ಒಂದು ಹುಣ್ಣಿಮೆಯ ರಾತ್ರಿ ಕೆಲವು ಜನ ಬೆಸ್ತರು ಕಂಠಪೂರ್ತಿ ಹೆಂಡ ಕುಡಿದು ದೂರದ ದ್ವೀಪಕ್ಕೆ ಹೋಗಬೇಕೆಂದು ದೋಣಿಯೇರಿ ಕುಳಿತರು. ಇಬ್ಬರು ಒಂದೇ ಸಮನೆ ಹುಟ್ಟುಗೋಲು ಹಾಕಿ ದೋಣಿಯನ್ನು ನಡೆಸತೊಡಗಿದರು. ಕುಡಿದ ಆವೇಶದಲ್ಲಿ ಅವರು ಇಡೀ ರಾತ್ರಿ ಹುಟ್ಟುಗೋಲು ಹಾಕಿದರು. ಬೆಳಕು ಹರಿಯತೊಡಗಿದಂತೆ ಅವರ ನಶೆಯೂ ಇಳಿಯತೊಡಗಿತು. ಬೆಳಗಾಗುತ್ತಲೇ ಇನ್ನೇನು ಆ ದ್ವೀಪ ಬಂದಿರಬೇಕೆಂದು ಕಣ್ಣುಜ್ಜಿ ನೋಡುತ್ತಾರೆ, ಅರೇ… ಇದೇನಿದು, ರಾತ್ರಿ ಹೊರಟ ಕಡಲ ಕಿನಾರೆಯಲ್ಲಿಯೇ ಇದೆ ಅವರ ದೋಣಿ. ಗೂಟದಿಂದ ಅವರು ಆ ದೋಣಿಯನ್ನು ಬಿಚ್ಚಿಯೇ ಇರಲಿಲ್ಲ. ಗುರುದೇವ ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದ ಕಥೆ ಇದು.

ದೋಣಿಯನ್ನು ಕಟ್ಟಿಹಾಕಿದ ಗೂಟದಿಂದ ಬಿಚ್ಚದೇ ಎಷ್ಟೇ ಹುಟ್ಟುಗೋಲು ಹಾಕಿದರೂ ಅದು ಹೇಗೆ ವ್ಯರ್ಥವೋ ಹಾಗೆಯೇ ಅಂತರಂಗದಿಂದ ಉಚ್ಚರಿಸದೇ ಯಾಂತ್ರಿಕವಾಗಿ ಬಾಯಲ್ಲಿ ಮಂತ್ರವನ್ನು ಎಷ್ಟೇ ಮಣಮಣಿಸಿದರೂ ವ್ಯರ್ಥವೇ ಎಂದು ಅವರು ಹೇಳುತ್ತಾರೆ.

ಮೋಟಾರು ಗಾಡಿಗೆ ಪೆಟ್ರೋಲ್ ತುಂಬಿಸಿಕೊಂಡಾಗ ಗಾಡಿ ಓಡುತ್ತದೆ. ಅದೇ ರೀತಿ ಜಪದ ಮೂಲಕ, ಧ್ಯಾನದ ಮೂಲಕ ನಮ್ಮ ಅಂತಃಶಕ್ತಿಯನ್ನು ಉದ್ದೀಪಿಸಿಕೊಳ್ಳುವುದರಿಂದ ನಮ್ಮ ಜೀವನದ ಗಾಡಿಯೂ ಓಡುತ್ತಿರುತ್ತದೆ ಮತ್ತು ಆ ಜಪ, ಧ್ಯಾನದ ಮೂಲಕ ನಮ್ಮನ್ನು ಪಾಲಿಸುತ್ತಿರುವ ಆ ದೇವರೆಂಬ ತತ್ವಕ್ಕೆ ಧನ್ಯವಾದಗಳನ್ನು ಅರ್ಪಿಸುವುದು ನಮ್ಮ ಮನುಷ್ಯರ ಕರ್ತವ್ಯವಾಗಿದೆ ಎನ್ನುತ್ತಾರೆ ಗುರುಗಳು.

