನ್ನೊಂದು ಸಾಧನೆ ಎಂದು ಅರಿಯದವರೂ ಇರುತ್ತಾರಾ ಎನ್ನಿಸಿ, ‘ನಿಮಗೆ ಏನನ್ನಿಸುತ್ತದೆ’ ಎಂದ. ಆ ವ್ಯಕ್ತಿ, ‘ನೀವು ಒಂದು ಪಕ್ಷ ಯಶಸ್ವಿಯಾಗದೇ ಹೋಗಿದ್ದಲ್ಲಿ ಹಿಮಾಲಯ ನಿಂತೇ ಇರುತ್ತಿತ್ತು. ಜೀವಕ್ಕಿಂತ ದೊಡ್ಡದು ಯಾವುದಿದೆ? ಇದು ಹುಚ್ಚುತನ ಅಂತ ನಿಮಗೆ ಯಾಕೆ ಅನ್ನಿಸಲಿಲ್ಲ’ ಎಂದು ಪ್ರಶ್ನಿಸಿದ.

ಹಿಲರಿ ನಕ್ಕ, ‘ಜಗತ್ತಿನ ಪ್ರತಿಯೊಬ್ಬರೂ ಹುಚ್ಚರೇ- ಒಬ್ಬೊಬ್ಬರಿಗೆ ಒಂದೊಂದು ಹುಚ್ಚು, ಕೆಲವರಿಗೆ ಹಣ ಮಾಡುವ ಹುಚ್ಚು, ಕೆಲವರಿಗೆ ಸಾಮ್ರಾಜ್ಯ ಗೆಲ್ಲುವ ಹುಚ್ಚು. ನನ್ನ ಹುಚ್ಚುತನಕ್ಕೂ ಈ ಜಗತ್ತಿನಲ್ಲಿ ಸಣ್ಣ ಜಾಗ ಇದ್ದೇ ಇರುತ್ತದೆ’ ಎಂದ. ‘ನಾವೇ ಇಲ್ಲವಾದರೆ ಮಾಡುವ ಕೆಲಸವಾದರೂ ಎಲ್ಲಿಯದ್ದು? ನಾವು ಉಳಿದು ಕೆಲಸ ಮಾಡಬೇಕಲ್ಲವೇ?’ ಎಂದ ಆ ವ್ಯಕ್ತಿಗೆ ಹಿಲರಿ ಅವನ ತಂದೆ, ತಾತ, ಮುತ್ತಾತರ ಬಗ್ಗೆ ಕೇಳುತ್ತಾ ಹೋದ. ಆದರೆ, ತಂದೆ ತಾತನ ಹೊರತಾಗಿ ಎಷ್ಟೋ ಹೆಸರುಗಳೇ ಆ ವ್ಯಕ್ತಿಗೆ ಗೊತ್ತಿರಲಿಲ್ಲ. ಹಿಲರಿ ನಕ್ಕ, ‘ಸಾಧನೆ ಎನ್ನುವುದು ದೊಡ್ಡದು. ನಿನ್ನ ಮುತ್ತಜ್ಜ ಅವರಜ್ಜನ ಬಗ್ಗೆ ನಿನಗೆ ಗೊತ್ತಿಲ್ಲ. ಎಂದೋ ಮಹತ್ವದ ವಿಚಾರವನ್ನು ಮಾತಾಡಿದ ಅರಿಸ್ಟಾಟಲ್ ಬಗ್ಗೆ ಅಲೆಗ್ಸಾಂಡರ್ ಥರದ ಮಹನೀಯರನ್ನು ಈಗಲೂ ನೆನೆಯುತ್ತೇವಲ್ಲವೇ?’ ಎಂದ. ವ್ಯಕ್ತಿಗೆ ಕಷ್ಟವಾದರೂ ಹೇಳಿದ, ‘ಅವರಂತೆ ಕೆಲಸ ಮಾಡಿದ ತುಂಬಾ ಜನರ ಬಗ್ಗೆಯೂ ಯಾರೂ ಮಾತಾಡಲ್ಲ’ ಎಂದ.