ಈ ಮಾತು ಕೇವಲ ಜಪ ತಪಕ್ಕೇ ಸೀಮಿತವಾಗಿಲ್ಲ. ನಾವದನ್ನು ದಿನನಿತ್ಯದ ಬದುಕಿನಲ್ಲಿಯೂ ಅಳವಡಿಸಿಕೊಳ್ಳುವುದರಿಂದ ಲಾಭವೇ ಹೊರತು ನಷ್ಟವೇನಿಲ್ಲ. ಅದು ಕಚೇರಿಯಾಗಿರಲಿ ಅಥವಾ ಸ್ವಂತದ ಕೆಲಸವಾಗಿರಲಿ ಮಾಡುವ ಕೆಲಸವನ್ನು ತಪಸ್ಸಿನಂತೆ ಮಾಡಿದಾಗ ಅದರ ಫಲ ಆಶ್ಚರ್ಯಪಡುವಷ್ಟು ಮಧುರವಾಗಿರುತ್ತದೆ. ಯಾವತ್ತೂ ಸ್ವಂತ ಉದ್ಯಮವನ್ನು ಮಾಡದ ವ್ಯಕ್ತಿಯೊಬ್ಬ ಒಂದು ಕಾರ್ಖಾನೆಯನ್ನೋ, ಗಿರಣಿಯನ್ನೋ, ಕಿರಾಣಿ ಅಂಗಡಿಯನ್ನೋ ಅಥವಾ ಯಂತ್ರಗಳ ಬಿಡಿ ಭಾಗಗಳ ಅಂಗಡಿಯನ್ನೋ ಹಾಕಿದ್ದಾನೆಂದುಕೊಳ್ಳಿ. ಅದು ಒಮ್ಮೆಲೇ ಲಾಭವನ್ನು ಸೃಷ್ಟಿಸಿಕೊಡುವುದಿಲ್ಲ. ಆರಂಭದಲ್ಲಿ ನಷ್ಟವಾಗಬಹುದು, ಹಾಕಿದ ಹಣವೂ ಬಾರದೇ ಕೈಸುಟ್ಟುಕೊಳ್ಳಬಹುದು. ಆದರೆ, ನಿರಂತರವಾದ ಪರಿಶ್ರಮದಿಂದ ಮಾಡುವ ಕೆಲಸದಲ್ಲಿ ಎಷ್ಟೇ ಅಡ್ಡಿ ಆತಂಕಗಳು ಬಂದರೂ ಅವರು ನಿಲ್ಲುವುದಿಲ್ಲ. ನಡೆಯುವ ಹಾದಿಯನ್ನು ಬದಲಿಸುವುದಿಲ್ಲ. ದೇವರು ಕೊಡುವ ಎಲ್ಲಾ ಕಷ್ಟಗಳೂ ಯಶಸ್ಸಿನ ಮೆಟ್ಟಲುಗಳೆಂದೇ ಸಹಿಸಿಕೊಂಡು ಕೆಲಸ ಮಾಡುತ್ತಿದ್ದರೆ ಯಶಸ್ಸು ಒಂದಿನ ಕದ ತಟ್ಟುತ್ತದೆ. ಅಂತಹ ಕಠಿಣ ಸಮಯದಲ್ಲಿ ಸಾಕಪ್ಪಾ ಎಂದು ಕೈಚೆಲ್ಲುವ ಮನಸ್ಸೂ ಚಂಚಲವಾಗಬಹುದು. ಆದರೆ ತಪಸ್ಸಿನಂತೆ ದೃಢತೆಯಿಂದ ಮಾಡುವ ಕಾರ್ಯದಲ್ಲಿ ಸೋಲು ಎಂಬುದಿಲ್ಲ. ಕಗ್ಗತ್ತಲ ಸುರಂಗದ ಆಚೆ ಬೆಳಕು ಇದ್ದೇ ಇದೆ.

ಬಿತ್ತಿದ ಒಂದು ಕೇಜಿ ಬೀಜವು ನೂರು ಕೆ.ಜಿ ಫಸಲನ್ನು ಕೊಡುವಂತೆ ನಾವು ಆರಂಭಿಸುವ ಸಣ್ಣ ಹೆಜ್ಜೆಯೂ ಹತ್ತಾರು ಮೈಲುಗಳ ದೂರವನ್ನು ಕ್ರಮಿಸಬಹುದು. ನೆಡುವ ಒಂದು ಮರವೂ ಹೆಮ್ಮರವಾಗಿ ನೂರಾರು ಜನರಿಗೆ ನೆರಳು ನೀಡಬಹುದು. ಯಾವ ಪ್ರಯತ್ನವನ್ನೂ ಮಾಡದೇ ಗೂಟಕ್ಕೆ ಕಟ್ಟಿದ ದೋಣಿಯನ್ನು ಬಿಚ್ಚದೇ ದೋಣಿ ಸಾಗುವುದಾದರೂ ಹೇಗೆ? ಇದನ್ನೇ ಶರಣರು ‘ಕಾಯಕವೇ ಕೈಲಾಸ’ ಎಂದರು. ಹತ್ತು ಬೆರಳುಗಳನ್ನು ದುಡಿಸಿ ಐದು ಬೆರಳುಗಳಿಂದ ಉಣ್ಣು ಎಂದರು ಹಿರಿಯರು. ಜಪ, ತಪ, ಧ್ಯಾನಗಳಂತೆಯೇ ಪರಿಶ್ರಮವೂ ಮನುಷ್ಯನಿಗೆ ದೇವರು ನೀಡಿದ ವರದಾನವೇ ಹೊರತು ಶಾಪವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.