‘ಕೆಲಸ ಮಾಡುವಾಗ ನಾನು ಇದರಿಂದ ದೊಡ್ಡ ಹೆಸರು ಪಡೆಯುತ್ತೇನೆ. ಇದು ದೊಡ್ಡದಾದ ಸಾಧನೆ ಎನ್ನುವುದು ತಲೆಯಲ್ಲೂ ಇರಬಾರದು. ಆಲೋಚನಾ ಪಥವನ್ನು ಬದಲಿಸುವಂತೆ ಕೆಲಸ ಮಾಡಬೇಕು. ಅದು ಮುಂದಿನ ಜನಾಂಗಕ್ಕೂ ಮಾದರಿ. ನಿನ್ನ ಹಾಗೆ ಎಲ್ಲವೂ ಇದ್ದ ಹಾಗೆ ಇರಲಿ ಎಂದು ಯೋಚಿಸಿದ್ದರೆ ಮನುಷ್ಯ ಶಿಲಾಯುಗದಲ್ಲಿದ್ದಂತೆ ಇರುತ್ತಿದ್ದ. ಪ್ರಕೃತಿ ನಮಗೆ ಬುದ್ಧಿ ಕೊಟ್ಟಿದೆ, ಧೈರ್ಯಮಯ ಮನೋಭಾವವನ್ನು ಕೊಟ್ಟಿದೆ. ಹೊಸ ಅನುಭವದ ತುಡಿತವನ್ನು ಇಟ್ಟಿದೆ. ಎವರೆಸ್ಟ್ ಏರುವಾಗ ನಾನು ಮೊದಲನೆಯವನೋ ಕಡೆಯವನೋ ಎನ್ನುವುದು ಮುಖ್ಯವಾಗಿರಲಿಲ್ಲ. ನನಗಿದ್ದ ಕುತೂಹಲ ಎಲ್ಲ ಶಿಖರವನ್ನು ಏರಿದ ನಂತರ ಅದಕ್ಕೂ ಮೇಲೆ ಎತ್ತರದ ಶಿಖರಗಳು ಕಾಣುತ್ತಿದ್ದವು. ಎವರೆಸ್ಟ್ ಏರಿದ ಮೇಲೂ ಇನ್ಯಾವ ಶಿಖರ ಇದಕ್ಕಿಂತ ಎತ್ತರದ್ದು ಕಾಣುತ್ತದೆಂಬ ಕುತೂಹಲವಿತ್ತು. ನೀನಿದನ್ನು ಹುಚ್ಚು ಎಂದರೆ ನಾನೇನು ಮಾಡಲಿ’ ಎಂದ ಹಿಲರಿ.

ನಿಜ. ಹಿಮಾಲಯ ಪರ್ವತ ಶ್ರೇಣಿಗಳು ಅಲ್ಲೇ ಇದ್ದವು, ಪ್ರಕೃತಿಯ ನಿಗೂಢತೆಯ ಸಂಕೇತವಾಗಿ. ಅದನ್ನು ಹತ್ತಲಿಲ್ಲ ಅಂದರೆ ಅದಕ್ಕೆ ಯಾವ ನಷ್ಟವೂ ಇಲ್ಲ. ಮನುಷ್ಯ ಅದರಲ್ಲಿ ಕುತೂಹಲಿಯಾದಾಗ ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಹಿಲರಿಗೆ ಆಗಿದ್ದೂ ಅದೇ. ಸಕ್ರಿಯವಾಗಿರುವ ವ್ಯಕ್ತಿ ಸದಾ ಕೆಲಸಗಳ ಹುಡುಕಾಟದಲ್ಲಿ ತೊಡಗಿರುತ್ತಾನೆ. ಅವನ್ನು ಸಾಧಿಸದೆ ಹೋದರೆ ಅವನ ಬದುಕು ಅಸಹನೀಯವಾಗುತ್ತದೆ. ಜೀವನದ ಭಾಗವೇ ಆದ ಅದನ್ನು ಪಡೆಯುವುದು ಸಮಸ್ಯೆ ಎಂದು ಕರೆಯಲಾಗದು. ಕೆಲಸದಲ್ಲಿ ತಲ್ಲೀನನಾಗುವುದು ಎಂದರೆ ತನ್ನನ್ನು ತಾನು ಮರೆಯುವುದು ಎಂದು. ಅದು ಹುಚ್ಚಲ್ಲ. ಅಂಥಾ ಕೆಲಸವನ್ನು ನೆನೆಪಿಟ್ಟುಕೊಂಡರೆ ಅದು ನಾವು ಕೆಲಸಕ್ಕೆ ತೋರಿದ ಶ್ರದ್ಧೆಗೆ ಜಗತ್ತು ನೀಡುವ ಗೌರವ ಎಂದೇ ಭಾವಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.